ಐಪಿಎಲ್ 2022ರ ಅತ್ಯಂತ ದುಬಾರಿ ಆಟಗಾರರು: ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ

ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಅತ್ಯಂತ ನಿರೀಕ್ಷೆಯಂತೆ ಕೆಲವು ಆಟಗಾರರು ಕೋಟಿ ಕೋಟಿ ಬೆಲೆ ಬಿಡ್ ಆಗಿ ಅತ್ಯಂತ ದುಬಾರಿ ಆಟಗಾರರೆನಿಸಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ (ಫೆ. 13) ಮುಕ್ತಾಯಗೊಂಡ ನೂರಾರು ಕೋಟಿ ಮೊತ್ತದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಹತ್ತಕ್ಕೂ ಹೆಚ್ಚು ಆಟಗಾರರು 10 ಕೋಟಿ ರೂಪಾಯಿ ಮೀರಿದ್ದಾರೆ.
ಒಟ್ಟು 590 ಆಟಗಾರರು ಹರಾಜಿನಲ್ಲಿ ಅಗ್ನಿಪರೀಕ್ಷೆಗೆ ಇಳಿದಿದ್ದರು. ಇದರಲ್ಲಿ 204 ಆಟಗಾರರು ಮಾತ್ರ ಸೇಲ್ ಆಗಿ 10 ಫ್ರಾಂಚೈಸಿ ಸೇರಿಕೊಂಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ಬರೋಬ್ಬರಿ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ಖರೀದಿಸಿದ್ದು, ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಮುಖ ಆಟಗಾರರು ಬಿಕರಿಯಾಗದೆ ಇರುವುದು ಅಚ್ಚರಿ ಮೂಡಿಸಿದೆ. ಇದರ ನಡುವೆ ಪ್ರಸಕ್ತ ಸೀಸನ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮೈದಾನಕ್ಕಿಳಿಯಲಿರುವ ಟಾಪ್ 10 ಆಟಗಾರರ ಪಟ್ಟಿ ಈ ಕೆಳಗಿದೆ.
ಐಪಿಎಲ್ 15ನೇ ಸೀಸನ್‌ನ ಟಾಪ್ 10 ದುಬಾರಿ ಆಟಗಾರರು
1) ಕೆ.ಎಲ್ ರಾಹುಲ್: 17 ಕೋಟಿ ರೂಪಾಯಿ (ಲಕ್ನೋ ಸೂಪರ್‌ಜಾಯಿಂಟ್ಸ್)
2) ರವೀಂದ್ರ ಜಡೇಜಾ: 16 ಕೋಟಿ (ಚೆನ್ನೈ ಸೂಪರ್ ಕಿಂಗ್ಸ್)
3) ರೋಹಿತ್ ಶರ್ಮಾ: 16 ಕೋಟಿ (ಮುಂಬೈ ಇಂಡಿಯನ್ಸ್)
4) ರಿಶಬ್ ಪಂತ್: 16 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)
5) ಇಶಾನ್ ಕಿಶನ್: 15.25 ಕೋಟಿ (ಮುಂಬೈ ಇಂಡಿಯನ್ಸ್)
6) ವಿರಾಟ್ ಕೊಹ್ಲಿ: 15 ಕೋಟಿ ( ರಾಯಲ್ ಚಾಲೆಂಜರ್ಸ್ ಬೆಂಗಳೂರು)
7) ಹಾರ್ದಿಕ್ ಪಾಂಡ್ಯಾ: 15 ಕೋಟಿ (ಅಹಮದಾಬಾದ್ ಟೈಟನ್ಸ್)
8) ರಶೀದ್ ಖಾನ್: 15 ಕೋಟಿ (ಅಹಮದಾಬಾದ್ ಟೈಟನ್ಸ್)
9) ಕೇನ್ ವಿಲಿಯಮ್ಸನ್ 14 ಕೋಟಿ (ಅಹಮದಾಬಾದ್ ಟೈಟನ್ಸ್)
10) ಸಂಜು ಸ್ಯಾಮ್ಸನ್ 14 ಕೋಟಿ (ರಾಜಸ್ತಾನ್ ರಾಯಲ್ಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications