Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಯಾನ್ ಮಾರ್ಗನ್ ಶ್ರೇಷ್ಠ ತಂಡದಲ್ಲಿ ಸಚಿನ್ ಗೆ ಸ್ಥಾನವಿಲ್ಲ!

ಬೆಂಗಳೂರು, ಫೆಬ್ರವರಿ 27: ಇಂಗ್ಲೆಂಡಿನ ಏಕದಿನ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಅವರು ತಮ್ಮ ಆಯ್ಕೆಯ ಶ್ರೇಷ್ಠ XI ಪ್ರಕಟಿಸಿದ್ದಾರೆ. ಇತ್ತೀಚೆಗೆ ನಾಯಕತ್ವ ತೊರೆದ ಸಹ ಆಟಗಾರ ಅಲೆಸ್ಟರ್ ಕುಕ್ ಅವರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗೆ ಸ್ಥಾನ ನೀಡಿಲ್ಲ.

ಲಾರ್ಡ್ ಕ್ರಿಕೆಟ್ ಮೈದಾನದ ಅಧಿಕೃತ ಸಾಮಾಜಿಕ ಜಾಲ ತಾಣ ಐಡಿಯಿಂದ ಈ ತಂಡದ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ಭಾರತದಿಂದ ಮಾಜಿ ನಾಯಕರಾದ ಎಂಎಸ್ ಧೋನಿ ಹಾಗೂ ಅನಿಲ್ ಕುಂಬ್ಳೆ ಮಾತ್ರ ಆಯ್ಕೆ ಮಾಡಲಾಗಿದೆ. ಏಕದಿನ ಕ್ರಿಕೆಟ್ ನಲ್ಲಿ 18,426 ರನ್ ಹಾಗೂ 15,921 ಟೆಸ್ಟ್ ರನ್ ಗಳಿಸಿರುವ ಸಚಿನ್ ಅವರನ್ನು ಕಡೆಗಣಿಸಲಾಗಿದೆ.

49 ಏಕದಿನ ಹಾಗೂ 51 ಟೆಸ್ಟ್ ಶತಕ ಗಳಿಸಿರುವ ಸಚಿನ್ ಅವರನ್ನು ಸರ್ ಡೊನಾಲ್ಡ್ ಬ್ರಾಡ್ಮನ್ ನಂತರ ಸರ್ವಶ್ರೇಷ್ಠ ಕ್ರಿಕೆಟರ್ ಎಂದು ಎಲ್ಲರೂ ಪರಿಗಣಿಸಿದ್ದಾರೆ. ತಂಡದಲ್ಲಿ ಮೂವರು ದಕ್ಷಿಣ ಆಫ್ರಿಕಾದ ಕ್ರಿಕೆಟರ್ಸ್ ಇದ್ದಾರೆ. ಸಚಿನ್ ಬದಲಿಗೆ ವೆಸ್ಟ್ ಇಂಡೀಸ್ ನ ದಿಗ್ಗಜ ಬ್ರಿಯಾನ್ ಲಾರಾ ಅವರನ್ನು ಆಯ್ಕೆ ಮಾಡಲಾಗಿದೆ. ಮಿಚೆಲ್ ಜಾನ್ಸನ್ ಹನ್ನೊಂದನೇ ಆಟಗಾರ ಎನಿಸಿಕೊಂಡಿದ್ದಾರೆ.

MS Dhoni, Anil Kumble feature in Eoin Morgan's all-time XI; no place for Sachin Tendulkar


ಮಾರ್ಗನ್ ಆಯ್ಕೆಯ XI :
1. ಅಲೆಸ್ಟರ್ ಕುಕ್ (ಇಂಗ್ಲೆಂಡ್)
2. ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ)
3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
4. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
5. ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ)
6. ಕುಮಾರ್ ಸಂಗಕ್ಕಾರ (ಶ್ರೀಲಂಕಾ)
7. ಎಂಎಸ್ ಧೋನಿ (ಭಾರತ)
8. ಅನಿಲ್ ಕುಂಬ್ಳೆ (ಭಾರತ)
9. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್)
10. ಡೇಲ್ ಸ್ಟೇನ್ (ದಕ್ಷಿಣ ಅಫ್ರಿಕಾ)
11. ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+