For Quick Alerts
ALLOW NOTIFICATIONS  
For Daily Alerts
 

Most Runs In IPL History: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಗಣ್ಯರ ಪಟ್ಟಿಗೆ ಸೇರಲು ಸಜ್ಜಾದ ಎಂಎಸ್ ಧೋನಿ

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿನ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ಶುಕ್ರವಾರ, ಮಾರ್ಚ್ 31ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡಲಿವೆ.

ಈ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭವೂ ಕೂಡ ಇರುವುದರಿಂದ, ಮೊದಲ ಪಂದ್ಯದ ಆರಂಭದ ಸಮಯ ಕೊಂಚ ವಿಳಂಬವಾಗಲಿದೆ. ಸಂಜೆ 6 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭ ನಂತರ 7 ಗಂಟೆಗೆ ಟಾಸ್ ಹಾಗೂ 7.30ಕ್ಕೆ ಪಂದ್ಯ ಆರಂಭವಾಗಲಿದೆ.

Most Runs In IPL History: MS Dhoni Needs 22 Runs To Join Virat Kohli And Rohit Sharma Elite Group

ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಭಾರತೀಯ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಎಂಎಸ್ ಧೋನಿ ಹೊಸ ಮೈಲಿಗಲ್ಲು ಸಾಧಿಸಲು ಸಜ್ಜಾಗಿದ್ದಾರೆ. 2008ರ ಟಿ20 ಲೀಗ್‌ನ ಆರಂಭದಿಂದಲೂ ಪ್ರತಿಯೊಂದು ಐಪಿಎಲ್‌ನಲ್ಲಿ ಕಾಣಿಸಿಕೊಂಡಿರುವ ಎಂಎಸ್ ಧೋನಿ, ಪಂದ್ಯಾವಳಿಯ ಇತಿಹಾಸದಲ್ಲಿ 5000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ 7ನೇ ಆಟಗಾರನಾಗುವ ಬೃಹತ್ ಮೈಲಿಗಲ್ಲು ಸ್ಥಾಪಿಸಲು ಹತ್ತಿರವಾಗಿದ್ದಾರೆ.

ಸಿಎಸ್‌ಕೆ ನಾಯಕ ಎಂಎಸ್ ಧೋನಿ ಪ್ರಸ್ತುತ ತಮ್ಮ ಹೆಸರಿನಲ್ಲಿ 4978 ಐಪಿಎಲ್ ರನ್ ಹೊಂದಿದ್ದಾರೆ. ಗುಜರಾತ್ ವಿರುದ್ಧದ ಮೊದಲ ಪಂದ್ಯದಲ್ಲಿ 22 ರನ್‌ ಗಳಿಸಿದರೆ, 5000 ರನ್ ಗಡಿ ತಲುಪಲಿದ್ದಾರೆ. ಎಂಎಸ್ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳ ಪರ ಆಡಿದ್ದಾರೆ.

Most Runs In IPL History: MS Dhoni Needs 22 Runs To Join Virat Kohli And Rohit Sharma Elite Group

ಐಪಿಎಲ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 223 ಪಂದ್ಯಗಳಲ್ಲಿ 6624 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಶಿಖರ್ ಧವನ್ (6244 ರನ್) ಇದ್ದರೆ, ಮೂರನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ (5881 ರನ್), ನಾಲ್ಕನೇ ಸ್ಥಾನದಲ್ಲಿ ರೋಹಿತ್ ಶರ್ಮಾ (5879 ರನ್), ಐದನೇ ಸ್ಥಾನದಲ್ಲಿ ಸುರೇಶ್ ರೈನಾ (5528 ರನ್) ಇದ್ದಾರೆ.

ಇನ್ನು ಆರನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ (5162 ರನ್), ಏಳನೇ ಸ್ಥಾನದಲ್ಲಿ ಎಂಎಸ್ ಧೋನಿ (4978 ರನ್), ಎಂಟನೇ ಸ್ಥಾನದಲ್ಲಿ ಕ್ರಿಸ್ ಗೇಲ್ (4965 ರನ್), ಒಂಬತ್ತನೇ ಸ್ಥಾನದಲ್ಲಿ ರಾಬಿನ್ ಉತ್ತಪ್ಪ (4952 ರನ್) ಮತ್ತು ಹತ್ತನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ (4376 ರನ್) ಗಳಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

Most Runs In IPL History: MS Dhoni Needs 22 Runs To Join Virat Kohli And Rohit Sharma Elite Group

ಗುಜರಾತ್ ಟೈಟನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಫಿಟ್‌ನೆಸ್ ಕಾರಣದಿಂದ ಎಂಎಸ್ ಧೋನಿ ಆಡುವುದು ಅನುಮಾನವೆನಿಸಿದೆ. ಸಿಎಸ್‌ಕೆ ನಾಯಕ ಹಾಗೂ ವಿಕೆಟ್ ಕೀಪರ್ ಆಗಿರುವ ಎಂಎಸ್ ಧೋನಿ, ಸಣ್ಣ ಗಾಯಕ್ಕೆ ತುತ್ತಾಗಿದ್ದಾರೆ. ಇದೇ ವೇಳೆ ಫ್ರಾಂಚೈಸ್ ಸಿಇಒ ಮಾತನಾಡಿ ಉದ್ಘಾಟನಾ ಪಂದ್ಯದಲ್ಲಿ ಹೊರಗುಳಿಯುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿ ನಾಲ್ಕು ಬಾರಿ ಚಾಂಪಿಯನ್ ಮಾಡಿರುವ ಎಂಎಸ್ ಧೋನಿಗೆ ಇದೀಗ 41 ವರ್ಷ ವಯಸ್ಸಾಗಿದೆ. ತಂಡದಲ್ಲಿರುವ ಯುವ ಹಾಗೂ ಅನುಭವಿ ಆಟಗಾರರಿಂದ ಉತ್ತಮ ಪ್ರದರ್ಶನ ಹೊರತರಲು ಎದುರು ನೋಡುತ್ತಿದ್ದಾರೆ. ಇದು ತಮ್ಮ ಕೊನೆಯ ಐಪಿಎಲ್ ಲೀಗ್ ಎಂದು ಹೇಳಿರುವ ಎಂಎಸ್ ಧೋನಿಗೆ ಈ ಬಾರಿ ಮತ್ತೊಮ್ಮೆ ಟ್ರೋಫಿ ಎತ್ತಲು ಸಜ್ಜಾಗಿದ್ದಾರೆ.

Story first published: Friday, March 31, 2023, 16:09 [IST]
Other articles published on Mar 31, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+