For Quick Alerts
ALLOW NOTIFICATIONS  
For Daily Alerts
 

2023ರ ವಿಶ್ವಕಪ್‌ನಲ್ಲಿ ಶಾರ್ದೂಲ್, ಪ್ರಸಿದ್ಧ್‌ಗಿಂತ ಈ ಆರ್‌ಸಿಬಿ ಬೌಲರ್‌ಗೆ ಅವಕಾಶ ನೀಡಬೇಕು; ಆಕಾಶ್ ಚೋಪ್ರಾ

ಮುಂದಿನ ಮೂರು ತಿಂಗಳುಗಳು ಭಾರತ ಕ್ರಿಕೆಟ್ ತಂಡಕ್ಕೆ ಬಿಡುವಿಲ್ಲದ ದಿನಗಳಾಗಿರಲಿವೆ. ಏಕೆಂದರೆ, ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯಾ ಕಪ್ ಪಂದ್ಯಾವಳಿ ನಡೆಯಲಿದ್ದರೆ, ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲೇ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ.

ಇದೇ ವೇಳೆ ಭಾರತದ ಮಾಜಿ ಆರಂಭಿಕ ಬ್ಯಾಟರ್ ಆಕಾಶ್ ಚೋಪ್ರಾ ಅವರು ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಅದ್ಭುತ ಏಕದಿನ ದಾಖಲೆಯನ್ನು ಹೊಂದಿದ್ದಾರೆ. ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗಿಂತ ಮುನ್ನ ಆಡಲು ಅವಕಾಶ ನೀಡಬೇಕು ಎಂದು ತಿಳಿಸಿದರು.

ಮೊಹಮ್ಮದ್ ಸಿರಾಜ್, ಶಾರ್ದಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ಮುಂಬರುವ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ಭಾರತದ 17 ಸದಸ್ಯರ ತಂಡದ ಭಾಗವಾಗಿದ್ದಾರೆ.

mohammed-siraj

ಆಗಸ್ಟ್ 30ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಏಷ್ಯಾ ಕಪ್ ಪಂದ್ಯಾವಳಿ ನಡೆಯಲಿದೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಭಾರತ ತಂಡದ ಇತರ ಇಬ್ಬರು ಪ್ರಮುಖ ವೇಗಿಗಳಾಗಿದ್ದಾರೆ.

ಏಷ್ಯಾ ಉಪಖಂಡದಲ್ಲಿ ಆಡಿದ 17 ಏಕದಿನ ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ 16.57ರ ಸರಾಸರಿ ಮತ್ತು 4.51ರ ಎಕಾನಮಿ ದರದಲ್ಲಿ 35 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ, ಭಾರತದಲ್ಲಿ ಆಡಿದ 14 ಏಕದಿನ ಪಂದ್ಯಗಳಲ್ಲಿ 15.44ರ ಸರಾಸರಿ ಮತ್ತು 4.33ರ ಎಕಾನಮಿ ರೇಟ್‌ನೊಂದಿಗೆ 29 ವಿಕೆಟ್ ಕಬಳಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ""ಮೊಹಮ್ಮದ್ ಸಿರಾಜ್ 2022ರಲ್ಲಿ ಆಡಿದ ಒಟ್ಟು 24 ಏಕದಿನ ಪಂದ್ಯಗಳಲ್ಲಿ 43 ವಿಕೆಟ್‌ಗಳನ್ನು ಪಡೆದಿದ್ದಾರೆ. ಸರಾಸರಿ 20.7 ಮತ್ತು 4.78ರ ಎಕಾನಮಿ ರೇಟ್‌ನೊಂದಿಗೆ ಸಾಧನೆ ಮಾಡಿದ್ದಾರೆ. ಈ ಅಂಕಿಅಂಶಗಳು ಭಾರತದ ಇತರ ವೇಗಿಗಳಿಗಿಂತ ಉತ್ತಮವಾಗಿವೆ,'' ಎಂದು ಗಮನಸೆಳೆದರು.

mohammed-siraj

"ಮೊಹಮ್ಮದ್ ಸಿರಾಜ್ ಅದ್ಭುತವಾಗಿದ್ದರು. ಅವರು ಕಡಿಮೆ ವೃತ್ತಿಜೀವನವನ್ನು ಹೊಂದಿದ್ದಾರೆ. ಆದರೆ, ಕಳೆದ ವರ್ಷ 24 ಪಂದ್ಯಗಳಲ್ಲಿ 20.7ರ ಸರಾಸರಿ ಮತ್ತು 4.78ರ ಎಕಾನಮಿ ರೇಟ್‌ನಲ್ಲಿ 43 ವಿಕೆಟ್‌ಗಳನ್ನು ಪಡೆದಿದ್ದಾರೆ. ಬುಮ್ರಾ ಮತ್ತು ಶಮಿ ಇಬ್ಬರಿಗಿಂತ ಉತ್ತಮರಾಗಿದ್ದಾರೆ," ಎಂದು ಆಕಾಶ್ ಚೋಪ್ರಾ ತಿಳಿಸಿದರು.

ಏಷ್ಯಾದಲ್ಲಿ ಅವರ ಸರಾಸರಿ 16.57 ಮತ್ತು ಎಕಾನಮಿ ದರ 4.51 ಆಗಿದೆ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

"ಏಷ್ಯಾದಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನವು ಖಂಡದ ಹೊರಗೆ ಅವರ ಸಂಖ್ಯೆಯನ್ನು ಮೀರಿಸುತ್ತದೆ ಎಂದು ಹೇಳಿದ ಆಕಾಶ್ ಚೋಪ್ರಾ, ನೀವು ಮೊಹಮ್ಮದ್ ಸಿರಾಜ್ ಅವರನ್ನು ಮಾತ್ರ ಆಡಿಸಬೇಕಾಗುತ್ತದೆ," ಎಂದು ಒತ್ತಾಯಿಸಿದರು.

"ಮೊಹಮ್ಮದ್ ಸಿರಾಜ್ ಬದಲಿಗೆ ಶಾರ್ದೂಲ್ ಠಾಕೂರ್ ಅಥವಾ ಪ್ರಸಿದ್ಧ್ ಕೃಷ್ಣ ಅವರನ್ನು ಆಡಿಸಬಹುದೇ ಎಂದು ಮಾತನಾಡುತ್ತಿದ್ದ ಜನರು, ನೀವು ಯಾರನ್ನೂ ಆಡಿಸಲು ಸಾಧ್ಯವಿಲ್ಲ, ನೀವು ಸಿರಾಜ್ ಅವರನ್ನು ಮಾತ್ರ ಆಡಿಸಬೇಕಾಗುತ್ತದೆ," ಎಂದು ಆಕಾಶ್ ಚೋಪ್ರಾ ಹೇಳಿದರು.

"ಜಸ್ಪ್ರೀತ್ ಬುಮ್ರಾ ಆಡಿದ 72 ಪಂದ್ಯಗಳಲ್ಲಿ 24.3ರ ಸರಾಸರಿಯಲ್ಲಿ ಮತ್ತು 4.63ರ ಎಕಾನಮಿ ದರದಲ್ಲಿ 121 ವಿಕೆಟ್‌ಗಳನ್ನು ಪಡೆದಿದ್ದಾರೆ. ಬುಮ್ರಾ ಕೂಡ ಅದ್ಭುತ ಬೌಲರ್. ಪ್ರತಿ ಪಂದ್ಯಕ್ಕೆ ಸುಮಾರು ಎರಡು ವಿಕೆಟ್ ಪಡೆದಿದ್ದಾರೆ. ಏಷ್ಯಾದಲ್ಲಿ ಅವರ ಸರಾಸರಿ 23.9 ಮತ್ತು ಅವರು 4.65ರ ಎಕಾನಮಿ ದರವನ್ನು ಹೊಂದಿದ್ದಾರೆ," ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದರು.

Story first published: Friday, August 25, 2023, 15:56 [IST]
Other articles published on Aug 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+