ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಮೊಹಮ್ಮದ್ ಶಮಿ ಆತ್ಮವಿಶ್ವಾಸದ ನುಡಿ

ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಅತ್ಯಂತ ಪರಿಣಾಮಕಾರಿ ಬೌಲರ್ ಎಂದು ಗುರುತಿಸಿಕೊಂಡಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಜ್ಜಾಗಿರುವ ಶಮಿ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ತಂಡದಲ್ಲಿ ಹಿರಿಯ ಸದಸ್ಯನಾಗಿರುವ ಕಾರಣದಿಂದಾಗಿ ಸಹಜವಾಗಿಯೇ ಜವಾಬ್ಧಾರಿಯ ಭಾವನೆಗಳು ಸಹಜವಾಗಿಯೇ ಬರುತ್ತವೆ ಎಂದು ಶಮಿ ಹೇಳಿದ್ದಾರೆ. "ಸಾಕಷ್ಟು ಸಮಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗಿಯಾಗುತ್ತಿರುವ ಕಾರಣ ಜವಾಬ್ಧಾರಿಗಳು ಸಹಜವಾಗಿಯೇ ಬರುತ್ತದೆ. ಯುವ ಆಟಗಾರರು ಬಯಸಿದರೆ ಯಾವುದೇ ರೀತಿಯ ಸಲಹೆಗಳನ್ನು ಕೂಡ ನೀಡುವುದಕ್ಕೆ ನಾನು ಸಿದ್ಧನಿದ್ದೇನೆ" ಎಂದಿದ್ದಾರೆ
ಇಂಗ್ಲೆಂಡ್ ಪ್ರವಾಸಕ್ಕೆ ಹೆಸರಿಸಿದ ತಂಡದಲ್ಲಿ ಮೊಹಮ್ಮದ್ ಶಮಿ ಜೊತೆಗೆ ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ವೇಗಿಗಳಾಗಿ ಇದ್ದಾರೆ. ಜೊತೆಗೆ ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್ ಮತ್ತು ಅರ್ಜಾನ್ ನಗ್ವಾಸ್ವಲ್ಲಾ ಮೀಸಲು ಆಟಗಾರರಾಗಿ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಇಂಗ್ಲೆಂಡ್ ಪ್ರವಾಸದ ಬಗ್ಗೆ ಮೊಹಮ್ಮದ್ ಶಮಿ ಸಾಕಷ್ಟು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ಪ್ರವಾಸದಲ್ಲಿ ಭಾರತ ಉತ್ತಮ ಯಶಸ್ಸನ್ನು ಸಾಧಿಸಲಿದೆ. ಈ ಹಿಂದಿನ ಸರಣಿಗಳಲ್ಲಿ ತೋರಿಸಿದ ಫಾರ್ಮ್‌ಅನ್ನು ತಂಡ ಮುಂದುವರಿಸಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ನಾವು ತಂಡವಾಗಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದೇವೆ. ಇಂಗ್ಲೆಂಡ್ ಪ್ರವಾಸದ ದೃಷ್ಟಿಯಿಂದ ನಮ್ಮ ಆತ್ಮವಿಶ್ವಾಸ ಸಹಜವಾಗಿಯೇ ತುಂಬಾ ಹೆಚ್ಚಿದೆ. ಕಳೆದ ಆರು ತಿಂಗಳಿನಲ್ಲಿ ನಾವು ತೋರ್ಪಡಿಸಿದ ಪ್ರದರ್ಶನವನ್ನು ಪುನರಾವರ್ತಿಸಲು ನಮ್ಮಿಂದ ಸಾಧ್ಯವಾದರೆ ಈ ಬೇಸಿಗೆ ನಮ್ಮ ಪಾಲಿಗೆ ಶ್ರೇಷ್ಠವಾಗಿರುತ್ತದೆ" ಎಂದು ಶಮಿ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications