Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌: ಮೊಹಮ್ಮದ್‌ ಸಿರಾಜ್‌ ಆಡುವುದು ಅನುಮಾನ

ಅಫ್ಘಾನಿಸ್ತಾನ ಭಾರತದ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಉಭಯ ದೇಶಗಳ ನಡುವಣ ಏಕೈಕ ಟೆಸ್ಟ್‌ ಪಂದ್ಯ ನಡೆಯಲಿದೆ. ಈ ಟೆಸ್ಟ್‌ ಪಂದ್ಯಕ್ಕೆ ನ್ಯೂ ಚಂಡೀಗಢದ ಮುಲ್ಲನ್‌ಪುರ ಆತಿಥ್ಯ ನೀಡಲಿದೆ. ಈ ಪಂದ್ಯಕ್ಕಾಗಿ ಸಿದ್ಧತೆಗಳು ಸಹ ಭರದಿಂದ ಸಾಗಿವೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ಒಂದು ಚಿಂತೆ ಆರಂಭವಾಗಿದೆ. ಸ್ಟಾರ್ ವೇಗದ ಬೌಲರ್‌ ಮೊಹಮ್ಮದ್ ಸಿರಾಜ್‌ ಅವರು ಅಫ್ಘಾನಿಸ್ತಾನ ವಿರುದ್ಧ ಆಡುತ್ತಾರವೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ವೇಳೆ ಇವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರೆ, ಜಮ್ಮು-ಕಾಶ್ಮೀರದ ವೇಗಿ ಆಕಿಬ್ ನಬಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಭಾರತದ ಭರವಸೆಯ ವೇಗದ ಬೌಲರ್‌ ಮೊಹಮ್ಮದ್ ಸಿರಾಜ್‌ ಸ್ಥಿರವಾಗಿ ಆಡುತ್ತಿದ್ದಾರೆ. ಇವರು ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಮೊನಚಾದ ದಾಳಿ ಸಂಘಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಸಹ ಮಿಸ್ ಮಾಡಿಕೊಂಡಿಲ್ಲ. ಎಲ್ಲ ಪಂದ್ಯಗಳಲ್ಲಿ ಗುಜರಾತ್ ಪರ ಬೌಲ್ ಮಾಡಿದ್ದಾರೆ. ಗುಜರಾತ್ ಟೈಟಾನ್ಸ್‌ ಫೈನಲ್‌ಗೂ ಪ್ರವೇಶಿಸಿತ್ತು. ಇವರನ್ನು ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್‌ ಸರಣಿಗೂ ಆಯ್ಕೆ ಮಾಡಲಾಗಿದೆ.

Mohammed Siraj

ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅಫ್ಘಾನಿಸ್ತಾನ ವಿರುದ್ಧ ಕಣಕ್ಕೆ ಇಳಿಯುತ್ತಿಲ್ಲ. ಹೀಗಾಗಿ ಸಿರಾಜ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬಿಡುವಿಲ್ಲದ ವೇಳಾಪಟ್ಟಿಯಿಂದ ಸಿರಾಜ್‌ ಟೆಸ್ಟ್‌ ಪಂದ್ಯದಿಂದ ದೂರ ಉಳಿಯುವ ಸಾಧ್ಯತೆ ಇದೆ.

ಅಕಿಬ್‌ ನಬಿಗೆ ಅವಕಾಶ ಸಾಧ್ಯತೆ

ಜೂನ್ 6 ರಂದು ಪಂದ್ಯ ಆರಂಭವಾಗಲಿದ್ದು, ನಾಯಕ ಶುಭಮನ್ ಗಿಲ್ ಪಂದ್ಯಕ್ಕೂ ಒಂದು ದಿನ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಲಿದ್ದಾರೆ ಮತ್ತು ಆ ದಿನದಂದು ಅವರು ವಿವರಗಳನ್ನು ಬಹಿರಂಗಪಡಿಸಬಹುದು. ಒಂದು ವೇಳೆ ಸಿರಾಜ್‌ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾದರೆ, ವೇಗದ ಬೌಲಿಂಗ್ ನೊಗವನ್ನು ಪ್ರಸಿದ್ಧ್ ಕೃಷ್ಣ ಮುನ್ನಡೆಸಬೇಕಾಗುತ್ತದೆ.

Mohammed Siraj

ಸಿರಾಜ್‌ ಅವರ ಸ್ಥಾನದಲ್ಲಿ ಆಕಿಬ್ ನಬಿಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಒಂದು ದಿನದ ಹಿಂದೆಯಷ್ಟೇ, ಆಕಿಬ್ ನಬಿ ನೆಟ್ ಬೌಲರ್ ಆಗಿ ತಂಡವನ್ನು ಸೇರಲಿದ್ದಾರೆ ಎಂದು ಬಿಸಿಸಿಐ ಘೋಷಿಸಿತ್ತು. ಒಂದು ವೇಳೆ ಇವರನ್ನು ತಂಡಕ್ಕೆ ಆಯ್ಕೆ ಮಾಡಿದರೆ ಬಿಸಿಸಿಐ ಘೋಷಣೆ ಮಾಡಲಿದೆ. ಅಕಿಬ್ ನಬಿ ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

Story first published: Wednesday, June 3, 2026, 23:12 [IST]
Other articles published on Jun 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+