Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯ, ಸಚಿನ್ ಟಾಪ್, ಕೊಹ್ಲಿ 8ನೇ ಸ್ಥಾನ

Most International Matches played by Indian, Sachin tops the list

ಬೆಂಗಳೂರು, ಡಿಸೆಂಬರ್ 18: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡುವ ಮೂಲಕ ನಾಯಕ ವಿರಾಟ್ ಕೊಹ್ಲಿ 400 ಪ್ಲಸ್ ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತೀಯ ಕ್ರಿಕೆಟರ್ ಗಳ ಪಟ್ಟಿ ಸೇರಿದರು. ಈ ಪಟ್ಟಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ 8ನೇ ಸ್ಥಾನದಲ್ಲಿದ್ದಾರೆ.

ಎಡಗೈ ಬ್ಯಾಟ್ಸ್ ಮನ್ ಹಾಗೂ ಸ್ಪಿನ್ನರ್ ಯುವರಾಜ್ ಸಿಂಗ್ ಅವರು 402 ಪಂದ್ಯಗಳನ್ನಾಡಿ, ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರು. ಇದಾದ ಬಳಿಕ ಕೊಹ್ಲಿ ಈ ಪಟ್ಟಿಯನ್ನು ಬುಧವಾರ(ಡಿಸೆಂಬರ್ 18) ದಂದು ಸೇರಿದ್ದಾರೆ. ಸಚಿನ್ ತೆಂಡೂಲ್ಕರ್ ಒಟ್ಟು 664 ಪಂದ್ಯಗಳನ್ನಾಡಿದ್ದು, ಭಾರತ ಹಾಗೂ ವಿಶ್ವ ದಾಖಲೆಯಾಗಿದೆ. ಸಚಿನ್ ನಂತರದ ಸ್ಥಾನದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಇದ್ದಾರೆ. ಧೋನಿ 534 ಪಂದ್ಯಗಳನ್ನಾಡಿದ್ದಾರೆ.

ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಭಾರತ ಕ್ರಿಕೆಟರ್ಸ್:
ಸಚಿನ್ ತೆಂಡೂಲ್ಕರ್-664
ಎಂಎಸ್ ಧೋನಿ-538
ರಾಹುಲ್ ದ್ರಾವಿಡ್- 509
ಮೊಹಮ್ಮದ್ ಅಜರುದ್ದೀನ್ -433
ಸೌರವ್ ಗಂಗೂಲಿ-424
ಅನಿಲ್ ಕುಂಬ್ಳೆ-403
ಯುವರಾಜ್ ಸಿಂಗ್-402
ವಿರಾಟ್ ಕೊಹ್ಲಿ-400*

ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಟಾಪ್ 5 ಕ್ರಿಕೆಟರ್ಸ್:
ಆಟಗಾರ-ದೇಶ-ಅವಧಿ-ಪಂದ್ಯಗಳು
ಸಚಿನ್ ತೆಂಡೂಲ್ಕರ್(ಭಾರತ)- 1989-2013- 664 ಪಂದ್ಯಗಳು
ಮಹೇಲ ಜಯವರ್ದನೆ(ಶ್ರೀಲಂಕಾ) 1997-2015-652
ಕುಮಾರ್ ಸಂಗಕ್ಕಾರ(ಶ್ರೀಲಂಕಾ)- 2000-2015-594
ಸನತ್ ಜಯಸೂರ್ಯ(ಶ್ರೀಲಂಕಾ)-1989-2011-586
ರಿಕಿ ಪಾಂಟಿಂಗ್(ಆಸ್ಟ್ರೇಲಿಯಾ)-1995-2012-560

Story first published: Wednesday, December 18, 2019, 22:53 [IST]
Other articles published on Dec 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+