ಐಪಿಎಲ್‌ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
Mohammed Shami:2023 ಪುರುಷರ ಏಕದಿನ ವಿಶ್ವಕಪ್‌ನಲ್ಲಿ ತನ್ನ ಆಕ್ರಮಣಕಾರಿ ಬೌಲಿಂಗ್‌ನಿಂದಲ್ಲೇ ಎದುರಾಳಿ ಬ್ಯಾಟರ್‌ಗಳನ್ನು ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಕಟ್ಟಿ ಹಾಕಿದ್ದರು. ಟೂರ್ನಿಯ ಮಧ್ಯದಲ್ಲಿ ತಂಡಕ್ಕೆ ಸೇರ್ಪಡೆಗೊಂಡ ಶಮಿ ವಿಶ್ವದ ಬಲಿಷ್ಠ ತಂಡಗಳ ಎದುರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಟೀಮ್ ಇಂಡಿಯಾ ಫೈನಲ್ ತಲುಪಿತು ಎಂದರೆ ತಪ್ಪಾಗಲಾರದು.
ಆಡಿದ 7 ಪಂದ್ಯಗಳಿಂದ ಶಮಿ ಒಟ್ಟು 24 ವಿಕೆಟ್‌ಗಳನ್ನು ಕಂಬಳಿಸುವ ಮೂಲಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಏಳು ವಿಕೆಟ್ ಉರುಳಿಸಿ ಮತ್ತೊಂದು ಸಾಧನೆ ಮಾಡಿದ್ದರು. ಇದಾದ ಬಳಿಕ ನವೆಂಬರ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆದಾಗಿ ಶಮಿ ಕಣಕ್ಕೀಳಿದಿದ್ದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿತ್ತು.

ಗಾಯಕ್ಕೆ ತುತ್ತದಾದ ಶಮಿ: ವಿಶ್ವಕಪ್ ಟೂರ್ನಿಯಲ್ಲೇ ಸ್ನಾಯುರಜ್ಜು ಗಾಯದಿಂದ ಬಳಲುತ್ತಿದ್ದ ಮೊಹಮ್ಮದ್ ಶಮಿ ನೋವಿನಲ್ಲೂ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಇದರ ಪ್ರತಿಫಲವಾಗಿಯೇ ಅತಿ ಹೆಚ್ಚು ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಆದರೇ ಎಲ್ಲಿಯೂ ನೋವಿನ ಬಗ್ಗೆ ಹೇಳಿಕೊಳ್ಳದ ಶಮಿ ವಿಶ್ವಕಪ್ ಮುಗಿದ ಬಳಿಕ ಫೆಬ್ರವರಿ ತಿಂಗಳಿನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶಮಿ ಮಾಹಿತಿ ಹಂಚಿಕೊಂಡಿದ್ದರು.
ಶಮಿ ಮಿಸ್ ಮಾಡಿಕೊಂಡ ಪ್ರಮುಖ ಸೀರಿಸ್‌ಗಳು: ತವರಿನಲ್ಲಿ ಏಕದಿನ ವಿಶ್ವಕಪ್ ಸೋತ ಬಳಿಕ ಟೀಮ್ ಇಂಡಿಯಾದ ಹಿರಿಯ ಆಟಗಾರರು ವಿಶ್ರಾಂತಿಯತ್ತ ಮುಖ ಮಾಡಿದ್ದರು. ಜೊತೆಗೆ ಕೆಲವು ಪ್ರಮುಖ ಸೀರಿಸ್‌ಗಳಿಂದ ದೂರ ಉಳಿದಿದ್ದರು. ಈ ಸಾಲಿನಲ್ಲಿ ಗಾಯಾಳು ಮೊಹಮ್ಮದ್ ಶಮಿ ಕೂಡ ಆನೇಕ ಪ್ರಮುಖ ಸಿರೀಸ್ ತಪ್ಪಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿ, ದಕ್ಷಿಣ ಆಫ್ರಿಕಾ ಪ್ರವಾಸ, ಜನವರಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಿಂದ ಹೊರಗುಳಿದಿದ್ದರು. ಅಲ್ಲದೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಗೂ ಶಮಿ ಅಲಭ್ಯರಾಗಿದ್ದರು.

ಹೀಗೆ ಸತತ ಆರು ತಿಂಗಳುಗಳಿಂದ ಕ್ರಿಕೆಟ್‌ನಿಂದ ಹೊರಗಿದ್ದ ವೇಗಿ ಮೊಹಮ್ಮದ್ ಶಮಿ ಇದೀಗ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತ ತಂಡ ಸೇರುವುದಕ್ಕೆ ಕಾಯಲು ಸಾಧ್ಯವಿಲ್ಲ ಎಂದು ಶಮಿ ಕ್ರಿಕೆಟ್ ಮೈದಾನಕ್ಕೆ ಮರಳುವ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿದರೆ ಟೀಮ್ ಇಂಡಿಯಾದ ಯಾವುದೇ ಪ್ರಮುಖ ವೇಗದ ಬೌಲರ್ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಮೊಹಮ್ಮದ್ ಶಮಿ ಭಾರತ ತಂಡಕ್ಕೆ ಪುನರಾಗಮನ ಮಾಡಿದರೆ, ಬುಮ್ರಾ ಜೊತೆಗೆ ಕಮಾಲ್ ಮಾಡುವ ನಿರೀಕ್ಷೆಯನ್ನು ಕ್ರಿಕೆಟ್ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಶಮಿ ಬೌಲಿಂಗ್ ಸಾಧನೆ ಏನು?: ಕಳೆದ ಎರಡು ಋತುಗಳಿಂದ ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಮೊಹಮ್ಮದ್ ಆಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿದರೆ, ಕಳೆದ ವರ್ಷ ರನ್ನರ್ ಆಪ್ ಆಗಿದೆ. ಈ ಎರಡು ಆವೃತ್ತಿಗಳಲ್ಲಿ ಗುಜರಾತ್ ತಂಡದ ಈ ಯಶಸ್ಸಿಗೆ ಶಮಿ ಗಣನೀಯ ಕೊಡುಗೆ ನೀಡಿದ್ದಾರೆ. 2022ರ ಐಪಿಎಲ್‌ನಲ್ಲಿ 20 ವಿಕೆಟ್ ಮತ್ತು 2023ರಲ್ಲಿ 28 ವಿಕೆಟ್ ಕಬಳಿಸಿದ್ದರು. ಹೀಗಾಗಿ 2023ರಲ್ಲಿ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ಸಾಧನೆಗೆ 'ಪರ್ಪಲ್ ಕ್ಯಾಪ್' ಗಳಿಸಿದರು. ಈವರೆಗೆ ಐಪಿಎಲ್‌ನಲ್ಲಿ 110 ಪಂದ್ಯಗಳನ್ನು ಆಡಿರುವ ಶಮಿ 8.44ರ ಸರಾಸರಿಯಲ್ಲಿ 127 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications