For Quick Alerts
ALLOW NOTIFICATIONS  
For Daily Alerts
 

ಗಾಯದ ನೋವಿನ ನಡುವೆಯೂ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಮೊಹಮ್ಮದ್ ಶಮಿ

ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಭಾರೀ ಸದ್ದು ಮಾಡಿದ ಕೆಲವೇ ಕೆಲವು ಆಟಗಾರರಲ್ಲಿ ಟೀಮ್ ಇಂಡಿಯಾದ ಪೇಸ್ ಬೌಲರ್ ಮೊಹಮ್ಮದ್ ಶಮಿ ಕೂಡ ಒಬ್ಬರು. ಇವರ ವೇಗ ಹಾಗೂ ಸ್ವಿಂಗ್ ಬೌಲಿಂಗ್ ಎದುರಿಸಲು ಬ್ಯಾಟರ್‌ ಗಳು ಹೈರಾಣಾಗುತ್ತಿದ್ದರು. ಪ್ರಸಕ್ತ ವಿಶ್ವಕಪ್‌ನಲ್ಲಿ ಶಮಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.

ಈ ವಿಶ್ವಕಪ್‌ನಲ್ಲಿ ಶಮಿ ಪಾದದ ನೋವನ್ನು ಸಹಿಸಿಕೊಂಡು ಆಡಿದ್ದರು ಎಂಬ ಮಾಹಿತಿ ಹೊರ ಬಂದಿದೆ. ಇದೀಗ ಮಾಧ್ಯಮ ವರದಿಗಳು ಶಮಿ ಅವರು ನೋವಿನಿಂದ ವಿಶ್ವಕಪ್ ಆಡಿದ್ದರು ಎಂದು ಬಹಿರಂಗಪಡಿಸಿವೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಇವರು ಆಡುವ ಬಗ್ಗೆ ಪ್ರಶ್ನೆಗಳು ಎದ್ದಿವೆ.

Mohammed Shami Played the World Cup Despite Injury

'ಕ್ರಿಕ್‌ಬಝ್' ವರದಿ ಪ್ರಕಾರ, ಶಮಿ ವಿಶ್ವಕಪ್‌ನಲ್ಲಿ ಪಾದದ ನೋವಿನಿಂದ ಬಳಲುತ್ತಿದ್ದರು. ಪಂದ್ಯಾವಳಿಯ ನಂತರ, ಶಮಿ ವಿಶ್ರಾಂತಿ ತೆಗೆದುಕೊಂಡರು ಮತ್ತು ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯನ್ನು ಆಡಲಿಲ್ಲ. ಇದಾದ ನಂತರ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ಬಿಸಿಸಿಐ ಎಲ್ಲಾ ಮೂರು ಸ್ವರೂಪಗಳಿಗೆ ಭಾರತೀಯ ತಂಡವನ್ನು ಘೋಷಿಸಿತ್ತು.

ಶಮಿ T20 ಮತ್ತು ಏಕದಿನ ತಂಡದಿಂದ ಹೊರಗುಳಿದರು. ಶಮಿ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದರು. ಭಾರತ ತಂಡವನ್ನು ಪ್ರಕಟಿಸುವಾಗ, ಶಮಿ ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟಿದ್ದರು. ಮತ್ತು ಅವರ ಫಿಟ್ನೆಸ್, ಟೆಸ್ಟ್‌ ಸರಣಿಯಲ್ಲಿ ಇವರು ಆಡುತ್ತಾರೋ ಇಲ್ಲವೋ ಎಂಬುದನ್ನು ಅವಲಂಬಿಸುತ್ತದೆ ಎಂದು ಮಂಡಳಿಯು ತಿಳಿಸಿತ್ತು.

2023 ರ ಏಕದಿನ ವಿಶ್ವಕಪ್‌ನಲ್ಲಿ, ಶಮಿ ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಇದರಲ್ಲಿ ಎರಡು ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್‌ಗಳು ಕಬಳಿಸಿರುವ ದಾಖಲೆ ಇದೆ. ಅಂದರೆ 7 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಅವರು 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದರು. ಪಂದ್ಯಾವಳಿಯಲ್ಲಿ, ಶಮಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

Mohammed Shami Played the World Cup Despite Injury

ವಿಶ್ವಕಪ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಶಮಿ ಬೆಂಚ್ ಕಾಯಿದಿದ್ದರು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬಾಂಗ್ಲಾದೇಶ ವಿರುದ್ಧ ಆಡಿದ ನಾಲ್ಕನೇ ಪಂದ್ಯದಲ್ಲಿ ಗಾಯಗೊಂಡರು, ನಂತರ ಶಮಿ ಉಳಿದ ಪಂದ್ಯಗಳಿಗೆ ಆಡುವ ಹನ್ನೊಂದರ ಬಳಗವನ್ನು ಸೇರಿಕೊಂಡರು. ಇದಾದ ನಂತರ ತಮ್ಮ ಅಭಿನಯದಿಂದ ಇತಿಹಾಸ ಬರೆದರು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳು ಡಿಸೆಂಬರ್ 10 ರಿಂದ ಟಿ20 ಸರಣಿಯ ಮೂಲಕ ಆರಂಭವಾಗಲಿವೆ. ಇದರ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ 17 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಂತರ ಅಂತಿಮವಾಗಿ ಉಭಯ ತಂಡಗಳ ನಡುವೆ ಎರಡು ಟೆಸ್ಟ್ ಪಂದ್ಯಗಳ ಸರಣಿಯು ಡಿಸೆಂಬರ್ 26 ರಿಂದ ಆರಂಭವಾಗಲಿದೆ.

Story first published: Wednesday, December 6, 2023, 18:26 [IST]
Other articles published on Dec 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+