Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS Dhoni: ನಿವೃತ್ತಿಯ ಬಗ್ಗೆ ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು?

ಭಾನುವಾರ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿವೆ. ಇನ್ನು ಎರಡೂ ತಂಡಗಳು ತಲಾ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದರಿಂದ ರೋಚಕತೆ ಹೆಚ್ಚಿಸಿದೆ. ಪ್ರತಿ ಬಾರಿ ಐಪಿಎಲ್‌ ಆರಂಭವಾದಾಗ ಒಂದು ಪ್ರಶ್ನೆ ಎದ್ದೇ ಏಳುತ್ತದೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಪಡೆಯುತ್ತಾರಾ? ಈ ಪ್ರಶ್ನೆಗೆ ಸ್ವತಃ ಕೂಲ್ ಕ್ಯಾಪ್ಟನ್‌ ಉತ್ತರ ನೀಡಿದ್ದಾರೆ.

ಧೋನಿಗೆ ಈಗ 43 ವರ್ಷ ವಯಸ್ಸು, ಈ ವರ್ಷ ಅವರ ಐಪಿಎಲ್‌ ಕೊನೆಯಾ ಎಂಬ ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ಈ ಬಗ್ಗೆ ಧೋನಿ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಹೊಸ ಆವೃತ್ತಿ ಆರಂಭಕ್ಕೂ ಮುನ್ನವೇ ಮಾಹಿ ಜಿಯೋ ಹಾಟ್‌ಸ್ಟಾರ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

MS Dhoni Addresses Retirement Speculations Ahead of CSK vs MI Clash in IPL

ಜಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹಿ, "ನಾನು ಚೆನ್ನೈ ತಂಡದ ಪರ ಎಷ್ಟು ದಿನ ಬೇಕಾದ್ರೂ ಆಡಬಲ್ಲೆ. ಇದು ನನ್ನ ಫ್ರಾಂಚೈಸಿ. ನಾನು ವೀಲ್‌ ಚೇರ್‌ನಲ್ಲಿದ್ದರೂ ಸಹ ಅವರು ನನ್ನನ್ನು ಕೂಡಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಚೆನ್ನೈ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮಾಹಿ ಬಗ್ಗೆ ನಾಯಕ ಮೆಚ್ಚುಗೆ

ಧೋನಿ ಅವರ ಬಗ್ಗೆ ಚೆನ್ನೈ ತಂಡದ ನಾಯಕ ರುತುರಾಜ್ ಗಾಯಕ್ವಾಡ್‌ ಮಾತನಾಡಿದ್ದಾರೆ. ಈ ಬಾರಿಯೂ ಮಾಹಿ ತಂಡಕ್ಕಾಗಿ ಹಲವು ಪ್ರಮುಖ ಇನಿಂಗ್ಸ್‌ಗಳನ್ನು ಆಡಲಿದ್ದಾರೆ ಎಂಬ ವಿಶ್ವಾಸವನ್ನ ಕ್ಯಾಪ್ಟನ್‌ ಹೊಂದಿದ್ದಾರೆ. ಈ ತಂಡದಲ್ಲಿ ಹಲವು ಆಟಗಾರರು ಅವರ ಆಟವನ್ನು ನೋಡಿಯೇ ಬೆಳೆದವರು. ಇವರ ಉಪುಸ್ಥಿತಿ ತಂಡದ ಇತರೇ ಆಟಗಾರರ ಸ್ಪೂರ್ತಿ ಎಂದು ತಿಳಿಸಿದ್ದಾರೆ.

ಧೋನಿ ಅವರಲ್ಲಿ ಫಿಟ್ನೆಸ್‌ ಸಮಸ್ಯೆ ಕಾಣುತ್ತಿದೆ ಎಂದು ನನಗೆ ಎಂದು ಅನಿಸುವುದಿಲ್ಲ. ಅಲ್ಲದೆ ಅವರು ಫಾರ್ಮ್‌ನಲ್ಲಿಲ್ಲ ಎಂಬ ಮಾತೇ ಇಲ್ಲ. ಇತ್ತೀಚಿಗೆ ಇಂಟರ್‌ನ್ಯಾಷನಲ್‌ ಮಾಸ್ಟರ್ಸ್‌ ಲೀಗ್‌ ನಲ್ಲಿ ಸಚಿನ್ ತೆಂಡೂಲ್ಕರ್ ಅವರು ಬ್ಯಾಟ್ ಮಾಡುವುದನ್ನು ನೋಡಿದಾಗ ಅವರಿಗೆ ವಯಸ್ಸು ಆಗಿದೆ ಎಂದು ಅನಿಸುವುದೇ ಇಲ್ಲ. ಹೀಗಾಗಿ ಧೋನಿ ಸಹ ತುಂಬ ದಿನಗಳ ಕಾಲ ಆಡಲಿದ್ದಾರೆ ಎಂದು ನನಗೆ ಅನಿಸುತ್ತದೆ ಎಂದು ಕ್ಯಾಪ್ಟನ್‌ ಹೇಳಿದ್ದಾರೆ.

ಕಳೆದ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೊನಿ ಸಿಎಸ್‌ಕೆ ನಾಯಕತ್ವದಿಂದ ಕೆಳಗೆ ಇಳಿದಿದ್ದರು. ಅಲ್ಲದೆ ಇವರ ಸ್ಥಾನದಲ್ಲಿ ರುತುರಾಜ್ ಗಾಯಕ್ವಾಡ್‌ ಅವರನ್ನು ತಂಡದ ನಾಯಕ ಎಂದು ಘೋಷಣೆ ಮಾಡಲಾಯಿತು. ಮಾಹಿ ಈ ಬಾರಿಯ ಐಪಿಎಲ್‌ನಲ್ಲಿ ಮಾಹಿ 7 ಅಥವಾ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದನ್ನು ಕಾಣಬಹುದಾಗಿದೆ.

Story first published: Sunday, March 23, 2025, 15:31 [IST]
Other articles published on Mar 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+