For Quick Alerts
ALLOW NOTIFICATIONS  
For Daily Alerts
 

21ನೇ ಶತಮಾನದಲ್ಲಿ ಟೆಸ್ಟ್‌ನಲ್ಲಿ ವಿಶಿಷ್ಠ ದಾಖಲೆ ಬರೆದ ರಶೀದ್ ಖಾನ್

Most overs bowled in a Test, Rashid Khan created record

ಅಬುಧಾಬಿ: ಅಫ್ಘಾನಿಸ್ತಾನದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾನುವಾರ (ಮಾರ್ಚ್ 14) ವಿಶೇಷ ದಾಖಲೆ ನಿರ್ಮಿಸಿದ್ದಾರೆ. 21ನೇ ಶತಮಾನದಲ್ಲಿ ಟೆಸ್ಟ್‌ ಕ್ರಿಕೆಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಓವರ್‌ಗಳನ್ನು ಎಸೆದ ಮೊದಲ ಬೌಲರ್ ದಾಖಲೆಗೆ ರಶೀದ್ ಕಾರಣರಾಗಿದ್ದಾರೆ.

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ, ಜಿಂಬಾಬ್ವೆ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ರಶೀದ್ ಖಾನ್ ಈ ಅಪರೂಪದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 36.3 ಓವರ್‌ಗಳಲ್ಲಿ 4 ವಿಕೆಟ್ ಪಡೆದಿದ್ದ ಖಾನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 62.5 ಓವರ್‌ಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ.

ಅಂದರೆ ಒಂದು ಟೆಸ್ಟ್‌ ಪಂದ್ಯದಲ್ಲಿ ರಶೀದ್ ಭರ್ಜರಿ 99.2 ಓವರ್‌ ಎಸೆದು 11 ವಿಕೆಟ್ ಪಡೆದಂತಾಗಿದೆ. ಹೀಗಾಗಿ 21ನೇ ಶತಮಾನದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ಓವರ್‌ಗಳನ್ನು ಎಸೆದ ಬೌಲರ್ ಆಗಿ ರಶೀದ್ ಗುರುತಿಸಿಕೊಂಡಿದ್ದಾರೆ. ಟೆಸ್ಟ್‌ ನಲ್ಲಿ ಅತೀ ಹೆಚ್ಚು ಓವರ್‌ ಎಸೆದ ಅಸಲಿ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ.

ಶ್ರೀಲಂಕಾದ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧರನ್ ಅವರು 1998ರಲ್ಲಿ ದ ಓವಲ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 113.5 ಓವರ್‌ಗಳನ್ನು ಎಸೆದಿದ್ದರು. ಅದು ಆ ಯುಗದ ಸಾರ್ವಕಾಲಿಕ ದಾಖಲೆಯೆನಿಸಿತ್ತು. ಐಪಿಎಲ್‌ನಲ್ಲಿ ರಶೀದ್ ಮಾಜಿ ಚಾಂಪಿಯನ್ಸ್ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಾರೆ.

ಅಫ್ಘಾನ್-ಜಿಂಬಾಬ್ವೆ ದ್ವಿತೀಯ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಅಫ್ಘಾನ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದು 545 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು. ಜಿಂಬಾಬ್ವೆ 287+365 ರನ್ ಬಾರಿಸಿ 6 ವಿಕೆಟ್‌ನಿಂದ ಸೋತಿದೆ. ಇದರೊಂದಿಗೆ 2 ಪಂದ್ಯಗಳ ಟೆಸ್ಟ್‌ ಸರಣಿ 1-1ರಿಂದ ಸಮಬಲಗೊಂಡಿದೆ.

Story first published: Sunday, March 14, 2021, 17:14 [IST]
Other articles published on Mar 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+