ಅಪರೂಪದ ದಾಖಲೆ ಬರೆದ ಪಾಕ್ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್

ಜೋಹಾನ್ಸ್‌ಬರ್ಗ್: ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಜ್ ವಿಶೇಷ ದಾಖಲೆಗೆ ಕಾರಣರಾಗಿದ್ದಾರೆ. ಪಾಕ್ ಪರ 100 ಟಿ20ಐ ಪಂದ್ಯಗಳನ್ನಾಡಿದ ಎರಡನೇ ಆಟಗಾರ ಮತ್ತು ವಿಶ್ವದ 6ನೇ ಆಟಗಾರನಾಗಿ ಹಫೀಜ್ ಗುರುತಿಸಿಕೊಂಡಿದ್ದಾರೆ.
ಶನಿವಾರ (ಏಪ್ರಿಲ್ 10) ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ಮೊದಲನೇ ಟಿ20ಐ ಪಂದ್ಯದಲ್ಲಿ ಮೈದಾನಕ್ಕಿಳಿಯುವುದರೊಂದಿಗೆ ಮೊಹಮ್ಮದ್ ಹಫೀಜ್ 100 ಟಿ20ಐ ಪಂದ್ಯಗಳ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ದಕ್ಷಿಣ ಆಫ್ರಿಕಾ vs ಪಾಕಿಸ್ತಾನ, 1ನೇ ಟಿ20ಐ ಪಂದ್ಯ, Live ಸ್ಕೋರ್
ಬ್ಯಾಟಿಂಗ್ ಆಲ್ ರೌಂಡರ್ ಆಗಿರುವ 40ರ ಹರೆಯದ ಹಫೀಜ್ 100 ಟಿ20ಐ ಪಂದ್ಯಗಳಲ್ಲಿ 2323 ರನ್, 54 ವಿಕೆಟ್ ದಾಖಲೆ ಹೊಂದಿದ್ದಾರೆ. ಪಾಕಿಸ್ತಾನ ಪರ 100ಕ್ಕೂ ಹೆಚ್ಚು ಟಿ20ಐ ಪಂದ್ಯಗಳನ್ನಾಡಿದ ಮೊದಲಿಗರೆಂದರೆ ಶೋಯೆಬ್ ಮಲಿಕ್. ಮಲಿಕ್ ಪಾಕ್ ಪರ 116 ಪಂದ್ಯಗಳನ್ನಾಡಿದ್ದಾರೆ.
ವಿಶ್ವದಲ್ಲಿ ಒಟ್ಟು 6 ಆಟಗಾರರು 100ಕ್ಕೂ ಹೆಚ್ಚು ಟಿ20ಐ ಪಂದ್ಯಗಳನ್ನಾಡಿದ ದಾಖಲೆ ನಿರ್ಮಿಸಿದ್ದಾರೆ. ಅವರೆಂದರೆ ಪಾಕ್‌ನ ಶೋಯೆಬ್ ಮಲಿಕ್ (116 ಪಂದ್ಯಗಳು), ಭಾರತದ ರೋಹಿತ್ ಶರ್ಮಾ (111), ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಇಂಗ್ಲೆಂಡ್‌ನ ಇಯಾನ್ ಮಾರ್ಗನ್ ಮತ್ತು ಮೊಹಮ್ಮದ್ ಹಫೀಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications