ಜೊತೆಯಾಗಿ ಊಟ, ತಡರಾತ್ರಿಯ ಹರಟೆ: ಧೋನಿ ಜೊತೆಗಿನ ಆಫ್‌ಫೀಲ್ಡ್ ಕ್ಷಣಗಳ ಮೆಲುಕು ಹಾಕಿದ ಶಮಿ

ವೇಗಿ ಮೊಹಮದ್ ಶಮಿ ಟೀಮ್ ಇಂಡಿಯಾದಲ್ಲಿ ಎಲ್ಲಾ ಮಾದರಿಯಲ್ಲೂ ಪ್ರಮುಖ ಆಟಗಾರನಾಗಿದ್ದಾರೆ. ಕಳದೆರಡು ವರ್ಷಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಶಮಿ ಧೋನಿ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ಆರಂಭಿಸಿದರು. ಆದರೆ ಧೋನಿಯನ್ನು ಸದ್ಯ ಮೈದಾನದ ಒಳಗೆ ಮತ್ತು ಹೊರಗಡೆ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಆನ್‌ಲೈನ್‌ಸಂವಾದದಲ್ಲಿ ಪಾಲ್ಗೊಂಡಿದ್ದ ಮೊಹಮದ್ ಶಮಿ ಮಾಜಿ ನಾಯಕ ಧೋನಿ ಬಗ್ಗೆ ಸಾಕಷ್ಟು ಮಾತನಾಡಿದರು.'ಅವರು ದೊಡ್ಡ ಆಟಗಾರ. ಅವರ ಜೊತೆಗೆ ಆಡಿದ ಸಂದರ್ಭದ ಬಹಳಷ್ಟು ನೆನಪುಗಳು ಸ್ಮರಣೆಯಲ್ಲಿದೆ. ಮಾಹಿ ಭಾಯ್ ತಂಡಕ್ಕೆ ಮತ್ತೆ ಬರಲಿದ್ದಾರೆ ಎಂಬ ನಂಬಿಕೆ ನನಗಿದೆ. ಆಗ ಆಟ ಮತ್ತಷ್ಟು ಮೋಜಿನಿಂದ ಕೂಡಿರುತ್ತದೆ ಎಂದು ಶಮಿ ಹೇಳಿದ್ದಾರೆ.

ತಡರಾತ್ರಿಯವರೆಗೂ ಹರಟೆ
ಧೋನಿ ಬಗೆಗಿನ ತುಂಬಾ ಇಷ್ಟಾಗುವ ಅಂಶವೇನೆಂದರೆ ಅವರು ಎಲ್ಲರ ಜೊತೆಗೆ ಕೂಡಿಕೊಂಡು ಊಟ ಮಾಡಲು ಬಯಸುತ್ತಿದ್ದರು. ಅವರ ಜೊತೆಗೆ ಯಾವಾಗಲೂ ಎರಡರಿಂದ ನಾಲ್ಕು ಜನರ ಗುಂಪು ಇದ್ದೇ ಇರುತ್ತಿತ್ತು. ಅವರೊಂದಿಗೆ ತಡ ರಾತ್ರಿಯವರೆಗೂ ಹರಟುತ್ತಾ ಕಾಲ ಕಳೆಯುತ್ತಿದ್ದೆವು. ಇವುಗಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಶಮಿ ಹೇಳಿದ್ದಾರೆ.

ಸಾಮಾನ್ಯರಂತೆಯೇ ಬೆರೆಯುತ್ತಾರೆ
ನಾನು ಧೋನಿಯ ಜೊತೆಗೆ ಐಪಿಎಲ್ ಒಂದು ಬಿಟ್ಟು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಆಟವಾಡಿದ್ದೇನೆ. ಅಗತ್ಯ ಮಾರ್ಗದರ್ಶನಗಳನ್ನು ಸಹ ಆಟಗಾರರಿಗೆ ನೀಡುತ್ತಾ ಇರುತ್ತಾರೆ. ಅವರೊಂದಿಗೆ ಇರುವ ಸಂದರ್ಭದಲ್ಲಿ ನಿಮಗೆ ಅವರು ಮಹೇಂದ್ರ ಸಿಂಗ್ ಧೋನಿ ಎಂದು ಅನಿಸುವುದೇ ಇಲ್ಲ. ಅಷ್ಟು ಸಾಮಾನ್ಯರಂತೆ ಬೆರೆಯುತ್ತಾರೆ ಎಂದಿದ್ದಾರೆ ಮೊಹಮದ್ ಶಮಿ.

ವಿಶ್ವಕಪ್ ಬಳಿಕ ಧೋನಿ ಅಜ್ಞಾತವಾಸ
ಮಹೇಂದ್ರ ಸಿಂಗ್ ಧೋನಿ ಈ ಬಾರಿ ಐಪಿಎಲ್‌ನಲ್ಲಿ ಮತ್ತೆ ಕಣಕ್ಕಿಳಿಯಲು ಸಿದ್ಧರಾಗಿದ್ದರು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಕಳೆದ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿ ಫೈನಲ್‌ನಲ್ಲಿ ಹೊರಬಿದ್ದ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರವುಳಿದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications