Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AUS vs PAK Test: ಪಾಕ್ ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್ ವಿಮಾನ ಹತ್ತದಂತೆ ತಡೆ

ಪಾಕಿಸ್ತಾನ ತಂಡ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಪ್ರವಾಸದ ವೇಳೆ ಪಾಕ್ ತಂಡ ಮೂರು ಟೆಸ್ಟ್‌ ಪಂದ್ಯಗಳ ಸರಣಿ ಆಡುತ್ತಿದೆ. ಈಗಾಗಲೇ ಪಾಕ್ ಎರಡೂ ಟೆಸ್ಟ್‌ ಪಂದ್ಯಗಳಲ್ಲಿ ಸೋತಿದ್ದು, ಮೂರನೇ ಟೆಸ್ಟ್‌ಗೆ ಸಿದ್ಧತೆ ನಡೆಸಿದೆ.

ಮೂರನೇ ಪಂದ್ಯ ಜನವರಿ 3 ರಿಂದ ಸಿಡ್ನಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆದರೆ ಇದಕ್ಕೂ ಮುನ್ನ ಪಾಕ್ ತಂಡದ ನಿರ್ದೇಶಕ ಹಾಗೂ ತಂಡದ ಹಂಗಾಮಿ ಕೋಚ್ ಪಾತ್ರ ನಿರ್ವಹಿಸುತ್ತಿರುವ ಮೊಹಮ್ಮದ್ ಹಫೀಜ್ ಅವರನ್ನು ಸಿಡ್ನಿಗೆ ವಿಮಾನ ಹತ್ತದಂತೆ ತಡೆಯಲಾಯಿತು. ಹಾಗಾದರೆ ವಿಮಾನ ನಿಲ್ದಾಣದಲ್ಲಿ ನಡೆದಿದ್ದು ಏನು ಇಲ್ಲಿದೆ ಮಾಹಿತಿ.

Mohammad Hafeez stopped from boarding flight in Australia? Know what happened with the director

ಹಫೀಜ್ ಮೂರನೇ ಟೆಸ್ಟ್‌ಗೆ ತನ್ನ ಫ್ಲೈಟ್ ತಪ್ಪಿಸಿಕೊಂಡರು. ಹಫೀಜ್ ತಂಡದೊಂದಿಗೆ ಮೆಲ್ಬೋರ್ನ್‌ನಿಂದ ಸಿಡ್ನಿಗೆ ಹೋಗಬೇಕಿತ್ತು, ಆದರೆ ವಿಮಾನ ತಪ್ಪಿದ ಕಾರಣ ತಂಡದೊಂದಿಗೆ ಹೋಗಲು ಸಾಧ್ಯವಾಗಲಿಲ್ಲ.

ಜಿಯೋ ನ್ಯೂಸ್ ವರದಿ ಪ್ರಕಾರ, ಹಫೀಜ್ ಸಿಡ್ನಿಗೆ ತೆರಳಲು ತನ್ನ ಪತ್ನಿಯೊಂದಿಗೆ ಮೆಲ್ಬೋರ್ನ್ ವಿಮಾನ ನಿಲ್ದಾಣ ತಲುಪಿದ್ದರು. ಹಫೀಜ್ ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿರಲಿಲ್ಲ, ಈ ಕಾರಣದಿಂದಾಗಿ ಸಿಬ್ಬಂದಿ ಅವರನ್ನು ವಿಮಾನ ಹತ್ತದಂತೆ ತಡೆದರು. ಆದಾಗ್ಯೂ, ಸ್ವಲ್ಪ ಸಮಯದ ನಂತರ, ಹಫೀಜ್ ತನ್ನ ಹೆಂಡತಿಯೊಂದಿಗೆ ಮತ್ತೊಂದು ವಿಮಾನ ಏರಿ ಸಿಡ್ನಿ ತಲುಪಿದರು.

ಸರಣಿಯಲ್ಲಿ ಹಿನ್ನಡೆ

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಸೋತಿದೆ. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಪಾಕಿಸ್ತಾನವನ್ನು 360 ರನ್‌ಗಳಿಂದ ಸೋಲಿಸಿತ್ತು. ಇದರ ನಂತರ, ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ 79 ರನ್‌ಗಳಿಂದ ಗೆದ್ದುಕೊಂಡಿತು.

Mohammad Hafeez stopped from boarding flight in Australia? Know what happened with the director

ಸ್ಯಾಮ್ ಅಯೂಬ್ ಪದಾರ್ಪಣೆ?

ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಆರಂಭಿಕ ಎರಡೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ, ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಅವರನ್ನು ಮೂರನೇ ಟೆಸ್ಟ್‌ನಲ್ಲಿ ಆಡುವ ಹನ್ನೊಂದ ಬಳಗದಿಂದ ಕೈಬಿಡಬಹುದು.

ಇಮಾಮ್ ಬದಲಿಗೆ ಸ್ಯಾಮ್ ಅಯ್ಯಬು ಅವರಿಗೆ ಮೂರನೇ ಅಂದರೆ ಸಿಡ್ನಿ ಟೆಸ್ಟ್‌ನಲ್ಲಿ ಅವಕಾಶ ನೀಡಬಹುದು. ಅಯೂಬ್ ಯುವ ಆರಂಭಿಕ ಆಟಗಾರ, ಅವರು ಇಲ್ಲಿಯವರೆಗೆ ಪಾಕಿಸ್ತಾನ ಪರ T20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Story first published: Tuesday, January 2, 2024, 13:13 [IST]
Other articles published on Jan 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+