Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammad Amir: ಟೀಮ್ ಇಂಡಿಯಾ 'ಸ್ವಿಂಗ್ ಕಿಂಗ್' ದಾಖಲೆ ಮುರಿದ ಪಾಕಿಸ್ತಾನದ ವೇಗಿ

ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನಲ್ಲಿ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಸಿಪಿಎಲ್ 2024ರ 13ನೇ ಪಂದ್ಯ ಬಾರ್ಬಡೋಸ್ ರಾಯಲ್ಸ್ ಮತ್ತು ಆಂಟಿಗುವಾ ನಡುವೆ ನಡೆಯಿತು. ಮೊಹಮ್ಮದ್ ಅಮೀರ್ ಆ್ಯಂಟಿಗುವಾ ತಂಡದ ಭಾಗವಾಗಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆ್ಯಂಟಿಗುವಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬಾರ್ಬಡೋಸ್ ತಂಡ ಕೇವಲ 127 ರನ್ ಗಳಿಸಲಷ್ಟೇ ಶಕ್ತವಾಯಿತು.

Mohammed Amir breaks Bhuvneshwar Kumar record in T20 cricket

ಆದರೆ ಇನ್ನೂ ಬಾರ್ಬಡೋಸ್ ಪಂದ್ಯವನ್ನು ಡಕ್ವರ್ತ್-ಲೂಯಿಸ್ ನಿಯಮವನ್ನು ಬಳಸಿಕೊಂಡು 10 ರನ್‌ಗಳಿಂದ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಅಮೀರ್ 2.3 ಓವರ್ ಬೌಲ್ ಮಾಡಿದರು. ಈ ವೇಳೆ 11 ರನ್ ನೀಡಿದ ಅವರು 1 ಮೇಡನ್ ಓವರ್ ಹಾಕುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹೊಸ ಸಾಧನೆ ಮಾಡಿದರು

ಮೊಹಮ್ಮದ್ ಅಮೀರ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಅನುಭವಿ ವೇಗದ ಬೌಲರ್ 'ಸ್ವಿಂಗ್ ಕಿಂಗ್' ಖ್ಯಾತಿಯ ಭುವನೇಶ್ವರ್ ಕುಮಾರ್ ಮೂರನೇ ಸ್ಥಾನದಲ್ಲಿದ್ದರು. ಆದರೆ ಅವರನ್ನು ಹಿಂದಿಕ್ಕುವ ಮೂಲಕ ಮೊಹಮ್ಮದ್ ಅಮೀರ್ ಇದೀಗ ಈ ವಿಶೇಷ ದಾಖಲೆ ಸೃಷ್ಟಿಸಿದ್ದಾರೆ.

ಅತಿ ಹೆಚ್ಚು ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ ಬೌಲರ್‌ಗಳ ಪೈಕಿ ಜಸ್ಪ್ರೀತ್ ಬುಮ್ರಾ ಐದನೇ ಸ್ಥಾನದಲ್ಲಿದ್ದಾರೆ. ಅವರು 233 ಪಂದ್ಯಗಳಲ್ಲಿ 22 ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ್ದಾರೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಅವರು ಬಹುಶಃ ಅಮೀರ್ ಮತ್ತು ಭುವನೇಶ್ವರ್ ಇಬ್ಬರನ್ನೂ ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ.

ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಸ್ಪಿನ್ ಬೌಲರ್ ಸುನಿಲ್ ನರೈನ್ ಮತ್ತು ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ತಮ್ಮ ಟಿ20 ವೃತ್ತಿಜೀವನದಲ್ಲಿ ಕ್ರಮವಾಗಿ 30 ಮತ್ತು 26 ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೇಡನ್ ಓವರ್‌ ಮಾಡಿದ ಬೌಲರ್‌ಗಳು

* ಸುನಿಲ್ ನರೈನ್ - 30
* ಶಕೀಬ್ ಅಲ್ ಹಸನ್ - 26
* ಮೊಹಮ್ಮದ್ ಅಮೀರ್ - 25
* ಭುವನೇಶ್ವರ್ ಕುಮಾರ್ -24
* ಜಸ್ಪ್ರೀತ್ ಬುಮ್ರಾ 22

Story first published: Friday, September 13, 2024, 18:57 [IST]
Other articles published on Sep 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+