For Quick Alerts
ALLOW NOTIFICATIONS  
For Daily Alerts
 

Champions Trophy 2025: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಮಾತ್ರ ನಡೆಯಲಿದೆ: ಪಿಸಿಬಿ

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಭದ್ರತೆ ಮತ್ತು ರಾಜಕೀಯ ಕಾರಣಗಳಿಂದಾಗಿ ಭಾರತ ತಂಡವನ್ನು ಪಾಕಿಸ್ತಾನದಲ್ಲಿ ಟೂರ್ನಿ ಆಡಲು ಕಳುಹಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ದೊಡ್ಡ ಹೇಳಿಕೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಪಾಕಿಸ್ತಾನದಲ್ಲಿ ಮಾತ್ರ ಆಯೋಜಿಸಲಾಗುವುದು. ಪಾಕಿಸ್ತಾನವು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸುವುದಿಲ್ಲ ಎಂದು ಸಷ್ಟವಾಗಿ ಹೇಳಿದ್ದಾರೆ.

ಲಾಹೋರ್‌ನ ಗಡಾಫಿ ಸ್ಟೇಡಿಯಂನ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಲು ಬಂದಿದ್ದ ಮೊಹ್ಸಿನ್ ನಖ್ವಿ ಪತ್ರಿಕಾಗೋಷ್ಠಿಯಲ್ಲಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಬಗ್ಗೆ ಮಾತನಾಡಿದರು. 'ನಾವು ನಮ್ಮ ಪ್ರಶ್ನೆಗಳನ್ನು ಐಸಿಸಿ ಕಳುಹಿಸಿದ್ದೇವೆ. ಈಗ ಐಸಿಸಿ ಉತ್ತರಕ್ಕಾಗಿ ನಾವು ಇನ್ನೂ ಕಾಯುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ವಿಭಿನ್ನವಾಗಿದ್ದು, ಯಾವುದೇ ದೇಶವು ಎರಡನ್ನು ಬೆರೆಸಬಾರದು ಎಂದು ನಾನು ಭಾವಿಸುತ್ತೇನೆ. ಚಾಂಪಿಯನ್ಸ್ ಟ್ರೋಫಿ ಬಗ್ಗೆ ನನಗೆ ಇನ್ನೂ ಸಕಾರಾತ್ಮಕ ನಿರೀಕ್ಷೆಗಳಿವೆ. ಇದರೊಂದಿಗೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸುವುದಿಲ್ಲ ಎಂದಿದ್ದಾರೆ.

Mohsin Naqvi said that 2025 Champions Trophy will be held only in Pakistan

ಪಸ್ತುತ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ಪ್ರತಿಯೊಂದು ತಂಡವೂ ಪಾಕಿಸ್ತಾನಕ್ಕೆ ಬರಲು ಸಿದ್ಧವಾಗಿದೆ. ಯಾರಿಗೂ ಯಾವುದೇ ಸಮಸ್ಯೆ ಇಲ್ಲ. ನಾನು ಇಂದಿಗೂ ಹೇಳುತ್ತೇನೆ. ಭಾರತಕ್ಕೆ ಯಾವುದೇ ಕಾಳಜಿ ಇದ್ದರೆ, ನಮ್ಮೊಂದಿಗೆ ಮಾತನಾಡಿ, ನಾವು ಆ ಕಳವಳಗಳನ್ನು ತೆಗೆದುಹಾಕಬಹುದು. ಅವರು ಬರದಿರಲು ಯಾವುದೇ ಕಾರಣವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬಿಸಿಸಿಐ ಉತ್ತರಕ್ಕಾಗಿ ಮೊಹ್ಸಿನ್ ನಖ್ವಿ ಒತ್ತಾಯಿಸಿದ್ದಾರೆ.

ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ಬಿಸಿಸಿಐ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ಕೋರಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಪತ್ರ ಬರೆದಿದೆ. ಈ ಬಗ್ಗೆ ಪಿಸಿಬಿ ಐಸಿಸಿಯಿಂದ ಪ್ರತಿಕ್ರಿಯೆ ಕೇಳಿದೆ. ಆದರೆ ಐಸಿಸಿಯಿಂದ ಯಾವುದೇ ಉತ್ತರ ಇನ್ನೂ ಸಿಕ್ಕಿಲ್ಲ. ಇದರೊಂದಿಗೆ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿದೆ. ಮುಂದಿನ ವಾರದ ವೇಳೆಗೆ ಐಸಿಸಿ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬಹುದು.

ಪಾಕ್ ತಂಡ ತಂಗಿದ್ದ ಹೋಟೆಲ್‌ನಲ್ಲಿ ಬೆಂಕಿ

ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೂ ಪಾಕಿಸ್ತಾನದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಸೋಮವಾರ ಪಾಕಿಸ್ತಾನ ಮಹಿಳಾ ತಂಡದ ಆಟಗಾರ್ತಿಯರು ತಂಗಿದ್ದ ಹೋಟೆಲ್‌ಗೆ ತಗುಲಿದೆ. ಸದ್ಯ ಘಟನೆಯಲ್ಲಿ ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ. ಈ ಕಾರಣದಿಂದಾಗಿ ಕರಾಚಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಚಾಂಪಿಯನ್‌ಶಿಪ್‌ನ ಪಂದ್ಯಗಳನ್ನು ನಿಲ್ಲಿಸಲು ಕಡಿಮೆ ಮಾಡಲು ಪಿಸಿಬಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಈ ಬೆಂಕಿ ಅವಘಡ ನಂತರ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಮೇಲೂ ಇಂತಹ ಅಹಿತಕರ ಘಟನೆಗಳ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ಮುಂದಾಗಿವೆ. ಇದೇ ಭದ್ರತಾ ಕಾರಣಗಳಿಂದಾಗಿ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದೆ.

Story first published: Monday, November 18, 2024, 23:20 [IST]
Other articles published on Nov 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+