Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಉದ್ದ ಕೂದಲಿನ ಸ್ಫೋಟಕ ಆಟಗಾರನಿಂದ 'ಧೋನಿ ರಿವ್ಯೂ ಸಿಸ್ಟಮ್'ವರೆಗೆ; ಅಭಿಮಾನಿಗಳ ಹೃದಯ ಗೆದ್ದ ನಾಯಕನಿಗೆ ಬರ್ತಡೆ ಸಂಭ್ರಮ

ವಿಶ್ವ ಕ್ರಿಕೆಟ್‌ನಲ್ಲಿ ಅದೆಷ್ಟೋ ಆಟಗಾರರು ತಮ್ಮ ಆಟದಿಂದ ಹೆಸರು ಮಾಡಿದ್ದಾರೆ. ಇದರಲ್ಲಿ ಹಲವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ ಮೂಲಕ ಅಭಿಮಾನಿಗಳಿಗೆ ಹತ್ತಿರವಾದರೆ, ಇನ್ನು ಹಲವು ಆಟಗಾರರು ತಮ್ಮ ಫೀಲ್ಡಿಂಗ್ ಮೂಲಕ ಸದ್ದು ಮಾಡಿದ್ದಾರೆ. ಇನ್ನು ಕೆಲವು ಆಟಗಾರರು ನಾಯಕತ್ವದಿಂದ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಈ ಸಾಲಿನಲ್ಲಿ ಎದ್ದು ಕಾಣುವ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಆಟಗಾರ ಕೂಲ್‌ ಕ್ಯಾಪ್ಟನ್‌ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ.

ಟೀಮ್ ಇಂಡಿಯಾದ ಯಶಸ್ವಿ ನಾಯಕ ಎಂದೇ ಖ್ಯಾತಿ ಪಡೆದ ಧೋನಿ ಅವರಿಗೆ ಮಂಗಳವಾರ (ಜು.7) ಹುಟ್ಟುಹಬ್ಬದ ಸಂಭ್ರಮ. ತಮ್ಮ ಸ್ಫೋಟಕ ಬ್ಯಾಟಿಂಗ್‌ ಹಾಗೂ ನಾಯಕತ್ವದ ಮೂಲಕ ಹೆಸರು ಮಾಡಿದ ಧೋನಿ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಶುಭ ಕೋರಿದ್ದಾರೆ. ಇವರ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧೋನಿ ಅವರ ನಾಯಕತ್ವದ ದಾಖಲೆಗಳ ವರದಿ ಇಲ್ಲಿದೆ.

MS Dhoni Birthday

2004ರ ಡಿಸೆಂಬರ್ 23 ರಂದು ಬಾಂಗ್ಲಾದೇಶ ವಿರುದ್ಧ ಮಹೇಂದ್ರ ಸಿಂಗ್ ಧೋನಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡರು. ಇವರು ಆರಂಭದಲ್ಲಿ ಮೈದಾನಕ್ಕೆ ಇಳಿದಾಗ ಎಲ್ಲರ ಚಿತ್ತವನ್ನು ಕದ್ದ ಆಟಗಾರ. ಉದ್ದ ಉದ್ದ ಕೂದಲುಗಳಿಂದ ಇವರು ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ಅಷ್ಟೇ ದೊಡ್ಡ ದೊಡ್ಡ ಸಿಕ್ಸರ್‌ಗಳನ್ನ ಬಾರಿಸುವ ಮೂಲಕ ಎದುರಾಳಿ ಬೌಲರ್‌ಗಳನ್ನು ಕಾಡಿದ ಆಟಗಾರ.

ಯಶಸ್ವಿ ನಾಯಕ ಮಾಹಿ

ಟೀಮ್ ಇಂಡಿಯಾಕ್ಕೆ ಕಾಲಿಟ್ಟ ಮೂರೇ ವರ್ಷಗಳ ಬಳಿಕ ತಂಡದ ಚುಕ್ಕಾಣಿಯನ್ನು ಹಿಡಿದ ಸಾಧನೆ ಮಾಡಿದರು. ಇವರಿಗೆ 2007ರಲ್ಲಿ ಟೀಮ್ ಇಂಡಿಯಾವನ್ನು ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಇವರ ಮುಂದಾಳತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಇಲ್ಲಿಂದ ಧೋನಿ ಹಿಂತಿರುಗಿ ನೋಡಲೇ ಇಲ್ಲ. ಅಲ್ಲಿಂದ ಇವರು ಭಾರತ ಏಕದಿನ ಹಾಗೂ ಟೆಸ್ಟ್‌ ತಂಡದ ನಾಯಕರಾದರು.

ತಂದೆಗೆ ಪದಾರ್ಪಣೆ ಸುದ್ದಿ ಮೊದಲು ತಿಳಿಸಿದ ವೈಭವ್: ಭಾವುಕ ವಿಡಿಯೋ ಹಂಚಿಕೊಂಡ ಬಿಸಿಸಿಐ!

ತಂದೆಗೆ ಪದಾರ್ಪಣೆ ಸುದ್ದಿ ಮೊದಲು ತಿಳಿಸಿದ ವೈಭವ್: ಭಾವುಕ ವಿಡಿಯೋ ಹಂಚಿಕೊಂಡ ಬಿಸಿಸಿಐ!

ಐಸಿಸಿ ಆಯೋಜಿತ ಮೂರು ಪ್ರಶಸ್ತಿ ಗೆದ್ದ ಮೊದಲ ನಾಯಕ

ಐಸಿಸಿ ಆಯೋಜಿತ ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ ಮೂರು ಫಾರ್ಮೆಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಧೋನಿ ಅವರಿಗೆ ಸಲ್ಲುತ್ತದೆ. ಅಲ್ಲದೆ ಈ ಸಾಧನೆ ಮಾಡಿದ ಮೊದಲ ವಿಶ್ವದ ನಾಯಕ ಎಂಬ ಹೆಗ್ಗಳಿಕೆ ಧೋನಿ ಅವರದ್ದಾಗಿದೆ. 2007ರಲ್ಲಿ ಧೋನಿ ನಾಯಕತ್ವದಲ್ಲಿ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ ಎತ್ತಿದ್ದ ಭಾರತ ಸಾಧನೆ ಮಾಡಿತ್ತು. ಇನ್ನು ತವರಿನಲ್ಲಿ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಗೆದ್ದ ನಾಯಕ ಎಂಬ ಹಿರಿಮೆ ಸಹ ಧೋನಿ ಅವರದ್ದಾಗಿದೆ. ಅಲ್ಲದೆ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಾಳತ್ವದಲ್ಲಿ ಟ್ರೋಫಿ ಗೆದ್ದು ಭಾರತ ದಾಖಲೆ ಬರೆದಿತ್ತು.

ಐಪಿಎಲ್‌ನಲ್ಲಿ ಎಂ.ಎಸ್. ಧೋನಿ ಅವರ ಯಶಸ್ವಿ ನಾಯಕ. ಟೂರ್ನಿಯ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನ ಹಿಂದಿನ ಮುಖ್ಯ ರೂವಾರಿ. ತಮ್ಮ ಅತ್ಯದ್ಭುತ ನಾಯಕತ್ವ ಮತ್ತು ತಂತ್ರಗಾರಿಕೆಯಿಂದ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲೂ ಅತ್ಯಂತ ಶಾಂತವಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಇವರು ಹೆಸರುವಾಸಿ. ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಮತ್ತು ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕ ಧೋನಿ.

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ವೈಭವ್‌ಗೆ ಚಾನ್ಸ್‌, ಸಂಜು ಔಟ್‌.. ಇಲ್ಲಿದೆ ಪಟ್ಟಿ

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ವೈಭವ್‌ಗೆ ಚಾನ್ಸ್‌, ಸಂಜು ಔಟ್‌.. ಇಲ್ಲಿದೆ ಪಟ್ಟಿ

ಧೋನಿ ಅವರು ಮೂರೂ ಮಾದರಿಗಳಲ್ಲಿ ಒಟ್ಟು 332 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ವಿಶ್ವದಲ್ಲೇ ಯಾವುದೇ ಒಬ್ಬ ನಾಯಕ ಮುನ್ನಡೆಸಿದ ಅತಿ ಹೆಚ್ಚು ಪಂದ್ಯಗಳ ದಾಖಲೆ ಇದಾಗಿದೆ. ಈ ವೇಳೆ ಧೋನಿ 178 ಪಂದ್ಯಗಳಲ್ಲಿ ಜಯಗಳಿಸಿದ್ದು, 120 ಪಂದ್ಯದಲ್ಲಿ ಸೋತಿದ್ದಾರೆ.

ಡಿಆರ್‌ಎಸ್‌ ಪರಿಣಿತ

ಧೋನಿ ತಮ್ಮ ನಾಯಕತ್ವದಿಂದ ಎಷ್ಟು ಸುದ್ದಿ ಮಾಡಿದ್ದಾರೋ, ಅಷ್ಟೇ ಸುದ್ದಿಯನ್ನು ಡಿಆರ್‌ಎಸ್‌ ಪಡೆಯುವಲ್ಲಿ ಮಾಡಿದ್ದಾರೆ. ಧೋನಿ ಪಡೆಯುವ ಡಿಆರ್‌ಎಸ್‌ಗಳು ಸಾಮಾನ್ಯವಾಗಿ ಪರ್ಫೆಕ್ಟ್ ಆಗಿರುತ್ತವೆ. ಹೀಗಾಗಿ ಅಭಿಮಾನಿಗಳು ಇದನ್ನು ಧೋನಿ ರಿವ್ಯೂ ಸಿಸ್ಟಮ್ ಎಂದೇ ಕರೆಯುತ್ತಾರೆ.

Story first published: Tuesday, July 7, 2026, 5:00 [IST]
Other articles published on Jul 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+