ವಿಂಟೇಜ್ ಲ್ಯಾಂಡ್ ರೋವರ್ ಖರೀದಿಸಿದ ಧೋನಿ: ಮಾಹಿ ಗ್ಯಾರೇಜ್‌ಗೆ ಮತ್ತೊಂದು ಕಾರು ಸೇರ್ಪಡೆ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬೈಕ್ ಮತ್ತು ಕಾರಿನ ಮೇಲಿನ ಪ್ರೀತಿ ಅಷ್ಟಿಷ್ಟಲ್ಲ. ಹೊಸ ಕಾರು, ಬೈಕ್‌ಗಳ ಖರೀದಿ ಜೊತೆಗೆ ವಿಂಟೇಜ್ ಕಾರುಗಳ ಖರೀದಿಸುತ್ತಾ ತನ್ನ ಗ್ಯಾರೇಜ್‌ನಲ್ಲಿಡುತ್ತಾರೆ.
ವರದಿಗಳ ಪ್ರಕಾರ, ಧೋನಿ ಎಸ್‌ಯುವಿಗಳ ಬಗ್ಗೆ ಪ್ರೀತಿಯನ್ನು ಹೊಂದಿದ್ದಾರೆ ಮತ್ತು ಹಮ್ಮರ್ H2, ನಿಸ್ಸಾನ್ 1 ಟನ್ ಜೊಂಗಾ ಮತ್ತು ಅತ್ಯಂತ ಶಕ್ತಿಶಾಲಿ SUV ಜೀಪ್ ಗ್ರ್ಯಾಂಡ್ ಚೆರೋಕೀ ಟ್ರ್ಯಾಕ್‌ಹಾಕ್ ಅನ್ನು ಹೊಂದಿದ್ದಾರೆ.
ತಮ್ಮ ಫಾರ್ಮ್ ಹೌಸ್‌ನಲ್ಲಿ ಧೋನಿ ವಿಶೇಷವಾಗಿ ವಿನ್ಯಾಸಗೊಳಿಸಿದ ಗ್ಯಾರೇಜ್ ಅನ್ನೇ ನಿರ್ಮಾಣ ಮಾಡಿದ್ದು, ಈ ಗ್ಯಾರೇಜ್‌ನಲ್ಲಿ ಧೋನಿ ತನ್ನಿಷ್ಷಟದ ಹಲವಾರು ಬೈಕ್‌ಗಳು ಹಾಗೂ ವಿವಿಧ ಕಾರುಗಳಿವೆ. ಧೋನಿ ಗ್ಯಾರೇಜ್‌ನಲ್ಲಿ ಕೇವಲ ಹೊಸ ವಾಹನಗಳು ಮಾತ್ರವಲ್ಲ ಅಪರೂಪದ ಹಳೆಯ ವಾಹನಗಳ ದೊಡ್ಡ ಸಂಗ್ರವೇ ಇದ್ದು, ಇದೀಗ ಮತ್ತೊಂದು ವಿಂಟೇಜ್ ಕಾರು ಎಂಟ್ರಿ ಕೊಟ್ಟಿದೆ.

1971ರ ಲ್ಯಾಂಡ್ ರೋವರ್ ಸೀರಿಸ್ 3
ಇತ್ತೀಚೆಗೆ ನಡೆದ ಆನ್‌ಲೈನ್ ಹರಾಜುವೊಂದರಲ್ಲಿ ಮಹೇಂದ್ರ ಸಿಂಗ್ ಧೋನಿ 1971ರ ಲ್ಯಾಂಡ್ ರೋವರ್ ಸೀರಿಸ್ 3 ಸ್ಟೇಷನ್ ವ್ಯಾಗನ್ ಮಾದರಿಯನ್ನು ಖರೀದಿಸಿದ್ದಾರೆ. ಆನ್‌ಲೈನ್ ಹರಾಜಿನಲ್ಲಿ ರೋಲ್ಸ್ ರಾಯ್ಸ್, ಕ್ಯಾಡಿಲಾಕ್, ಷೆವರ್ಲೆ, ಲ್ಯಾಂಡ್ ರೋವರ್, ಆಸ್ಟಿನ್ ಮಾರ್ಟಿನ್, ಮರ್ಸಿಡಿಸ್ ಬೆಂಝ್ ಒಳಗೊಂಡಂತೆ ಒಟ್ಟು 19 ಕಾರುಗಳಿದ್ದವು. ಈ ಪೈಕಿ ಶೇ. 50 ರಷ್ಟು ವಿಂಟೇಜ್ ಕಾರುಗಳು ಈ ಹರಾಜಿನಲ್ಲಿ ಮಾರಾಟವಾಗಿದ್ದು, ಧೋನಿ ಇದರಲ್ಲಿ ಲ್ಯಾಂಡ್ ರೋವರ್ ಸಿರೀಸ್ 3 ಸ್ಟೇಷನ್ ವ್ಯಾಗನ್ ಖರೀದಿಸಿದ್ದಾರೆ.

ಹಳದಿ ಬಣ್ಣದ ಲ್ಯಾಂಡ್ ರೋವರ್ ಖರೀದಿಸಿದ ಮಾಹಿ
1971 ಲ್ಯಾಂಡ್ ರೋವರ್ ಸಿರೀಸ್ 3 ಸ್ಟೇಷನ್ ವ್ಯಾಗನ್ ಹಳದಿ ಬಣ್ಣದ ಎಸ್‌ಯುವಿ ಆಗಿದೆ. 1971 ರಿಂದ 1985 ರ ನಡುವಿನ ಅತ್ಯಂತ ಜನಪ್ರಿಯ ಲ್ಯಾಂಡ್ ರೋವರ್ ಸರಣಿ ಇದಾಗಿದೆ. ಮಸ್ಟರ್ಡ್ ಮತ್ತು ಬಿಳಿಯ ಡ್ಯುಯಲ್ ಟೋನ್ ಫಿನಿಶ್‌ನಲ್ಲಿ ಈ ಕಾರು ಆಕರ್ಷಕವಾಗಿದೆ.
ಧೋನಿ ಖರೀದಿ ಮಾಡಿರುವ ಮಾದರಿಯು ಯಾವ ವರ್ಷ ಮಾದರಿಯ ಎನ್ನುವ ನಿಖರ ಮಾಹಿತಿ ಇಲ್ಲವಾದರೂ ಹಳದಿ ಬಣ್ಣ ಆಯ್ಕೆಯೊಂದಿಗೆ ಆಕರ್ಷಕ ಕಾರು ಮಾದರಿಯಾಗಿ ಗುರುತಿಸಿಕೊಂಡಿತ್ತು.
ICC Test Rankings: ಏರಿಕೆ ಕಂಡ ವಿರಾಟ್ ಕೊಹ್ಲಿ; ಮತ್ತೆ ಟಾಪ್ 10ಗೆ ಲಗ್ಗೆಯಿಟ್ಟ ಬೂಮ್ರಾ

ಆನ್‌ಲೈನ್ ಹರಾಜಿನಲ್ಲಿ ವಿಂಟೇಜ್ ಕಾರು ಖರೀದಿ
ಬಿಗ್ ಬಾಯ್ ಟಾಯ್ಸ್ ಕಂಪನಿಯು ಇತ್ತೀಚೆಗೆ ಮೊದಲ ಕ್ಲಾಸಿಕ್ ಮತ್ತು ವಿಂಟೇಜ್ ಕಾರುಗಳ ಆನ್‌ಲೈನ್ ಹರಾಜನ್ನು ನಡೆಸಿದ್ದು, ಇದರಲ್ಲಿ ಭಾರೀ ಸಂಖ್ಯೆಯಲ್ಲಿ ವಿಂಟೇಜ್ ಕಾರು ಪ್ರಿಯರು ಭಾಗಿಯಾಗಿದ್ದರು. ಇದೇ ಹರಾಜಿನಲ್ಲಿ ಭಾಗಿಯಾಗಿದ್ದ ಎಂಎಸ್ ಧೋನಿ ತಮ್ಮ ಇಷ್ಟದ ಲ್ಯಾಂಡ್ ರೋವರ್ ಸಿರೀಸ್ 3 ಸ್ಟೇಷನ್ ವ್ಯಾಗನ್ ವಿಂಟೇಜ್ ಕಾರು ಮಾದರಿಯನ್ನು ಭಾರೀ ಮೊತ್ತಕ್ಕೆ ಖರೀದಿಸಿದ್ದಾರೆ.
ಸಿರೀಸ್ 3 ಸ್ಟೇಷನ್ ವ್ಯಾಗನ್ ಮಾದರಿಯು ಲ್ಯಾಂಡ್ ರೋವರ್ ಕಂಪನಿ ನಿರ್ಮಾಣದ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದು, 1971 ರಿಂದ 1985 ರವರೆಗೆ ಇದು ಉತ್ಪಾದನೆಯಲ್ಲಿತ್ತು.
ಕೊನೆಯ ಹಂತದವರೆಗೂ ತಮ್ಮ ಇಷ್ಟದ ಕಾರಿಗೆ ಬಿಡ್ ಮಾಡಿದ ಎಂಎಸ್ ಧೋನಿ ಸೀರಿಸ್ 3 ಸ್ಟೇಷನ್ ವ್ಯಾಗನ್ ಮಾದರಿಯ ಮಾಲೀಕತ್ವ ಪಡೆದುಕೊಂಡಿದ್ದು, ವಿಂಟೇಜ್ ಕಾರು ಉತ್ತಮ ಸ್ಥಿತಿಯಲ್ಲಿ ನಿರ್ವಹಣೆ ಮಾಡಲಾಗಿದೆ. ವಿಂಟೇಜ್ ವಾಹನಗಳ ಖರೀದಿ ಮತ್ತು ಮಾರಾಟದ ವ್ಯವಹಾರದ ಮೇಲೆ ಬಿಗ್ ಬಾಯ್ಸ್ ಟಾಯ್ಸ್ ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ ಸುಮಾರು ರೂ. 100 ಕೋಟಿ ಹೂಡಿಕೆಗೆ ಮುಂದಾಗಿದೆ.
ಮ್ಯಾಕ್ಸಿ ಅಬ್ಬರದ ಬ್ಯಾಟಿಂಗ್: 64 ಎಸೆತಗಳಲ್ಲಿ ಅಜೇಯ 154 ರನ್ ಸಿಡಿಸಿದ ಮ್ಯಾಕ್ಸ್‌ವೆಲ್

ಐಪಿಎಲ್ 15ನೇ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿರುವ ಧೋನಿ
ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿಯನ್ನ ಮತ್ತೆ ಕ್ರೀಸ್‌ನಲ್ಲಿ ನೋಡುವುದು ಮುಂಬರುವ ಐಪಿಎಲ್ 15ನೇ ಆವೃತ್ತಿಯಲ್ಲಿ ಸಾಧ್ಯವಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ತಲ ಮಹೇಂದ್ರ ಸಿಂಗ್ ಧೋನಿ ರೀಟೈನ್ ಆದ ಎರಡನೇ ಆಟಗಾರನಾಗಿದ್ದು, 12 ಕೋಟಿ ರೂಪಾಯಿಗೆ ಧೋನಿ ರೀಟೈನ್ ಆಗಿರುವುದು ಚೆನ್ನೈ ಅಭಿಮಾನಿಗಳಲ್ಲಿ ಖುಷಿ ತರಿಸಿದೆ. ರವೀಂದ್ರ ಜಡೇಜಾ ರೀಟೈನ್ ಆದ ಮೊದಲ ಪ್ಲೇಯರ್ ಆಗಿ ಹೊರಹೊಮ್ಮಿದ್ದು, ಜಡ್ಡು 16 ಕೋಟಿಗೆ ರೀಟೈನ್ ಆಗಿದ್ದಾರೆ.
ಸಿಎಸ್‌ಕೆ ಮೂರು ಮತ್ತು ನಾಲ್ಕನೇ ಆಟಗಾರರ ರೀಟೈನ್ ಆಗಿ ಮೋಯಿನ್ ಅಲಿ ಹಾಗೂ ರುತುರಾಜ್ ಗಾಯಕ್ವಾಡ್‌ರನ್ನ ಆಯ್ಕೆ ಮಾಡಿಕೊಂಡಿದೆ. ಮೋಯಿನ್ ಅಲಿಯನ್ನ 8 ಕೋಟಿ ರೂಪಾಯಿಗೆ ರೀಟೈನ್ ಮಾಡಿಕೊಳ್ಳಲಾಗಿದ್ದು, ರುತುರಾಜ್ ಗಾಯಕ್ವಾಡ್‌ರನ್ನ ಸಿಎಸ್‌ಕೆ 6 ಕೋಟಿ ರೂಪಾಯಿಗೆ ರೀಟೈನ್ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications