ಟಿ20 ವಿಶ್ವಕಪ್ 2026 ಸೆಮಿಫೈನಲ್ ಪ್ರವೇಶಿಸುವ ತಂಡಗಳನ್ನ ಹೆಸರಿಸಿದ ಪಾಕ್ ಮಾಜಿ ಕ್ರಿಕೆಟಿಗ
Mohammad Amir: ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಟೀಂ ಇಂಡಿಯಾ ಇದುವರೆಗೂ ಆಡಿದ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿ ಸೂಪರ್ 8ಕ್ಕೆ ಅರ್ಹತೆ ಪಡೆದಿದೆ. ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಸೆಮಿಫೈನಲ್ ಪ್ರವೇಶಿಸುವ ತಂಡಗಳು ಯಾವುವು ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಮತ್ತೊಮ್ಮೆ ಅಚ್ಚರಿ ಹೇಳಿಕೆಯಿಂದ ಟೀಂ ಇಂಡಿಯಾ ತಂಡದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇತ್ತೀಚೆಗಷ್ಟೇ ಭಾರತ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರನ್ನು 'ಸ್ಲಾಗರ್' ಎಂದು ಕರೆಯುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಅಮೀರ್, ಇದೀಗ ಟಿ20 ವಿಶ್ವಕಪ್ ಸೆಮಿಫೈನಲ್ ಬಗ್ಗೆ ಅಚ್ಚರಿ ಭವಿಷ್ಯ ನುಡಿದು ಸುದ್ದಿಯಲ್ಲಿದ್ದಾರೆ.

ಸೂಪರ್ 8 ಹಂತ ಮುಗಿದ ಬಳಿಕ, ಪ್ರತಿ ಗುಂಪಿನಿಂದ ಸೆಮಿಫೈನಲ್‌ಗೆ ಯಾವ ಎರಡು ತಂಡಗಳು ಅರ್ಹತೆ ಪಡೆಯುತ್ತವೆ ಎಂದು ಅಮೀರ್ ಅವರನ್ನು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅವರು, "ಭಾರತ ತಂಡ ಸೆಮಿಫೈನಲ್‌ಗೆ ತಲುಪುವುದಿಲ್ಲ. ಬದಲಿಗೆ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿವೆ," ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರ ಈ ಹೇಳಿಕೆ ಇದೀಗ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಭಾರತ ತಂಡ ಉತ್ತಮ ಫಾರ್ಮ್‌ನಲ್ಲಿರುವ ಸಂದರ್ಭದಲ್ಲೇ ಅಮೀರ್ ನೀಡಿದ ಈ ಹೇಳಿದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗಷ್ಟೇ ಟೀಂ ಇಂಟಿಯಾದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರನ್ನು "ಸ್ಲಾಗರ್" ಎಂದು ಕರೆದಿದ್ದ ಮೊಹಮ್ಮದ್ ಅಮೀರ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೆ ಭಾರತ ಸೆಮಿಫೈನಲ್ ತಲುಪುವುದಿಲ್ಲ ಎನ್ನುವ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಸೆಮಿಫೈನಲ್ ಪ್ರವೇಶಿಸುವ ತಂಡಗಳನ್ನ ಹೆಸರಿಸಿದ ಅಮೀರ್
"ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಹೊರತುಪಡಿಸಿದರೆ, ಭಾರತ ತಂಡದ ಬ್ಯಾಟಿಂಗ್ ಲೈನ್-ಅಪ್ ಪ್ರತಿಯೊಂದು ಪಂದ್ಯದಲ್ಲೂ ಕುಸಿತ ಕಂಡಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಆಡುತ್ತಿರುವ ರೀತಿಯನ್ನು ನೋಡಿದರೆ, ಅವು ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿವೆ," ಎಂದು ಭವಿಷ್ಯ ನುಡಿಸಿದ್ದಾರೆ.
ಆಭಿಷೇಕ್ ಶರ್ಮಾ ಸ್ಲಾಗರ್ ಮಾತ್ರ
"ನಾನು ನೋಡಿರುವಷ್ಟು ಹೇಳಬೇಕೆಂದರೆ, ನನಗೆ ಅನಿಸುವುದು ಆಭಿಷೇಕ್ ಶರ್ಮಾ ಕೇವಲ ಸ್ಲಾಗರ್ ಮಾತ್ರ. ಅವರು ಪ್ರತಿ ಎಸೆತದಲ್ಲಿ ಬಿಗ್ ಶಾಟ್ ಹೊಡೆಯಲು ಹೋಗುತ್ತಾರೆ. ಅವನಿಗೆ ದಿನ ಒಳ್ಳೆಯದಾಗಿದ್ದರೆ ಸರಿ, ಇಲ್ಲವಾದರೆ ವಿಫಲವಾಗುವ ಸಾಧ್ಯತೆಗಳು ಹೆಚ್ಚು. 8 ಇನ್ನಿಂಗ್ಸ್‌ಗಳಲ್ಲಿ ಒಂದರಲ್ಲಿ ಮಾತ್ರ ಬಿಗ್ ಸ್ಕೋರ್ ಮಾಡುತ್ತಾರೆ. ಉಳಿದ ಪಂದ್ಯಗಳಲ್ಲಿ 10, 15, 0 ಮತ್ತು 20 ರನ್‌ಗಳಾಗಿವೆ. ಅಭಿಷೇಕ್ ಉತ್ತಮ ಸಾಮರ್ಥ್ಯ ಹೊಂದಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಅಮೀರ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
"ಅಭಿಷೇಕ್ ಶರ್ಮಾ ಮೂರು ಪಂದ್ಯಗಳಲ್ಲಿ ಯಾವುದೇ ರನ್ ಗಳಿಸದರೆ ಶೂನ್ಯಕ್ಕೆ ಡಕ್‌ಔಟ್ ಆಗಿದ್ದಾರೆ. ಇದರಿಂದ ಗೊತ್ತಾಗುತ್ತದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ದುರ್ಬಲತೆ ಎಷ್ಟಿದೆ ಎಂದು ಅಮೀರ್ ಟೀಕೆ ಮಾಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಹಾಗೂ ಅಭಿಷೇಕ್ ಶರ್ಮಾ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
'ಸೈಮ್ ಅಯೂಬ್ ತುಂಬಾ ಸುಧಾರಿಸಬೇಕು'
"ಸೈಮ್ ಅಯೂಬ್ ಕೆಲ ವರ್ಷಗಳ ಹಿಂದೆ ಪಿಎಸ್‌ಎಲ್ ಆಡಲು ಬಂದಾಗ ಅವನಿಗೂ ಇದೇ ಸಮಸ್ಯೆ ಇತ್ತು. ಅವನು ಹೊಸ ಆಟಗಾರನಾಗಿದ್ದು, ಎಲ್ಲಾ ಬಾಲ್‌ಗಳನ್ನು ಶಾಟ್ ಮಾಡಲು ಪ್ರಯತ್ನಿಸುತ್ತಿದ್ದ. ಅವನ ದುರ್ಬಲತೆ ಯಾರಿಗೂ ಗೊತ್ತಿರಲಿಲ್ಲ. ಕೊನೆಯ ಎರಡು ಪಂದ್ಯಗಳಲ್ಲೂ ಆಫ್‌ಸೈಡ್‌ನಲ್ಲಿ ಶಾಟ್ ಹೊಡೆಯಲು ಹೋಗಿ ಔಟ್ ಆಗಿದ್ದಾನೆ. ಆಫ್‌ಸೈಡ್‌ನಲ್ಲಿ ಆಡಲು ಸುಧಾರಿಸದಿದ್ದರೆ, ಮುಂದಿನ ದಿನಗಳಲ್ಲಿ ಉತ್ತಮ ಆಟಗಾರ ಆಗಲು ಸಾಧ್ಯವಿಲ್ಲ. ಬಲಿಷ್ಠ ಬೌಲರ್‌ಗಳು ಯಾವಾಗಲೂ ದುರ್ಬಲತೆಯನ್ನು ಗಮನಿಸುತ್ತಾರೆ ಎಂಬುದನ್ನಯ ಮರೆಯಬಾರದು," ಎಂದು ಸೈಮ್ ಅಯೂಬ್‌ಗೆ ಅಮೀರ್ ಹೇಳಿದ್ದಾರೆ.
ಅಭಿಷೇಕ್ ದುರ್ಬಲತೆ ಬಗ್ಗೆ ಮಾತನಾಡಿದ ಅಮೀರ್
"ಅಭಿಷೇಕ್ ವಿಚಾರವೂ ಇದೇ ರೀತಿಯಾಗಿದೆ. ಅವರು ಸಹ ಪ್ರತಿಯೊಂದು ಬಾಲ್‌ಗಳನ್ನು ಬಿಗ್ ಶಾಟ್ ಹೊಡೆಯಲು ಪ್ರಯತ್ತಿಸುತ್ತಾರೆ. ಆದರೆ, ಏಕದಿನ ಪಂದ್ಯಗಳಲ್ಲಿ ಪ್ರತಿಯೊಂದು ಚೆಂಡನ್ನೂ ಬಲವಾಗಿ ಹೊಡೆಯಲು ಸಾಧ್ಯವಿಲ್ಲ. ಒತ್ತಡದ ಸಂದರ್ಭಗಳಲ್ಲಿ ಹೀಗೆ ಆಡಿದರೆ ಕಷ್ಟವಾಗುತ್ತದೆ. ಸಲ್ಮಾನ್ ಅಘಾ ಮತ್ತು ಆರ್ಯನ್ ದತ್ ಇಬ್ಬರೂ ಅವನನ್ನು ಒಂದೇ ರೀತಿಯಲ್ಲಿ ಔಟ್ ಮಾಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೀವು ಎಷ್ಟು ದುರ್ಬಲತೆಯಿಂದ ಇದ್ದೀರಿ ಎಂದು," ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications