'ಅತ್ಯದ್ಭುತ ನಾಯಕ, ಯುವ ಆಟಗಾರರಿಗೆ ಸ್ಫೂರ್ತಿ: ಧೋನಿ ಹುಟ್ಟುಹಬ್ಬಕ್ಕೆ ಕ್ರಿಕೆಟಿಗರ ಶುಭಾಶಯಗಳ ಮಹಾಪೂರ

ಎಂಎಸ್ ಧೋನಿ ಇಂದು ( ಜುಲೈ 7 ) 41ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ ಲಂಡನ್ ನಗರದಲ್ಲಿ ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಝಿವಾ ಧೋನಿ ಜತೆ ಪ್ರವಾಸದ ಕ್ಷಣಗಳನ್ನು ಕಳೆಯುತ್ತಿರುವ ಎಂಎಸ್ ಧೋನಿಗೆ ಕ್ರಿಕೆಟ್ ಜಗತ್ತು ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವನ್ನೇ ಹರಿಸಿದೆ.
ಓರ್ವ ಸಾಮಾನ್ಯ ಆಟಗಾರನಾಗಿ ತಂಡಕ್ಕೆ ಪ್ರವೇಶಿಸಿದ ಎಂಎಸ್ ಧೋನಿ ತದನಂತರ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರನಾಗಿ ಭರವಸೆ ಮೂಡಿಸಿದರು ಹಾಗೂ ನಂತರದ ದಿನಗಳಲ್ಲಿ ನಾಯಕನಾಗಿ ಬಡ್ತಿಯನ್ನು ಕೂಡ ಪಡೆದರು. ನಾಯಕನಾದ ಬೆನ್ನಲ್ಲೇ 2007ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿ ಯಶಸ್ವಿಯಾದ ಎಂಎಸ್ ಧೋನಿ 2011ರಲ್ಲಿ ನಾಯಕನಾಗಿ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಿಸುವ ಮೂಲಕ ಟೀಮ್ ಇಂಡಿಯಾಗೆ ಬರೋಬ್ಬರಿ 28 ವರ್ಷಗಳ ಬಳಿಕ ಟ್ರೋಫಿ ತಂದುಕೊಟ್ಟು ಅಪಾರವಾದ ಗೌರವವನ್ನು ಗಳಿಸಿದರು.
2013ರಲ್ಲಿ ಮತ್ತೊಮ್ಮೆ ಐಸಿಸಿ ಟ್ರೋಫಿ ಗೆಲ್ಲಿಸಿದ ಎಂಎಸ್ ಧೋನಿ ಟೀಮ್ ಇಂಡಿಯಾಗೆ ಚಾಂಪಿಯನ್ಸ್ ಟ್ರೋಫಿಯನ್ನು ತಂದುಕೊಟ್ಟರು. ಹೀಗೆ ನಾಯಕನಾಗಿ ಟೀಮ್ ಇಂಡಿಯಾದ ಯಾವುದೇ ನಾಯಕನೂ ಸಾಧಿಸದಷ್ಟು ಯಶಸ್ಸು ಸಾಧಿಸಿರುವ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 4 ಬಾರಿ ಟ್ರೋಫಿ ಗೆದ್ದು ಚಾಣಾಕ್ಷ ನಾಯಕ ಎನಿಸಿಕೊಂಡಿದ್ದಾರೆ. ಹೀಗಾಗಿಯೇ ಎಂಎಸ್ ಧೋನಿ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೇ ವಿದೇಶೀ ಕ್ರಿಕೆಟಿಗರಿಗೂ ಕೂಡ ಸ್ಫೂರ್ತಿಯಾಗಿದ್ದು, ಕ್ರಿಕೆಟ್ ಜಗತ್ತು ಹುಟ್ಟುಹಬ್ಬದ ದಿನದಂದು ಧೋನಿ ಅವರಿಗೆ ಈ ಕೆಳಕಂಡಂತೆ ಹೊಗಳಿ ಶುಭಾಶಯವನ್ನು ಕೋರಿದೆ.
ನಿಮ್ಮಂಥ ನಾಯಕ ಮತ್ಯಾರೂ ಇಲ್ಲ, ಭಾರತೀಯ ಕ್ರಿಕೆಟ್ ಗೆ ನೀವು ಸಲ್ಲಿಸಿದ ಸೇವೆಗೆ ಅನಂತ ಕೃತಜ್ಞತೆಗಳು, ನೀವು ನನ್ನ ಅಣ್ಣನಿಗಿಂತ ಹೆಚ್ಚಾಗಿದ್ದೀರಿ, ಯಾವಾಗಲೂ ಇದೆ ಪ್ರೀತಿ ಮತ್ತು ಗೌರವ ಇರಲಿದೆ ಹುಟ್ಟುಹಬ್ಬದ ಶುಭಾಶಯಗಳು ನಾಯಕ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.
To one of the all times great entertainer & finisher, an inspiration and role model, I wish you a happy birthday sir msdhoni. And sir You are still young & fit enough to play cricket, so please keep entertaining us for atleast few more years❤️🎂. pic.twitter.com/z7ByQtCJwc
— Shahnawaz Dahani (ShahnawazDahani) July 7, 2022
ಇನ್ನಷ್ಟು ವರ್ಷ ಕ್ರಿಕೆಟ್ ಆಡಿ ಎಂದ ಪಾಕ್ ಕ್ರಿಕೆಟಿಗ
ಪಾಕಿಸ್ತಾನದ ಆಟಗಾರ ಶಹನವಾಜ್ ದಹನಿ ಎಂಎಸ್ ಧೋನಿ ಹುಟ್ಟುಹಬ್ಬದಂದು ಧೋನಿ ಜತೆಗಿರುವ ತಮ್ಮ ಚಿತ್ರವನ್ನು ಟ್ವೀಟ್ ಮಾಡಿದ್ದು, ಸಾರ್ವಕಾಲಿಕ ಇನ್ಸ್ಪಿರೇಶನ್, ರೋಲ್ ಮಾಡೆಲ್ ಮತ್ತು ಎಂಟರ್ ಟೈನರ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಹಾಗೂ ನೀವು ಇನ್ನೂ ಫಿಟ್ ಆಗಿದ್ದು ಮತ್ತಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡಿ ನಮ್ಮನ್ನು ಮನರಂಜಿಸಬೇಕು ಎಂದೂ ಸಹ ದಹನಿ ಈ ವೇಳೆ ಬರೆದುಕೊಂಡಿದ್ದಾರೆ.

ನಿಮ್ಮ ನಾಯಕತ್ವದಲ್ಲಿ ಆಡಿದ್ದು ಅದೃಷ್ಟ
ಎಸ್ ಬದ್ರಿನಾಥ್ ಟ್ವೀಟ್ ಮಾಡಿದ್ದು, ಎಂಎಸ್ ಧೋನಿ ಮೈದಾನದಲ್ಲಿ ಓರ್ವ ಆಕ್ರಮಣಕಾರಿ ಆಟಗಾರ ಮತ್ತು ಉತ್ತಮ ನಾಯಕ ಮಾತ್ರವಲ್ಲ, ಮೈದಾನದಿಂದಾಚೆಗೆ ಓರ್ವ ಅತ್ಯದ್ಭುತ ವ್ಯಕ್ತಿ ಕೂಡ ಹೌದು ಎಂದು ಬರೆದುಕೊಂಡಿದ್ದಾರೆ. ಇಂಥ ವ್ಯಕ್ತಿಯ ನಾಯಕತ್ವದಡಿಯಲ್ಲಿ ಟೀಮ್ ಇಂಡಿಯಾ ಪರ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಬದ್ರಿನಾಥ್ ಉಲ್ಲೇಖಿಸಿದ್ದಾರೆ.

ಯುವ ಆಟಗಾರರಿಗೆ ಈತ ಅತ್ಯುತ್ತಮ ಪಾಠ
ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಎಂಎಸ್ ಧೋನಿ ಅವರನ್ನು ಯುವ ಕ್ರಿಕೆಟಿಗರು ಅನುಸರಿಸಬೇಕಾದ ಪಾಠ, ಕಷ್ಟ ಮತ್ತು ಸಂತೋಷದ ಸನ್ನಿವೇಶಗಳಲ್ಲಿ ಹೇಗಿರಬೇಕು ಎಂಬುದನ್ನು ಎಂಎಸ್ ಧೋನಿ ಅವರನ್ನು ನೋಡಿ ಕಲಿಯಬೇಕಿದೆ ಎಂದು ಹೊಗಳಿ ಬರೆದು ಟ್ವೀಟ್ ಮಾಡಿದ್ದಾರೆ. ಅತ್ಯದ್ಭುತ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಉಲ್ಲೇಖಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications