IND vs BAN: 2022ರಲ್ಲಿ ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಿದ ಮೊಹಮ್ಮದ್ ಸಿರಾಜ್

ಭಾರತದ ಯುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರಂಭಿಕ ಎರಡು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾಗೆ ಮುನ್ನಡೆ ಒದಗಿಸಿದರು.
ಇದೇ ವೇಳೆ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ಅನಾಮುಲ್ ಹಕ್ ಮತ್ತು ಲಿಟನ್ ದಾಸ್ ಅವರನ್ನು ಔಟ್ ಮಾಡುತ್ತಿದ್ದಂತೆಯೇ ಮೊಹಮ್ಮದ್ ಸಿರಾಜ್ ಈಗ 2022ರಲ್ಲಿ ಭಾರತದ ಪರ ಅತಿ ಹೆಚ್ಚು ಏಕದಿನ ವಿಕೆಟ್ ಪಡೆದ ಹೆಗ್ಗಳಿಕೆಗೆ ಪಾತ್ರರಾದರು.
ಬಲಗೈ ವೇಗಿ ಮೊಹಮ್ಮದ್ ಸಿರಾಜ್ 14 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಪಡೆಯುವ ಮೂಲಕ 21 ವಿಕೆಟ್ ಪಡೆದಿರುವ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರನ್ನು ಹಿಂದಿಕ್ಕಿದರು.
2022ರಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅಗ್ರ ವಿಕೆಟ್ ಪಡೆದವರು
* ಮೊಹಮ್ಮದ್ ಸಿರಾಜ್ -14 ಪಂದ್ಯ 23 ವಿಕೆಟ್‌ಗಳು
* ಯುಜ್ವೇಂದ್ರ ಚಹಾಲ್- 14 ಪಂದ್ಯ 21 ವಿಕೆಟ್‌ಗಳು
* ಪ್ರಸಿದ್ಧ್ ಕೃಷ್ಣ: ಪಂದ್ಯಗಳು - 11 ಪಂದ್ಯ 19 ವಿಕೆಟ್‌ಗಳು
* ಶಾರ್ದೂಲ್ ಠಾಕೂರ್ - 15 ಪಂದ್ಯ 19 ವಿಕೆಟ್‌ಗಳು

ಮೊಹಮ್ಮದ್ ಸಿರಾಜ್ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 3 ವಿಕೆಟ್‌ಗಳೊಂದಿಗೆ ಅತ್ಯುತ್ತಮ ಫಾರ್ಮ್‌ನಲ್ಲಿ ಕಂಡುಬಂದರು. ಆದರೆ ಮೂರು ವಿಕೆಟ್‌ಗಳ ಸಾಧನೆಯು ಟೀಂ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಸದ್ಯ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಅನಾಮುಲ್ ಹಕ್ ಅವರನ್ನು ಬಲೆಗೆ ಬೀಳಿಸುವ ಮೂಲಕ ಮೊದಲ ವಿಕೆಟ್ ಪಡೆದರು.
ಮೊಹಮ್ಮದ್ ಸಿರಾಜ್ ಹಾಕಿದ ಬಾಲ್ ಅನಾಮುಲ್ ಹಕ್ ಹಿಂದಿನ ಪ್ಯಾಡ್‌ಗೆ ಬಡಿಯುವ ಮೂಲಕ ಎಲ್‌ಬಿಡಬ್ಲ್ಯೂ ರೂಪದಲ್ಲಿ ವಿಕೆಟ್ ಪಡೆದರು. ಇನ್ನು ಸಿರಾಜ್ ಅವರ ಎರಡನೇ ವಿಕೆಟ್ ಬಾಂಗ್ಲಾದೇಶದ ನಾಯಕ ಲಿಟನ್ ದಾಸ್ ಅವರಿಗೆ ಹಾಕಿದ ಚೆಂಡು ಸ್ಟಂಪ್‌ಗೆ ಬಡಿಯಿತು. ಇದಾದ ನಂತರ ಕ್ರಿಸ್ಟಿಯಾನೊ ರೊನಾಲ್ಡೊ ಅವರಂತೆ ಸಂಭ್ರಮಿಸಿ ಮೊಹಮ್ಮದ್ ಸಿರಾಜ್ ಖುಷಿಪಟ್ಟರು.
ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿದ್ದು, ಭಾರತಕ್ಕೆ 272 ರನ್‌ಗಳ ಗುರಿ ನೀಡಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಸರಣಿಯನ್ನು ಗೆಲ್ಲಬೇಕಾದರೆ ಬುಧವಾರದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಇನ್ನು ಡಿಸೆಂಬರ್ 10ರಂದು ಚಟ್ಟೋಗ್ರಾಮ್‌ನಲ್ಲಿ ನಡೆಯಲಿರುವ ಮೂರನೇ ಪಂದ್ಯವನ್ನು ನಿರ್ಣಾಯಕವಾಗಿಸಲು ಭಾರತ ತಂಡ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications