
ಭಾರತ ಹಾಗೂ ಇಂಗ್ಲೆಂಡ್ ನಡುವೆ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಈಗ ರೋಚಕ ಹಂತವನ್ನು ತಲುಪಿದೆ. ನಾಲ್ಕನೇ ದಿನ ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಆಡಲು ಇಳಿದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಅಲ್ಪ ಮುನ್ನಡೆಯನ್ನು ಸಾಧಿಸಿದೆಯಾದರೂ ಪಂದ್ಯ ಬಹುತೇಕ ಸಮಬಲದ ಹೀರಾಟವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರವಾಗಿ ಮ್ಯಾಚ್ ವಿನ್ನರ್‌ಆಗಬಲ್ಲ ಆಟಗಾರನನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೆಸರಿಸಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಗೆಲುವಿ ಸಾಧಿಸಬೇಕಾದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಲೇಬೇಕಿದೆ. ಇಂಗ್ಲೆಂಡ್ ಬೌಲರ್‌ಗಳ ಕಠಿಣ ಸವಾಲವನ್ನು ಹಿಮ್ಮೆಟ್ಟಿಸಿ ಉತ್ತಮ ಮೊತ್ತವನ್ನು ಗಳಿಸುವ ಅನಿವಾರ್ಯತೆಯಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಸವಾಲಿನ ಗುರಿಯನ್ನು ನೀಡಬೇಕಿದೆ. ಹಾಗಿದ್ದಾಗ ಮಾತ್ರ ಭಾರತೀಯ ತಂಡಕ್ಕೆ ಅಂತಿಮ ದಿನ ಗೆಲುವು ಸಾಧಿಸುವ ಭರವಸೆಯಲ್ಲಿ ಆಡಲಿಳಿಯ ಬಹುದು. ಇಂತಾ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಅಂತಿಮ ದಿನ ಓರ್ವ ಆಟಗಾರ ಮ್ಯಾಚ್ ವಿನ್ನರ್ ಎನಿಸಬಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಪ್ರತಿಕ್ರಿಯಿಸಿದ್ದಾರೆ.
ಮೈಕಲ್ ವಾನ್ ಹೇಳಿದ್ದು ಯುವ ವೇಗಿಯ ಬಗ್ಗೆ: ಅಂದ ಹಾಗೆ ಟೀಮ್ ಇಂಡಿಯಾದ ಪಾಲಿಗೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮ್ಯಾಚ್ ವಿನ್ನರ್ ಎನಿಸಬಲ್ಲ ಆಟಗಾರ ಎಂದು ಮೈಕಲ್ ವಾನ್ ಹೆಸರಿಸಿದ್ದು ಬೇರೆ ಯಾರನ್ನೂ ಅಲ್ಲ. ಅದು ಯುವ ವೇಗಿ ಮೊಹಮ್ಮದ್ ಸಿರಾಜ್ ಬಗ್ಗೆ. ಅಂತಿಮ ದಿನ ಸಿರಾಜ್ ಬೌಲಿಂಗ್‌ನಲ್ಲಿ ನೀಡುವ ಪ್ರದರ್ಶನ ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿರಲಿದೆ ಎಂದು ಮೈಕಲ್ ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರದ ಆಟದಲ್ಲಿ ಮೊಹಮ್ಮದ್ ಸಿರಾಜ್ ಭಾರತದ ಪರವಾಗಿ 30 ಓವರ್‌ಗಳ ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ಈ ಸರಣಿಯಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಬೌಲಿಂಗ್ ಮಾಡಿದಂತಾಗಿದೆ. ಈ ದಾಳಿಯಲ್ಲಿ ಸಿರಾಜ್ ಎದುರಾಳಿ ತಂಡದ ನಾಲ್ಕು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಕೆಟ್‌ಅನ್ನು ಗುರುಯಾಗಿರಿಸಿ ಸತತವಾಗಿ ಬೌಲಿಂಗ್ ದಾಳಿಯನ್ನು ನಡೆಸಬಲ್ಲ ಸಿರಾಜ್ ಅವರ ಸಾಮರ್ಥ್ಯ ಎದಯರಾಳಿ ಆಟಗಾರರಿಗೆ ಕಂಟಕವಾಗಿದೆ. ಅದರಲ್ಲೂ 14 ಎಸೆತಗಳ ಅಂತರದಲ್ಲಿ ಸಿರಾಜ್ ಅವರ ಬೌಲಿಂಗ್‌ನಲ್ಲಿ ಐದು ಔಟ್ ಮನವಿಗಳಲ್ಲಿ ನಾಲ್ಕು ಅಂಪಯರ್‌ಗಳ ನಿರ್ಧಾರವನ್ನು ಪುರಸ್ಕರಿಸುವ ಮೂಲಕ ವಿಕೆಟ್ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದರು. ಒಂದು ಮನವಿ ಸಿರಾಜ್ ಪರವಾಗಿ ಬಂದಿತ್ತು.
ಈ ಬಗ್ಗೆ ಮೈಕಲ್ ವಾನ್ ಪ್ರತಿಕ್ರಿಯೆ ನೀಡಿದ್ದಾರೆ. "ಆತ ಓರ್ವ ಅದ್ಭುತ ಆಟಗಾರ. ನಾವು ಯಾವಾಗಲೂ ವೇಗದ ಬೌಲರ್‌ಗಳನ್ನು ಗಮನಿಸುತ್ತಿರುತ್ತೇನೆ. ನೀವು ಉತ್ತಮ ಕೌಶಲ್ಯವನ್ನು ಹೊಂದಿರಬೇಕು. ಫಿಟ್ ಆಗಿರಬೇಕು. ಸಾಕಷ್ಟು ಸಾಮರ್ಥ್ಯವನ್ನು ಹೊಂದಿರಬೇಕು. ಸತತವಾಗಿ ನೀವು ಓಡುತ್ತಿರಬೇಕು. ಲಾರ್ಡ್ಸ್ ಮೈದಾನದ ಈ ಪಿಚ್ ನಿಧಾನಗತಿಯಲ್ಲಿ ವರ್ತಿಸುತ್ತಿದೆ. ಹಾಗಿದ್ದರೂ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಸಿರಾಜ್ ಯಶಸ್ಸು ಸಾಧಿಸಿದ್ದಾರೆ" ಎಂದು ಮೈಕಲ್ ವಾನ್ ವಿವರಿಸಿದ್ದಾರೆ.
ನಾಲ್ಕನೇ ದಿನ ಭಾರತ ಉಯತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿ ಸಂಪೂರ್ಣ ದಿನದ ಆಟವನ್ನು ಆಡುವಲ್ಲಿ ಯಶಸ್ವಿಯಾದರೆ ಐದನೇ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಲ್ಲಿ ನಾನು ಸಿರಾಜ್ ಅವತ್ತ ನೋಡಲು ಬಯಸುತ್ತೇನೆ. ಕೆಳ ಕಂತದಲ್ಲಿ ಚೆಂಡು ಬರುತ್ತಿರುವ ಕಾರಣ ಟೀಮ್ ಇಂಡಿಯಾ ಪಾಲಿಗೆ ಸಿರಾಜ್ ನಿಜಕ್ಕೂ ಉತ್ತಮ ಅವಕಾಶ ನೀಡಬಲ್ಲ ಬೌಲರ್ ಆಗಬಲ್ಲರು. ಪೆವಿಲಿಯನ್ ಎಂಡ್‌ನಲ್ಲಿ ಸಿರಾಜ್ ಅವರನ್ನು ಬಳಸಿಕೊಳ್ಳಬೇಕು" ಎಂದು ಮೈಕಲ್ ವಾನ್ ಟೀಮ್ ಇಂಡಿಯಾದ ಯುವ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ನಾಲ್ಕನೇ ದಿನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಬ್ಯಾಟಿಂಗ್ ಬಳಗ ಆರಂಭಿಕ ಆಘಾತವನ್ನು ಅನುಭವಿಸಿದೆ. ಭೊಜನ ವಿರಾಮಕ್ಕೆ ಮುನ್ನ ಭಾರತ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ವಿಕೆಟ್ ಕಳೆದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆರಂಬಿಕರಿಬ್ಬರೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿಫಲವಾದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ ಮತ್ತೊಂದು ವೈಫಲ್ಯವನ್ನು ಕಂಡಿದ್ದಾರೆ.
ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರು
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ಸಿ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ಡಬ್ಲ್ಯೂ), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.
ಬೆಂಚ್: ಝ್ಯಾಕ್ ಕ್ರಾಲಿ, ಡೇನಿಯಲ್ ಲಾರೆನ್ಸ್, ಕ್ರೇಗ್ ಓವರ್‌ಟನ್, ಸಾಕಿಬ್ ಮಹಮೂದ್, ಓಲ್ಲಿ ಪೋಪ್, ಜ್ಯಾಕ್ ಲೀಚ್.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ಡಬ್ಲ್ಯೂ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಬೆಂಚ್: ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ.