For Quick Alerts
ALLOW NOTIFICATIONS  
For Daily Alerts
 

MS Dhoni Birthday: ಎಂಎಸ್ ಧೋನಿಯ 42ನೇ ಹುಟ್ಟುಹಬ್ಬಕ್ಕೆ ಕುತೂಹಲಕಾರಿ ಪೋಸ್ಟ್ ಮಾಡಿದ ಜಡೇಜಾ

ಭಾರತದ ಕ್ರಿಕೆಟ್ ಲೆಜೆಂಡ್ ಎಂಎಸ್ ಧೋನಿಯ ಶ್ರೇಷ್ಠತೆಯ ಬಗ್ಗೆ ವಿವರಿಸಲು ಪದಗಳೆ ಸಾಕಾಗುವುದಿಲ್ಲ. ದೇಶಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಮತ್ತು ಮೂರು ಐಸಿಸಿ ಟ್ರೋಫಿಗಳನ್ನು ತಂದುಕೊಟ್ಟ ಏಕೈಕ ನಾಯಕನಾಗಿದ್ದಾರೆ.

ಅಷ್ಟೇ ಅಲ್ಲದೆ, ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ನ ಪಟ್ಟಕ್ಕೇರಿಸಿದ್ದಾರೆ. ತಮ್ಮ ನಾಯಕತ್ವ ಕೌಶಲ್ಯ ಮತ್ತು ಮೈದಾನದಲ್ಲಿ ಶಾಂತ ಸ್ವಭಾವದಿಂದ ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವವಾಗಿದ್ದಾರೆ.

MS Dhoni Birthday: Ravindra Jadeja Wishes To MS Dhoni On His 42nd Birthday

ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು ಇಂದು (ಜುಲೈ 7) 42ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದೇ ವೇಳೆ ಸಿಎಸ್‌ಕೆ ತಂಡದ ಸಹ ಆಟಗಾರ ಮತ್ತು ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ತನ್ನ ಗುರುವಿಗೆ ವಿಶೇಷ ಹಾರೈಕೆ ತಿಳಿಸಿದ್ದಾರೆ.

2023ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ತನ್ನ ಐದನೇ ಪ್ರಶಸ್ತಿ ಗೆಲ್ಲಲು ಗೆಲುವಿನ ರನ್‌ಗಳನ್ನು ಬಾರಿಸಿದ ರವೀಂದ್ರ ಜಡೇಜಾ, 2009ರಿಂದ ಎಂಎಸ್ ಧೋನಿಯನ್ನು ತನ್ನ ತನ್ನ ಆಯ್ಕೆಯ ನೆಚ್ಚಿನ ವ್ಯಕ್ತಿ ಎಂದು ಕರೆದಿದ್ದಾರೆ.

ಇನ್ನು ಎಂಎಸ್ ಧೋನಿ ಅವರನ್ನು ಮತ್ತೆ ಸಿಎಸ್‌ಕೆ ತಂಡದ ಹಳದಿ ಜೆರ್ಸಿಯಲ್ಲಿ ನೋಡುವುದಾಗಿ ಬಯಕೆ ವ್ಯಕ್ತಪಡಿಸಿದ್ದಾರೆ. ಇದು ಧೋನಿ ಅಭಿಮಾನಿಗಳಿಗೆ ಸುಳಿವು ನೀಡಿದ್ದು, ಐಪಿಎಲ್‌ನ ಮುಂದಿನ ಆವೃತ್ತಿಯಲ್ಲಿಯೂ ಮೈದಾನಕ್ಕಿಳಿಯಲಿದ್ದಾರೆ ಎನ್ನುವುದು ಬಹುಶಃ ಖಚಿತವಾದಂತಿದೆ.

""2009ರಿಂದ ಇಲ್ಲಿಯವರೆಗೆ ಮತ್ತು ಎಂದೆಂದಿಗೂ ನನ್ನ ನೆಚ್ಚಿನ ವ್ಯಕ್ತಿಯಾಗಿದ್ದಾರೆ. ಮಹಿ ಭಾಯ್ ನಿಮಗೆ ಜನ್ಮದಿನದ ಶುಭಾಶಯಗಳು. ಶೀಘ್ರದಲ್ಲೇ ನಿಮ್ಮನ್ನು ಹಳದಿ ಬಣ್ಣದಲ್ಲಿ ನೋಡುವುದಾಗಿ,'' ಎಂದು ರವೀಂದ್ರ ಜಡೇಜಾ ಟ್ವೀಟ್ ಮಾಡಿದ್ದಾರೆ.

2023ರ ಐಪಿಎಲ್‌ನಲ್ಲಿ ಮೊಣಕಾಲು ನೋವಿನ ನಡುವೆಯೂ ಆಡಿದ ಎಂಎಸ್ ಧೋನಿ, ಐಪಿಎಲ್ ವೃತ್ತಿ ಜೀವನದ ಐದನೇ ಪ್ರಶಸ್ತಿ ಗೆದ್ದು ಸ್ಮರಣೀಯವಾಗಿಸಿಕೊಂಡರು.

ಮುಂದಿನ ವರ್ಷ ಐಪಿಎಲ್ ಆಡುವಿರಾ ಎಂದು ಪ್ರಶ್ನೆ ಕೇಳಿದಾಗ, ವಿದಾಯ ಹೇಳುವುದು ಸರಿಯಾದ ಸಮಯವಾಗಿದೆ. ಆದರೆ, ಅಭಿಮಾನಿಗಳು ಇನ್ನೂ ಮೈದಾನದಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ. ಫಿಟ್‌ನೆಸ್ ಆಧಾರದ ಮೇಲೆ ಕೆಲವೇ ತಿಂಗಳುಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ಸುಮಾರು 15 ವರ್ಷಗಳ ವೃತ್ತಿಜೀವನದೊಂದಿಗೆ, ಎಂಎಸ್ ಧೋನಿ ಪ್ರತಿಷ್ಠಿತ ಟ್ರೋಫಿಗಳು ಮತ್ತು ಪುರಸ್ಕಾರಗಳನ್ನು ಸಂಗ್ರಹಿಸಿದ್ದಾರೆ. ಎಂಎಸ್ ಧೋನಿ ನಾಯಕತ್ವದ ಅವಧಿಯಲ್ಲಿ 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು.

ನಂತರ ಎಂಎಸ್ ಧೋನಿಯ ಅಸಾಧಾರಣ ನಾಯಕತ್ವ ಕೌಶಲ್ಯವು 2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿಗೆ ಕಾರಣವಾಯಿತು. ಬಳಿಕ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಭಾರತದ ಯಶಸ್ಸು ಸಾಧಿಸಿತು.

ಎಂಎಸ್ ಧೋನಿ ರನ್ ದಾಖಲೆ

ಟೆಸ್ಟ್ ಕ್ರಿಕೆಟ್: 90 ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತದ ಮಾಜಿ ನಾಯಕ ಎಂಎಸ್ ಧೋನಿ 38.1ರ ಸರಾಸರಿ ಮತ್ತು 59.1ರ ಸ್ಟ್ರೈಕ್‌ರೇಟ್‌ನಲ್ಲಿ 4876 ರನ್ ಗಳಿಸಿದ್ದಾರೆ.

ಏಕದಿನ ಕ್ರಿಕೆಟ್: 350 ಏಕದಿನ ಪಂದ್ಯಗಳನ್ನಾಡಿರುವ ಎಂಎಸ್ ಧೋನಿ 50.6ರ ಸರಾಸರಿ ಮತ್ತು 87.6ರ ಸ್ಟ್ರೈಕ್‌ರೇಟ್‌ನಲ್ಲಿ 10773 ರನ್ ಬಾರಿಸಿದ್ದಾರೆ.

ಟಿ20 ಕ್ರಿಕೆಟ್: 98 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಎಂಎಸ್ ಧೋನಿ 37.6 ಸರಾಸರಿ ಮತ್ತು 126.1 ಸ್ಟ್ರೈಕ್‌ರೇಟ್‌ನಲ್ಲಿ 1617 ರನ್ ಕಲೆಹಾಕಿದ್ದಾರೆ.

ಐಪಿಎಲ್: 250 ಐಪಿಎಲ್ ಪಂದ್ಯಗಳನ್ನು ಆಡಿದ್ದು, 38.8 ಸರಾಸರಿ ಮತ್ತು 135.9 ಸ್ಟ್ರೈಕ್‌ರೇಟ್‌ನಲ್ಲಿ 5082 ರನ್ ಬಾರಿಸಿದ್ದಾರೆ.

Story first published: Friday, July 7, 2023, 14:20 [IST]
Other articles published on Jul 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+