Mohammed Shami, ಆಂಡರ್ಸನ್ ಅವರನ್ನು ನೋಡಿ ಕಲಿಯಬೇಕು: ಮೆಕ್‌ಗ್ರಾತ್
ಆಸ್ಟ್ರೇಲಿಯಾದ ಶ್ರೇಷ್ಠ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಭಾರತದ ಪ್ರಸ್ತುತ ವೇಗದ ದಾಳಿಯು ಇನ್ನೂ ಉತ್ತಮ ಸಾಮರ್ಥ್ಯವನ್ನು ನೀಡುವ ಕ್ಷಮತೆಯಿದೆ ಎಂದು ನಂಬಿದ್ದಾರೆ. ಟೀಮ್ ಇಂಡಿಯಾದ ಮ್ಯಾಜಿಕಲ್ ವೇಗಿ ಮೊಹಮ್ಮದ್ ಶಮಿ ಸುದೀರ್ಘ ಕಾಲ ಕ್ರಿಕೆಟ್ ಆಡಬೇಕು ಎಂಬುದನ್ನು, ಜೇಮ್ಸ್ ಆಂಡರ್ಸನ್ ಅವರಿಂದ ಕಲಿಯಬೇಕಿದೆ ಎಂದಿದ್ದಾರೆ.
MRF ಪೇಸ್ ಫೌಂಡೇಶನ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗ್ಲೆನ್ ಮೆಕ್‌ಗ್ರಾತ್, ಮುಂದಿನ ಪೀಳಿಗೆಯ ವೇಗದ ಬೌಲರ್‌ಗಳಿಗಾಗಿ ನಾವು ಕಾಯಬೇಕಾಗಿದೆ. ಜಸ್ಪ್ರೀತ್ ಬುಮ್ರಾ ಅವರಿಗೆ ಇನ್ನೂ ಸಾಕಷ್ಟು ಸಮಯವಿದೆ. ಮೊಹಮ್ಮದ್ ಶಮಿಗೆ ವಯಸ್ಸಾಗುತ್ತಿದೆ. ಆದರೆ ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಪ್ರಸ್ತುತ ಭಾರತೀಯ ಬೌಲಿಂಗ್ ದಾಳಿ ಇನ್ನೂ ಸಾಕಷ್ಟು ಉತ್ತಮ ಪ್ರದರ್ಶನ ನೀಡಬಲ್ಲದು. ಶಮಿ ಅತ್ಯುತ್ತಮ ಬೌಲರ್ ಆಗಿದ್ದು, ದೀರ್ಘಕಾಲದಿಂದ ಆಡುತ್ತಿದ್ದಾರೆ. ಅವರು ಚೆಂಡಿನ ಮೇಲೆ ಉತ್ತಮ ನಿಯಂತ್ರಣ ಮತ್ತು ವೇರಿಯೇಷನ್ ಹೊಂದೊದ್ದಾರೆ ಎಂದು ಮೆಗ್ರಾತ್ ತಿಳಿಸಿದ್ದಾರೆ.

ಸಿರಾಜ್ ಚೆನ್ನಾಗಿ ಆಡುತ್ತಿದ್ದಾರೆ. ಬುಮ್ರಾ ಕೂಡ ಎದುರಾಳಿಗಳನ್ನು ಕಾಡಬಲ್ಲರು. ಭಾರತ ಉತ್ತಮ ವೇಗದ ದಾಳಿ ಹೊಂದಿದೆ. ಕಾಲಿನ ಸ್ನಾಯು ಶಸ್ತ್ರಚಿಕಿತ್ಸೆಯಿಂದಾಗಿ ಶಮಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಹೆಚ್ಚುತ್ತಿರುವ ವಯಸ್ಸಿನಲ್ಲಿ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಆಂಡರ್ಸನ್‌ರಿಂದ ಶಮಿ ಕಲಿಯಬೇಕು ಎಂದು ಮೆಕ್‌ಗ್ರಾತ್ ಹೇಳಿದ್ದಾರೆ.
ಧರ್ಮಶಾಲಾದಲ್ಲಿ ನಡೆದ ಭಾರತದ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಆಂಡರ್ಸನ್ ತಮ್ಮ 700 ನೇ ವಿಕೆಟ್ ಪಡೆದರು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಮೈಲಿಗಲ್ಲನ್ನು ತಲುಪಿದ ಮೊದಲ ವೇಗದ ಬೌಲರ್ ಎನಿಸಿಕೊಂಡರು. ಇದು ಕಷ್ಟ, ಆದರೆ ಶಮಿಯಂತಹ ಬೌಲರ್‌ಗೆ ಅನುಭವವಿದೆ ಎಂದು ಮೆಕ್‌ಗ್ರಾತ್ ಹೇಳಿದ್ದಾರೆ. ವಯಸ್ಸಾದಂತೆ, ಉತ್ತಮ ಪ್ರದರ್ಶನಕ್ಕಾಗಿ ಕಠಿಣ ಅಭ್ಯಾಸ, ತಯಾರಿ ಮತ್ತು ಪ್ರೇರಣೆ ಅಗತ್ಯ ಎಂದಿದ್ದಾರೆ.

ವಿಶ್ವದ ಮೂವರು ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಬುಮ್ರಾ ಇದ್ದಾರೆಯೇ ಎಂದು ಕೇಳಿದಾಗ, ಗಾಯದ ಸಮಸ್ಯೆಯಿಂದ ಸ್ವಲ್ಪ ಸಮಯದವರೆಗೆ ಬುಮ್ರಾ ಹೊರಗುಳಿದ ಅವರು ಅದ್ಭುತ ಪುನರಾಗಮನ ಮಾಡಿದರು ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications