For Quick Alerts
ALLOW NOTIFICATIONS  
For Daily Alerts
 

ಸಚಿನ್ 'ಸಿಕ್ಸರ್' ದಾಖಲೆ ಮುರಿದ ಕ್ಯಾಪ್ಟನ್ ಎಂಎಸ್ ಧೋನಿ

ಧೋನಿ ಅವರು ವಿಕೆಟ್ ಕೀಪರ್, ನಾಯಕ ಹಾಗೂ ಬ್ಯಾಟ್ಸ್ ಮನ್ ಆಗಿ ದಾಖಲೆಗಳನ್ನು ಸಾಧಿಸಿದ್ದಾರೆ. ಸಿಕ್ಸರ್ ಬಾರಿಸುವುದರಲ್ಲಿ ರಿಕಿ ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ.

By Mahesh

ಮೊಹಾಲಿ, ಅಕ್ಟೋಬರ್ 23: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ದಾಖಲೆಗಳನ್ನು ಚೂರು ಚೂರು ಮಾಡಿದ್ದಾರೆ. ಧೋನಿ ಅವರು ವಿಕೆಟ್ ಕೀಪರ್, ನಾಯಕ ಹಾಗೂ ಬ್ಯಾಟ್ಸ್ ಮನ್ ಆಗಿ ದಾಖಲೆಗಳನ್ನು ಸಾಧಿಸಿದ್ದಾರೆ. ಸಿಕ್ಸರ್ ಬಾರಿಸುವುದರಲ್ಲಿ ರಿಕಿ ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ.

35 ವರ್ಷ ವಯಸ್ಸಿನ ಮಹೇಂದ್ರ ಸಿಂಗ್ ಧೋನಿ ಅವರು ನಾಯಕರಾಗಿ 124ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ನಾಯಕನಾಗಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ್ದ ರಿಕಿ ಪಾಂಟಿಂಗ್ (123) ದಾಖಲೆ ಮುರಿದರು. ಇದರ ಜತೆಗೆ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದ ಸಚಿನ್ ಅವರ ದಾಖಲೆಯನ್ನು ಬದಿಗೊತ್ತಿದರು.[ಧೋನಿ ಈಗ 9 ಸಾವಿರ ರನ್ ಗಳ ಸರದಾರ]

MS Dhoni breaks Sachin Tendulkar record Most Sixes in ODI by Indian

ಮೊಹಲಿಯ ಪಿಸಿಎ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದ 27ನೇ ಓವರ್‌ನಲ್ಲಿ ಅವರು ನಿಶಾಮ್ ಎಸೆತವನ್ನು ಸಿಕ್ಸ್ ಬಾರಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 196ನೇ ಸಿಕ್ಸರ್ ಗಳಿಸಿದರು. ಇದರೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆ (195) ಮುರಿದರು. ಅವರು ಈ ಪಂದ್ಯದಲ್ಲಿ ಒಟ್ಟು ಮೂರು ಸಿಕ್ಸರ್‌ಗಳನ್ನು ಹೊಡೆದರು. ಒಂದೇ ಪಂದ್ಯದಲ್ಲಿ ನಾಯಕನಾಗಿ, ಆಟಗಾರನಾಗಿ ಅತಿ ಹೆಚ್ಚು ಸಿಕ್ಸರ್ ದಾಖಲೆಯನ್ನು ಮುರಿದರು.[ಕೊಹ್ಲಿ ಭರ್ಜರಿ ಶತಕ, ಧೋನಿ ಜತೆಯಾಟಕ್ಕೆ ಶರಣಾದ ಕಿವೀಸ್]

ಧೋನಿ ಈಗ ಅತಿ ಹೆಚ್ಚು ಸಿಕ್ಸರ್‌ ಗಳಿಸಿದ ಭಾರತದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ವಿಶ್ವಮಟ್ಟದಲ್ಲಿ ಈಗ ಐದನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶಾಹೀದ್ ಆಫ್ರಿದಿ (351) ಮೊದಲ ಸ್ಥಾನದಲ್ಲಿದ್ದಾರೆ.[ಸ್ಟಾರ್ ಕ್ರಿಕೆಟರ್ಸ್ ನಿಂದ ಅಮ್ಮನಿಗಾಗಿ ವಿಡಿಯೋ]

ಈ ಪಂದ್ಯದಲ್ಲಿ ಎಂಎಸ್ ಧೋನಿ ಅವರು 9,000ರನ್ ಗಳಿಸಿದರು, ಈ ಸಾಧನೆ ಮಾಡಿದ ಭಾರತದ 5ನೇ ಮತ್ತು ವಿಶ್ವದ 17ನೇ ಆಟಗಾರ, ಮೂರನೇ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 80ರನ್ (91 ಎಸೆತಗಳು, 6X4, 3X6) ಗಳಿಸಿ ವಿರಾಟ್ ಕೊಹ್ಲಿ ಅವರಿಗೆ ಉತ್ತಮ ಸಾಥ್ ನೀಡಿ ಪಂದ್ಯದ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.[ಏಕದಿನ ಕ್ರಿಕೆಟ್ ನಲ್ಲಿ ಧೋನಿಯೇ 'ಕ್ಯಾಪ್ಟನ್ ಕಿಂಗ್'] (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+