For Quick Alerts
ALLOW NOTIFICATIONS  
For Daily Alerts
 

IPL: ಆರ್‌ಸಿಬಿ ಪರ ಆಡುವ ಬಯಕೆ ವ್ಯಕ್ತಪಡಿಸಿದ ಪಾಕಿಸ್ತಾನದ ವೇಗಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಐಪಿಎಲ್‌ನಲ್ಲಿ ಆಡುವ ಕನಸು ಎಲ್ಲಾ ದೇಶಗಳ ಕ್ರಿಕೆಟಿಗರಿಗೆ ಇರುತ್ತದೆ. ಏಕೆಂದರೆ ಈ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಆಡುವ ಮೂಲಕ ಆಟಗಾರರು ಪ್ರಪಂಚದಾದ್ಯಂತ ಹಣದ ಜೊತೆಗೆ ಖ್ಯಾತಿಯನ್ನು ಗಳಿಸುತ್ತಾರೆ. ಈ ಲೀಗ್‌ನಲ್ಲಿ ಪಾಕಿಸ್ತಾನದ ಕ್ರಿಕೆಟಿಗರು ಆಡುವುದನ್ನು ನಿಷೇಧಿಸಲಾಗಿದೆ. ಆದರೆ, ಐಪಿಎಲ್‌ನಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಆಡುವುದನ್ನು ನಿಷೇಧಿಸಿದೆ. 2008ರಲ್ಲಿ ಮಾತ್ರ, 11 ಪಾಕಿಸ್ತಾನದ ಆಟಗಾರರು ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಆಡಿದ್ದರು. 2009 ರಲ್ಲಿ ಪಾಕಿಸ್ತಾನ ಪ್ರವಾಸ ಮಾಡಿದ್ದ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿ ಮತ್ತು ಮುಂಬೈನಲ್ಲಿ ನಡೆದ ಘಟನೆಯ ನಂತರ, ಯಾವುದೇ ಪಾಕಿಸ್ತಾನದ ಕ್ರಿಕೆಟಿಗನನ್ನು ಐಪಿಎಲ್‌ನಲ್ಲಿ ಆಡಿಸದಿರಲು ಬಿಸಿಸಿಐ ನಿರ್ಧರಿಸಿತ್ತು.

Mohammad Amir expressed his desire to play for RCB in IPL

ಇದೀಗ ಪಾಕಿಸ್ತಾನ ತಂಡ ಮಾಜಿ ಎಡಗೈ ವೇಗದ ಬೌಲರ್ ಮೊಹಮ್ಮದ್ ಆಮೀರ್ 2026 ರಲ್ಲಿ ಐಪಿಎಲ್ ನಲ್ಲಿ ಆಡಲು ಅರ್ಹತೆ ಪಡೆಯುವುದಾಗಿ ಹೇಳಿದ್ದಾರೆ. ಅವಕಾಶ ಸಿಕ್ಕರೆ ಆರ್ಹತೆ ಪಡೆಯಲು ಪ್ರಯತ್ನಿಸುತ್ತೇನೆ. ಇತ್ತೀಚೆಗೆ ಪಾಕಿಸ್ತಾನದ ನಡೆದ ಕಾರ್ಯಕ್ರಮವೊಂದರಲ್ಲಿ ಆಮಿರ್ ಈ ಬಗ್ಗೆ ಮಾತನಾಡಿದ್ದಾರೆ. 'ಮುಂದಿನ ವರ್ಷದ ವೇಳೆಗೆ ನಾನು ಐಪಿಎಲ್ ಆಡಲಿದ್ದೇನೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್, ಇಂಗ್ಲೆಂಡ್ ಪೌರತ್ವ ಪಡೆದು 2012 ಮತ್ತು 2013ರ ಐಪಿಎಲ್ ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ಪರ ಮತ್ತು ಐಪಿಎಲ್ 2015ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್) ಪರ ಆಡಿದ್ದರು. ಮೊಹಮ್ಮದ್ ಆಮಿರ್ ಅವರ ಪತ್ನಿ ನರ್ಜೀಸ್ ಖಾತೂನ್ ಬ್ರಿಟಿಷ್ ಪ್ರಜೆಯಾಗಿದ್ದು, ಅವರು ಶೀಘ್ರದಲ್ಲೇ ಬ್ರಿಟಿಷ್ ಪಾಸ್‌ಪೋರ್ಟ್ ಪಡೆಯುವ ನಿರೀಕ್ಷೆಯಿದೆ. ಇದು ಐಪಿಎಲ್‌ನಲ್ಲಿ ಆಡಲು ಅವರಿಗೆ ಬಾಗಿಲು ತೆರೆಯುವ ಸಾಧ್ಯತೆಯಿದೆ. ಮೊಹಮ್ಮದ್ ಆಮಿರ್ ಅವರನ್ನು ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಕ್ಕರೆ ನೀವು ಯಾವ ತಂಡಕ್ಕಾಗಿ ಆಡಲು ಬಯಸುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಮೊಹಮ್ಮದ್ ಆಮಿರ್‌ರಂತಹ ಬೌಲರ್ ಅಗತ್ಯವಿದೆ. ಅವರು ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ನೆರವಾಗಬಹುದು. ಆರ್‌ಸಿಬಿ ಬೌಲಿಂಗ್ ಸಮಸ್ಯೆಯನ್ನು ಸರಿಪಡಿಸಲು ಮೊಹಮ್ಮದ್ ಆಮಿರ್‌ರಂತಹ ಬೌಲರ್ ಅಗತ್ಯವಿದೆ. ಆರ್‌ಸಿಬಿ ಬ್ಯಾಟಿಂಗ್ ವಿಭಾಗ ಚೆನ್ನಾಗಿದೆ, ಆದರೆ ಬೌಲಿಂಗ್ ಯಾವಾಗಲೂ ಸಮಸ್ಯೆಯೇ. ಮೊಹಮ್ಮದ್ ಆಮಿರ್ ಆರ್‌ಸಿಬಿ ಪರ ಆಡಿದರೆ, ಅವರು ಪ್ರಶಸ್ತಿ ಗೆಲ್ಲಿಸಬಲ್ಲರು ಎಂದು ಪಾಕಿಸ್ತಾನದ ಬ್ಯಾಟರ್ ಅಹ್ಮದ್ ಶೆಹಜಾದ್ ಹೇಳಿದ್ದಾರೆ.

ಮೊಹಮ್ಮದ್ ಆಮಿರ್ ಜೂನ್ 7, 2009 ರಂದು ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಪಾಕಿಸ್ತಾನ ಪರ ಮೊಹಮ್ಮದ್ ಅಮೀರ್ 36 ಟೆಸ್ಟ್, 61 ಏಕದಿನ ಮತ್ತು 62 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 119, 81 ಮತ್ತು 71 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಯೂನಿಸ್ ಖಾನ್ ನಾಯಕತ್ವದಲ್ಲಿ 2009 ರಲ್ಲಿ ಟಿ20 ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ಭಾಗವಾಗಿದ್ದರು. ಸರ್ಫರಾಜ್ ಅಹ್ಮದ್ ನಾಯಕತ್ವದಲ್ಲಿ 2017 ರ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಪಾಕಿಸ್ತಾನ ಗೆಲ್ಲುವಲ್ಲಿ ಮೊಹಮ್ಮದ್ ಆಮಿರ್ ಪ್ರಮುಖ ಪಾತ್ರವಹಿಸಿದ್ದರು.

Story first published: Saturday, March 8, 2025, 14:58 [IST]
Other articles published on Mar 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+