Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊಹಮ್ಮದ್ ಸಿರಾಜ್ ಕುಲದೀಪ್ ಯಾದವ್ ಕುತ್ತಿಗೆ ಹಿಡಿದಿದ್ದೇಕೆ?: ವಿಡಿಯೋ

Mohammed Siraj Grabs Kuldeev Yadav by the Neck, Here is the reason why

ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಚೈನಾಮನ್ ಬೌಲರ್ ಕುಲದೀಪ್ ಯಾದವ್ ಭಾರತದ ಪ್ಲೇಯಿಂಗ್ XIನಲ್ಲಿ ಇಲ್ಲ.

ಭಾರತ-ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಬದಲಿಗೆ ಇಶಾಂತ್ ಶರ್ಮಾ ಮತ್ತು ಶಹಬಾಝ್ ನದೀಮ್ ಮೈದಾನಕ್ಕಿಳಿದಿದ್ದಾರೆ. ಹೀಗಾಗಿ ಸಿರಾಜ್ ಮತ್ತು ಯಾದವ್ ಸದ್ಯ ಬೆಂಚ್‌ನಲ್ಲಿದ್ದಾರೆ. ಅಂದ್ಹಾಗೆ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಕೊನೆಯಲ್ಲಿ ಸಿರಾಜ್ ಮತ್ತು ಯಾದವ್ ಮಧ್ಯೆ ಜಗಳ ನಡೆದಿತ್ತೇ?

2ನೇ ದಿನದಾಟದ ಕೊನೆಯಲ್ಲಿ ಡ್ರೆಸ್ಸಿಂಗ್ ರೂಮ್‌ಗೆ ತೆರಳುವಾಗ ಮೊಹಮ್ಮದ್ ಸಿರಾಜ್ ಅವರು ಕೋಪದಲ್ಲಿ ಕುಲದೀಪ್ ಯಾದವ್ ಅವರ ಕುತ್ತಿಗೆ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ಶುಬ್ಮನ್ ಗಿಲ್ ಅವರು ಹಾದು ಹೋಗುತ್ತಾರೆ. ಆ ಬಳಿಕ ಬರುವ ಕುಲದೀಪ್ ಅವರ ಕುತ್ತಿಗೆ ಸಿರಾಜ್ ಕೈ ಹಾಕುವ ಚಿತ್ರಣ ವಿಡಿಯೋದಲ್ಲಿ.

ಸಿರಾಜ್ ಈ ವರ್ತನೆಗೆ ನಿಜವಾದ ಕಾರಣ ಏನೆಂಬೋದು ಇನ್ನೂ ಗೊತ್ತಾಗಿಲ್ಲ. ಒಂದೋ ಏನೋ ಕಾರಣಕ್ಕೆ ಸಿರಾಜ್ ಅವರು ಯಾದವ್ ಮೇಲೆ ಕೋಪಗೊಂಡಿರಬೇಕು. ಇಲ್ಲವೆ, ಸ್ನೇಹಿತರೊಂದಿಗೆ ನಾವು ತಮಾಷೆಯಾಗಿ ಕೆಲವೊಮ್ಮೆ ಹೀಗೆ ಮುನಿಸಿದಂತೆ ನಟಿಸುತ್ತೇವೆ ಅಲ್ಲವೆ? ಹಾಗೆ ತಮಾಷೆಯಾಡಿರಬೇಕು. ಆದರೆ ಸ್ಪಷ್ಟ ಕಾರಣ ಇನ್ನೂ ತಿಳಿದಿಲ್ಲ.

Story first published: Monday, February 8, 2021, 14:12 [IST]
Other articles published on Feb 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+