ಧೋನಿ ಐಪಿಎಲ್‌ನಲ್ಲಿ 200 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ

ಬೆಂಗಳೂರು, ಏಪ್ರಿಲ್ 22: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 200 ಸಿಕ್ಸರ್‌ಗಳ ಗಡಿ ದಾಟಿದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅಜೇಯ 84 ರನ್‌ಗಳನ್ನು ಸಿಡಿಸಿದ ಧೋನಿ, ಐಪಿಎಲ್ ವೃತ್ತಿ ಬದುಕಿನಲ್ಲಿ ಒಟ್ಟು 203 ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ಬರೆದಿದ್ದಾರೆ.
ಇನ್ನು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 5 ಫೋರ್ ಮತ್ತು 7 ಭರ್ಜರಿಯ ಸಿಕ್ಸರ್ ಸಿಡಿಸಿದರೂ ತಂಡಕ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ಅಂತಿಮ ಎಸೆತದವರೆಗೂ ರೋಚಕತೆ ಹಿಡಿದಿಟ್ಟಿದ್ದ ಪಂದ್ಯದಲ್ಲಿ ಚಾಲೆಂಜರ್ಸ್ 1 ರನ್ ರೋಚಕ ಗೆಲುವಿನ ಸಿಹಿಯುಂಡಿತು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 162 ರನ್‌ಗಳನ್ನು ಗಳಿಸಿದರೆ, ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 160 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿ ಐಪಿಎಲ್ 2019ರಲ್ಲಿ ಸತತ 2ನೇ ಸೋಲುಂಡಿತು.

ಒಟ್ಟಾರೆ ಮೂರನೇ ಸ್ಥಾನದಲ್ಲಿ ಧೋನಿ
37 ವರ್ಷದ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ, ಪ್ರಸಕ್ತ ಐಪಿಎಲ್‌ನಲ್ಲಿಆಡಿದ 9 ಪಂದ್ಯಗಳಲ್ಲಿ ಒಟ್ಟು 17 ಸಿಕ್ಸರ್‌ಗಳನ್ನುಸಿಡಿಸಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲಿ 184 ಪಂದ್ಯಗಳಲ್ಲಿ 4330 ರನ್, 23 ಅಧಶತಕಗಳು ಮತ್ತು 203 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಸಾರ್ವಕಾಲಿಕ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರ ಪೈಕಿ 3ನೇ ಸ್ಥಾನದಲ್ಲಿದ್ದಾರೆ.

ಕ್ರಿಸ್ ಗೇಲ್ ಅತಿ ಹೆಚ್ಚು ಸಿಕ್ಸರ್
ಯೂನಿವರ್ಸ್ ಬಾಸ್ ಕ್ರಿಸ್ಟೋಫರ್ ಹೆನ್ರಿ ಗೇಲ್ ಐಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಮತ್ತು ಗರಿಷ್ಠ ಮೊತ್ತ ದಾಖಲಿಸಿದ ಹೆಗ್ಗಳಿಕೆಯನ್ನೂ ಹೊಂದಿರುವ ಗೇಲ್, 121 ಪಂದ್ಯಗಳಲ್ಲಿ 4415 ರನ್, 6 ಶತಕ, 28 ಅರ್ಧಶತಕ ಮತ್ತು ಬರೋಬ್ಬರಿ 323 ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದ್ದಾರೆ. ಇನಿಂಗ್ಸ್ ಒಂದರಲ್ಲಿ ಅಜೇಯ 175 ರನ್‌ಗಳನ್ನು ಸಿಡಿಸಿರುವುದು ಅವರ ಶ್ರೇಷ್ಠ ಬ್ಯಾಟಿಂಗ್ ಸಾಧನೆ ಕೂಡ.

ದ್ವಿತೀಯ ಸ್ಥಾನದಲ್ಲಿ ಡಿ'ವಿಲಿಯರ್ಸ್
ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರ ಸಮಗ್ರ ಪಟ್ಟಿಯಲ್ಲಿದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಾಗೂ ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತಿ ಪಡೆದಿರುವ
ಅಬ್ರಾಹಾಮ್ ಡಿ'ವಿಲಿಯರ್ಸ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಂದಹಾಗೆ ಐಪಿಎಲ್‌ನಲ್ಲಿ 200ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಶ್ರೇಯ ಎಬಿಡಿ ಅವರದ್ದು. ಐಪಿಎಲ್‌ನಲ್ಲಿ 150 ಪಂದ್ಯಗಳನ್ನು ಆಡಿರುವ ವಿಲಿಯರ್ಸ್, 4285 ರನ್, 3 ಶತಕ, 32 ಶತಕ ಮತ್ತು 204 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ದ್ವಿಶತಕದ ರೇಸ್‌ನಲ್ಲಿ ರೈನಾ, ರೋಹಿತ್
ಸಿಕ್ಸರ್‌ಗಳ ದ್ವಿಶತಕ ದಾಖಲಿಸುವ ರೇಸ್‌ನಲ್ಲಿ ಟೀಮ್ ಇಂಡಿಯಾದ ಉಪನಾಯಕ ಹಾಗೂ ಮುಂಬಯಿ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ನಂತರದ ಸ್ಥಾನದಲ್ಲಿದ್ದಾರೆ. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ 182 ಪಂದ್ಯಗಳಿಂದ 190 ಸಿಕ್ಸರ್‌ಗಳನ್ನು ಸಿಡಿಸಿದ್ದು, ಅಷ್ಟೇ ಸಿಕ್ಸರ್‌ಗಳನ್ನು ಚಚ್ಚಲು ರೈನಾ 186 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಈ ಇಬ್ಬರಲ್ಲಿ ಯಾರು ಮೊದಲು 200ರ ಗಡಿ ಮುಟ್ಟುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, 173 ಪಂದ್ಯಗಳಿಂದ ಒಟ್ಟು 186 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications