RCB ತೊರೆಯುತ್ತಿದ್ದಂತೆ ಮೊಹಮ್ಮದ್ ಸಿರಾಜ್ ಭಾವುಕ ಪೋಸ್ಟ್
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮೊದಲ ಟೆಸ್ಟ್ ನಡೆಯುತ್ತಿದ್ದ ವೇಳೆ ಸೌದಿಯಲ್ಲಿ ಐಪಿಎಲ್ 2025 ಮೆಗಾ ಹರಾಜು ನಡೆಯಿತು. ಈ ವೇಳೆ ಸ್ಟಾರ್ ಆಟಗಾರರು ತಮ್ಮ ಅದೃಷ್ಟ ಪರೀಕ್ಷಿಸಿದರು. ಈ ವೇಳೆ ಆರ್‌ಸಿಬಿ ಸಹ ಉತ್ತಮ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸಿದೆ. ಆರ್‌ಸಿಬಿ ಮೊಹಮ್ಮದ್ ಸಿರಾಜ್ ಅವರಿಗೆ ಆರ್‌ಟಿಎಂ ಬಳಸಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಆ ಆಸೆ ಮಣ್ಣು ಪಾಲಾಗಿದೆ. ಏಳು ವರ್ಷಗಳಿಂದ ಆರ್‌ಸಿಬಿ ತಂಡದ ಭಾಗವಾಗಿದ್ದ ಮೊಹಮ್ಮದ್ ಸಿರಾಜ್ ಇನ್ನು ಗುಜರಾತ್ ಟೈಟನ್ಸ್ ಪರ ಆಡಲಿದ್ದಾರೆ.
ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಸಿರಾಜ್ ಅವರಿಗೆ ಗುಜರಾತ್ ಟೈಟಾನ್ಸ್ 12.25 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ತಂಡಕ್ಕೆ ನೆರವಾಗಬಲ್ಲ ಕ್ಷಮತೆ ಹೊಂದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡವನ್ನು ಸೇರುತ್ತಿದ್ದಂತೆ ಮೊಹಮ್ಮದ್ ಸಿರಾಜ್ ಸಾಮಾಜಿಕ ತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಆರ್‌ಸಿಬಿ ಅಭಿಮಾನಿಗಳು ಹಾಗೂ ಮ್ಯಾನೇಜ್ಮೆಂಟ್‌ಗೆ ಧನ್ಯವಾದ ತಿಳಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾದ ಭರವಸೆಯ ಬೌಲರ್. ಇವರಿಗೆ ಆರ್‌ಸಿಬಿ 2018ರಲ್ಲಿ ಖರೀದಿಸಿತ್ತು. ಆರ್‌ಸಿಬಿ ತಂಡದೊಂದಿಗಿನ ತಮ್ಮ ನಂಟನ್ನು ಸಿರಾಜ್ ಒಂದು ವಿಡಿಯೋ ಮೂಲಕ ಪೋಸ್ಟ್ ಮಾಡಿದ್ದಾರೆ. ಇನ್ನು ಟೀಮ್ ಜೊತೆ ಕಳೆದ ಏಳು ವರ್ಷಗಳ ಬಗ್ಗೆ ಸಾಮಾಜಿಕ ತಾಣದಲ್ಲಿ ಪೋಸ್ಟ್ ಒಂದನ್ನು ಸಹ ಮಾಡಿದ್ದಾರೆ.
ನನ್ನ ಪ್ರೀತಿಯ ಆರ್‌ಸಿಬಿಗೆ, ತಂಡದೊಂದಿಗೆ ಏಳು ವರ್ಷಗಳ ಕಾಲ ಆಡಿದ ಅನುಭವ ಇದೆ. ಆರ್‌ಸಿಬಿ ಜೆರ್ಸಿಯಲ್ಲಿ ನನ್ನನ್ನು ನಾನು ಗುರುತಿಸಿಕೊಂಡಾಗ ನನ್ನ ಹೃದಯವು ಕೃತಜ್ಞತೆಯಿಂದ ಕೂಡುತ್ತದೆ. ಅಲ್ಲದೆ ಪ್ರೀತಿ ಮತ್ತು ಭಾವನೆಯಿಂದ ತುಂಬಿದೆ ಎಂದು ಬರೆದಿದ್ದಾರೆ. ಸಿರಾಜ್ ಈ ವೇಳೆ ಆರ್‌ಸಿಬಿ ತಮಗೆ ನೀಡಿದ ಅವಕಾಶಗಳ ಬಗ್ಗೆಯೂ ಬರೆದುಕೊಂಡಿದ್ದಾರೆ.
RCB ಕೇವಲ ಫ್ರಾಂಚೈಸಿಗಿಂತ ಹೆಚ್ಚು, ಇದು ಹೃದಯ ಬಡಿತ. ಮನೆಯಂತೆ ಭಾಸವಾಗುವ ಕುಟುಂಬ ಎಂದು ತಿಳಿಸಿದ್ದಾರೆ. ಆರ್‌ಸಿಬಿ ಪರ ಆಡಿದ ಪ್ರತಿ ಪಂದ್ಯ, ಮಾಡಿದ ಪ್ರತಿ ಎಸಿತ, ಮ್ಯಾನೇಜ್ಮೆಂಟ್ ಜೊತೆ ಕಳೆದ ಕ್ಷಣ ಅಸಾಧಾರಣ, ತಂಡದಲ್ಲಿ ಏರಿಳಿತಗಳು ಸಹಜ. ಆದರೆ ಈ ಎಲ್ಲ ವಿಷಯಗಳನ್ನು ಸಹ ತಂಡ ಮೆಟ್ಟಿನಿಂತಿದೆ ಎಂದು ತಿಳಿಸಿದ್ದಾರೆ. ತಾವು ಮಾಡಿದ ವಿಡಿಯೋಕ್ಕೆ ಸಿರಾಜ್ ನಾ ಹಮಾರಾ, ನಾ ತುಮ್ಹಾರಾ ಹುವಾ, ಇಷ್ಕಾ ಕಾ ಯೇ ಸಿತಮ್ ನ ಗನ್ವಾರಾ ಹುವಾ' ಹಾಡನ್ನು ಹಾಕಿದ್ದಾರೆ.
ಸಿರಾಜ್ ಸಾಧನೆ
ಸಿರಾಜ್ ಟೀಮ್ ಇಂಡಿಯಾದ ಒಬ್ಬ ಭರವಸೆಯ ಬೌಲರ್. ಇವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಮೊದಲೇ ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದರು. ಇವರು ಐಪಿಎಲ್‌ನಲ್ಲಿ ಆಡಿದ 93 ಪಂದ್ಯಗಳಲ್ಲಿ 109 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2021ರಿಂದ ಸಿರಾಜ್ ಆರ್‌ಸಿಬಿ ಪರ ಪ್ರತಿ ಪಂದ್ಯದಲ್ಲೂ ಕಣಕ್ಕೆ ಇಳಿದು ತಮ್ಮ ಕ್ಷಮತೆ ತೋರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications