Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಡಿಯೋ: ಧೋನಿ- ಕುಲದೀಪ್ ಕೇಕ್ ಮುಖಕ್ಕೆ ಮೆತ್ತುವ ಆಟ

ಧೋನಿ ಮುಖಕ್ಕೆ ಕೇಕ್ ಮೆತ್ತುವ ಧೈರ್ಯ ಮಾಡಿದ್ದು ಯಾರು ? | Oneindia Kannada
MS Dhoni Birthday Celebration : Kuldeep Yadav cake smearing stunt

ಕಾರ್ಡಿಫ್, ಜುಲೈ 08: ಅತಿಥೇಯ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20ಐ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಧೋನಿ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಕಾರ್ಡಿಫ್ ನಲ್ಲಿರುವ ಟೀಂ ಇಂಡಿಯಾದ ಆಟಗಾರರ ಜತೆ ಡ್ರೆಸಿಂಗ್ ರೂಮಿನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಅವರು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಪ್ರತಿ ಆಟಗಾರರ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಡ್ಡಾಯವೆಂಬಂತೆ ಕೇಕ್ ಮುಖಕ್ಕೆ ಬಳಿಯುವ ಕೆಲ್ಸ ಒಬ್ಬರು ಪಡೆದುಕೊಳ್ಳುತ್ತಾರೆ. ಈ ಬಾರಿ ಚೈನಾಮನ್ ಕುಲದೀಪ್ ಯಾದವ್ ಗೆ ಅವಕಾಶ ಸಿಕ್ಕಿತ್ತು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೂಡಾ ಧೋನಿ ಹುಟ್ಟುಹಬ್ಬವನ್ನು ವಿಡಿಯೋ ಸಂದೇಶ ಮೂಲಕ ಆಚರಿಸಿದೆ. ಪತ್ನಿ ಸಾಕ್ಷಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಧೋನಿ ಜತೆಗಿನ ಫೋಟೊ ಹಾಕಿ, 10 ವರ್ಷಗಳ ಕಾಲ ಬದುಕನ್ನು ಕಲಿಸಿದ ಅದ್ಭುತ ಜೀವಿ ಎಂದು ಧೋನಿಯನ್ನು ಹೊಗಳಿದ್ದಾರೆ. ಪುತ್ರಿ ಜೀವಾ ಕೂಡಾ ಹಾಡುತ್ತಾ, ಆಡುತ್ತಾ, ಅಪ್ಪ ನಿಂಗೆ ವಯಸ್ಸಾಯ್ತು ಎಂದು ಕಿಚಾಯಿಸಿ ಹುಟ್ಟುಹಬ್ಬಕ್ಕೆ ವಿಷ್ ಮಾಡಿದ್ದಾಳೆ.

ಇನ್ನು ಕೇಕ್ ಮೆತ್ತುವ ವಿಷಯಕ್ಕೆ ಬಂದರೆ, ಕುಲದೀಪ್ ಅವರು ಧೋನಿ ಮುಖಕ್ಕೆ ಕೇಕ್ ಮೆತ್ತಿದ ಬಳಿಕ ಧೋನಿ ತಕ್ಷಣವೆ ಸೇಡು ತೀರಿಸಿಕೊಂಡು ಕುಲದೀಪ್ ಮುಖಕ್ಕೆ ಕೇಕ್ ಬಳಿದಿದ್ದಾರೆ. ಬಾಸ್ ರೀತಿ ನಡೆದುಕೊಳ್ಳುತ್ತಿದ್ದರೆ, ಹೀಗೆ ಆಗುತ್ತೆ, ಅವಕಾಶ ಸಿಕ್ಕಾಗ ಎಲ್ಲರೂ ಬಾಸ್ ಗಳೇ ಎಂದು ಧೋನಿ ಅವರು ವಿಶ್ ಮಾಡಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ.

Story first published: Sunday, July 8, 2018, 13:15 [IST]
Other articles published on Jul 8, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+