ಮಗುವಿನ ನಿರೀಕ್ಷೆಯಲ್ಲಿ ಹ್ಯಾರಿಸ್, ಪಾಕಿಸ್ತಾನ ತಂಡದಲ್ಲಿ ಅಮೀರ್‌ಗೆ ಸ್ಥಾನ

ಲಂಡನ್, ಜುಲೈ 20: ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ಪಾಕಿಸ್ತಾನ ತಂಡದಲ್ಲಿ ಎಡಗೈ ವೇಗಿ ಮೊಹಮ್ಮದ್ ಅಮೀರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಮೀರ್ ಅವರು ಹ್ಯಾರಿಸ್ ರೌಫ್ ಅವರ ಬದಲಿಗೆ ತಂಡ ಸೇರಿಕೊಳ್ಳಲಿದ್ದಾರೆ. ಪಾಕ್ ತಂಡವೀಗ ಇಂಗ್ಲೆಂಡ್‌ನಲ್ಲಿದೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಹ್ಯಾರೀಸ್ ರೌಫ್ ಟಿ20ಐ ಸರಣಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ರೌಫ್ ಬದಲು ತಂಡ ಸೇರಿಕೊಳ್ಳಲು ಮೊಹಮ್ಮದ್ ಅಮೀರ್ ಒಪ್ಪಿಕೊಂಡಿದ್ದಾರೆ. ಆದರೆ ಇಂಗ್ಲೆಂಡ್‌ಗೆ ಪ್ರಯಾಣ ಹೊರಡುವುದಕ್ಕೂ ಮುನ್ನ ಅಮೀರ್, 2 ಬಾರಿ ಕೋವಿಡ್ 19 ಟೆಸ್ಟ್‌ಗೆ ಒಳಗಾಗಬೇಕಿದೆ. ಇದರಲ್ಲಿ ನೆಗೆಟಿವ್ ಬಂದ ಮೇಲಷ್ಟೇ ಅಮೀರ್ ಇಂಗ್ಲೆಂಡ್‌ಗೆ ಬರಲಿದ್ದಾರೆ.
ಇಸ್‌ಪಿಎನ್ ಕ್ರಿಕ್ ಇನ್ಫೋ ವರದಿಯ ಪ್ರಕಾರ, ಜುಲೈ 20ರ ಸೋಮವಾರ ಅಮೀರ್ ಮೊದಲನೇ ಕೊರೊನಾವೈರಸ್ ಪರೀಕ್ಷೆಗೆ ಒಳಗಾಗಿದ್ದಾರೆ. ಇನ್ನೆರಡು ದಿನಗಳ ಬಳಿಕ ಮೊಹಮ್ಮದ್ ದ್ವಿತೀಯ ಪರೀಕ್ಷೆಗೆ ಒಳಗಾಗಿಲಿದ್ದಾರೆ. ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದರೆ, ಅಮೀರ್ ಪಾಕ್ ಟಿ20 ತಂಡದ ಪರ ಆಡಲಿದ್ದಾರೆ. ಟಿ20 ಸರಣಿ ಆಗಸ್ಟ್ 28ರಿಂದ ಆರಂಭಗೊಳ್ಳಲಿದೆ.
ಪಾಕಿಸ್ತಾನ ತಂಡದ ಇಂಗ್ಲೆಂಡ್ ಪ್ರವಾಸ ಸರಣಿಯು 3 ಟೆಸ್ಟ್ ಪಂದ್ಯಗಳು ಮತ್ತು 3 ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಟೆಸ್ಟ್ ಸರಣಿ ಆಗಸ್ಟ್ 5ರಿಂದ ಆರಂಭಗೊಳ್ಳಲಿದೆ. ಸದ್ಯ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಇತ್ತ ಪಾಕ್, ಟೆಸ್ಟ್‌ಗಾಗಿ ಆಂತರಿಕ ಅಭ್ಯಾಸ ಪಂದ್ಯವನ್ನಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications