For Quick Alerts
ALLOW NOTIFICATIONS  
For Daily Alerts
 

20 ಕೆ.ಜಿ ತೂಕ ಇಳಿಸು ತಂಡಕ್ಕೆ ಸೇರಿಸಿಕೊಳ್ಳುವೆ: ಧೋನಿ ಹೀಗೆ ಹೇಳಿದ್ದು ಯಾರಿಗೆ?

ಐಪಿಎಲ್ ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಲೀಗ್. ಇದರಲ್ಲಿ ಭಾರತವನ್ನು ಹೊರತುಪಡಿಸಿ, ವಿದೇಶಿ ಆಟಗಾರರು ಸಹ ಆಡಲು ಬಯಸುತ್ತಾರೆ. ಐಪಿಎಲ್ ಆಡುವುದು ಎಲ್ಲ ಆಟಗಾರರ ಕನಸು. ಇಲ್ಲಿ ಆಡ ಬೇಕು ಹೆಸರು ಹಾಗೂ ದುಡ್ಡ ಮಾಡಬೇಕು ಎಂಬುದೇ ಎಲ್ಲ ಪ್ಲೇಯರ್‌ ಆಸೆ. ಐಪಿಎಲ್‌ನಲ್ಲಿ ಆಡಿದ ಮೇಲೆ ಅದೆಷ್ಟೋ ಆಟಗಾರರಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ವಿಶ್ವದ ಬೇರೆ ಬೇರೆ ದೇಶಗಳ ಆಟಗಾರರು ಸಹ ಈ ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಾರೆ.

ಅಫ್ಘಾನಿಸ್ತಾನದ ಮೊಹಮ್ಮದ್ ಶಹಜಾದ್‌ಗೆ ಐಪಿಎಲ್‌ನಲ್ಲಿ ತಮ್ಮ ತಂಡದೊಂದಿಗೆ ಆಡಲು ಧೋನಿ ಆಫರ್ ನೀಡಿದ್ದರು. ಆದರೆ ಮಹಿ ಒಂದು ಷರತ್ತು ಹಾಕಿದ್ದರು ಮತ್ತು ತೂಕ ಇಳಿಸಿಕೊಳ್ಳುವಂತೆ ಶಹಜಾದ್‌ಗೆ ಕಿವಿ ಮಾತು ನೀಡಿದರು.

MS Dhoni Asked Afghanistan Player To Lose Weight

ಈ ವಿಷಯವನ್ನು ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಅಫ್ಘಾನ್ ಇದನ್ನು ಬಹಿರಂಗಪಡಿಸಿದ್ದಾರೆ. ಆದರೆ ಶೆಹಜಾದ್ 20 ಕೆಜಿ ತೂಕ ಇಳಿಸಿಕೊಂಡರೆ ಮಾತ್ರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದಾಗಿ ಮಹಿ ಷರತ್ತು ಹಾಕಿದ್ದರು.

ನಾನು ಧೋನಿ ಅವರೊಂದಿಗೆ ಈ ಶಹಜಾದ್ ಬಗ್ಗೆ ಮಾತನಾಡಿದ್ದೇನೆ. ಶಹಜಾದ್ ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದ್ದೇನೆ. ಆದ್ದರಿಂದ ಅವರು 20 ಕೆಜಿ ತೂಕವನ್ನು ಕಳೆದುಕೊಂಡರೆ ನಾನು ಅವರನ್ನು ನನ್ನ ತಂಡಕ್ಕೆ ಸೇರಿಸಿಕೊಳ್ಳುತ್ತೇನೆ ಎಂದು ಹೇಳಿದರು. ಆದರೆ ಶಹಜಾದ್ ತೂಕ ಇಳಿಸುವ ಬದಲು ಐದು ಕಿಲೋಗಳಷ್ಟು ಹೆಚ್ಚಿಸಿಕೊಂಡಿದ್ದರು ಎಂದು ಅಸ್ಗರ್ ಅಫ್ಘಾನ್ ತಿಳಿಸಿದ್ದಾರೆ.

MS Dhoni Asked Afghanistan Player To Lose Weight

ಅಫ್ಘಾನಿಸ್ತಾನದ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಿರುವ ಮೊಹಮ್ಮದ್ ಶಹಜಾದ್ ಕೆಲವು ಸಮಯದಿಂದ ತಂಡದಿಂದ ಹೊರಗುಳಿದಿದ್ದಾರೆ. ಏಷ್ಯನ್ ಗೇಮ್ಸ್ 2023ರಲ್ಲಿ ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದಲ್ಲದೆ, ಅವರು ಕೊನೆಯ ಬಾರಿಗೆ 2019 ರಲ್ಲಿ ಏಕದಿನ ಮತ್ತು ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿಯವರೆಗೆ ಅವರು 2 ಟೆಸ್ಟ್, 84 ಏಕದಿನ ಮತ್ತು 73 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 69 ರನ್ ಗಳಿಸಿದ್ದು, ಏಕದಿನ ಕ್ರಿಕೆಟ್‌ನಲ್ಲಿ 2727 ರನ್‌ಗಳನ್ನು ಮತ್ತು ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2048 ರನ್‌ಗಳನ್ನು ಗಳಿಸಿದ್ದಾರೆ. ಶಹಜಾದ್ ಏಕದಿನದಲ್ಲಿ 6 ಶತಕ ಮತ್ತು ಟಿ20 ಅಂತರಾಷ್ಟ್ರೀಯ 1 ಶತಕ ಗಳಿಸಿದ್ದಾರೆ.

Story first published: Saturday, December 9, 2023, 11:15 [IST]
Other articles published on Dec 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+