ಕಪಿಲ್ ದೇವ್, ಜಾವಗಲ್ ಶ್ರೀನಾಥ್ ದಾಖಲೆ ಪಟ್ಟಿ ಸೇರಿದ ಮೊಹಮ್ಮದ್ ಶಮಿ

ವಿಶಾಖಪಟ್ಟಣ, ಅಕ್ಟೋಬರ್ 7: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 203 ರನ್ ಜಯಗಳಿಸುವ ಮೂಲಕ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾರಮ್ಯ ಮುಂದುವರೆಸಿದೆ. ದಕ್ಷಿಣ ಆಫ್ರಿಕಾದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊದಮ್ಮದ್ ಶಮಿ ಮಾರಕ ಬೌಲಿಂಗ್‌ನೊಂದಿಗೆ ಭಾರತ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.
ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ ಬಲವಾಗಿ ನಿಂತರೆ, ಬೌಲಿಂಗ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ಸೌತ್ ಆಫ್ರಿಕಾ ಅಂತಿಮ ಇನ್ನಿಂಗ್ಸ್‌ನಲ್ಲಿ ವಿಕೆಟ್ ಸಾಧನೆಗಾಗಿ ವೇಗಿ ಮೊಹಮ್ಮದ್ ಶಮಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದಾಗಿನ ನಾಯಕ ಕಪಿಲ್ ದೇವ್, ಜಾವಗಲ್ ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಜೊತೆ ದಾಖಲೆ ಸಾಲು ಸೇರಿಕೊಂಡಿದ್ದಾರೆ.

ರೋಹಿತ್-ಮಯಾಂಕ್ ಬ್ಯಾಟಿಂಗ್ ವೈಭವ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದಿದ್ದ ರೋಹಿತ್ ಶರ್ಮಾ ಪ್ರಥಮ ಇನ್ನಿಂಗ್ಸ್‌ನಲ್ಲಿ 176, ದ್ವಿತೀಯ ಇನ್ನಿಂಗ್ಸ್‌ನಲ್ಲಿ 127 ರನ್ ಬಾರಿಸಿದ್ದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಮೊದಲ ಇನ್ನಿಂಗ್ಸ್‌ನಲ್ಲಿ 215 ರನ್ ಗಳಿಸಿದ್ದರು. ಶರ್ಮಾ-ಮಯಾಂಕ್ ಜೋಡಿ ಹಲವಾರು ದಾಖಲೆಗಳಿಗೂ ಕಾರಣವಾಗಿತ್ತು.

ಶಮಿ ದಾಖಲೆಯ ವಿಕೆಟ್
10.5 ಓವರ್ ಎಸೆದು 35 ರನ್ ನೀಡಿ 5 ವಿಕೆಟ್ ಪಡೆದಿದ್ದ ಶಮಿ ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಅಪರೂಪದ ದಾಖಲೆಗಾಗಿ ವೇಗಿ ದಂತಕತೆಗಳಾದ ಕಪಿಲ್ ದೇವ್, ಜಾವಗಲ್ ಶ್ರೀನಾಥ್ ಪಟ್ಟಿ ಸೇರಿಸಿಕೊಂಡಿದ್ದಾರೆ. ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶಮಿ, ತೆಂಬ ಬವುಮಾ, ನಾಯಕ ಫಾ ಡು ಪ್ಲೆಸಿಸ್, ಕ್ವಿಂಟನ್ ಡಿ ಕಾಕ್, ಡೇನ್ ಪಿಡ್ಟ್ ಮತ್ತು ಕಾಗಿಸೋ ರಬಾಡ ವಿಕೆಟ್‌ಗಳನ್ನು ಮುರಿದಿದ್ದರು.

ಏಕಮಾತ್ರ ಬೌಲರ್
ಇದೇ ಪಂದ್ಯದಲ್ಲಿ ಮೊಹಮ್ಮದ್ ಶಮಿ ಇನ್ನೊಂದು ದಾಖಲೆಯನ್ನೂ ಬರೆದಿದ್ದಾರೆ. 2018ರ ಈಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 3 ಅಥವಾ ಹೆಚ್ಚುಸಾರಿ 5 ವಿಕೆಟ್ ಪಡೆದ ಏಕಮಾತ್ರ ಬೌಲರ್ ಆಗಿ ಶಮಿ ಗುರುತಿಸಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಆರ್ ಅಶ್ವಿನ್ 7 ವಿಕೆಟ್ ಪಡೆದು ಬೌಲಿಂಗ್ ಪಾರಮ್ಯ ಮೆರೆದಿದ್ದರು.

ಭಾರತಕ್ಕೆ ಭರ್ಜರಿ ಜಯ
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 502, ದ್ವಿತೀಯ ಇನ್ನಿಂಗ್ಸ್‌ನಲ್ಲಿ 323 ರನ್ ಬಾರಿಸಿದ್ದರೆ, ದಕ್ಷಿಣ ಆಫ್ರಿಕಾ 431+191 ರನ್ ಬಾರಿಸಿ ಸೋಲೊಪ್ಪಿಕೊಂಡಿದೆ. ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಡೀನ್ ಎಲ್ಗರ್ (160 ರನ್), ಕ್ವಿಂಡನ್ ಡಿ ಕಾಕ್ (111) ಶತಕ ಬಾರಿಸಿದ್ದು ಗಮನಾರ್ಹವೆನಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications