For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ಹುಟ್ಟುಹಬ್ಬ ಫುಲ್ ಟ್ರೆಂಡಿಂಗ್

By Mahesh

ಕಿಂಗ್ಸ್ ಟನ್ (ಜಮೈಕಾ), ಜುಲೈ 07: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬದ ದಿನದಂದು (ಜುಲೈ 7) ಧೋನಿ ಅಭಿಮಾನಿಗಳು #HappyBirthdayMSD ಟ್ವಿಟ್ಟರ್ ಟ್ರೆಂಡ್ ಮಾಡುತ್ತಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಗುರುವಾರ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 8 ವಿಕೆಟ್‌ ಜಯ ಸಾಧಿಸಿ, ಸರಣಿಯನ್ನು 3-1ರಿಂದ ಗೆದ್ದು, ಧೋನಿಗೆ ಉಡುಗೊರೆ ನೀಡಿದೆ.

ಐಸಿಸಿ ಆಯೋಜನೆ ಮೂರು ಟ್ರೋಫಿಗಳನ್ನು ಗೆದ್ದಿರುವ ಏಕೈಕ ಕ್ಯಾಪ್ಟನ್ ಎನಿಸಿಕೊಂಡಿರುವ ಧೋನಿ ಅವರು ವಿಶ್ವ ಟಿ20, ಐಸಿಸಿ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.

ಜತೆಗೆ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಎರಡು ಬಾರಿ ಐಪಿಎಲ್ (2010 ಹಾಗೂ 2011) ಟ್ರೋಫಿ ಹಾಗೂ ಎರಡು ಚಾಂಪಿಯನ್ಸ್ ಲೀಗ್ ಟಿ20 (2010 ಹಾಗೂ 2014) ಟ್ರೋಫಿ ಗೆಲ್ಲಿಸಿಕೊಟ್ಟರು.

ಯುವ ಕ್ರಿಕೆಟರ್ಸ್ ಗಳಿಗೆ ಸ್ಫೂರ್ತಿಯಾದ 36 ವರ್ಷ ವಯಸ್ಸಿನ ಧೋನಿ ಅವರಿಗೆ ಒನ್ಇಂಡಿಯಾ ಕ್ರೀಡಾ ಡೆಸ್ಕ್ ನಿಂದಲೂ ಶುಭಹಾರೈಕೆಗಳು. ಟ್ವಿಟ್ಟರ್ ನಲ್ಲಿ ಬಂದಿರುವ ಆಯ್ದ ಸಂದೇಶಗಳ ಸಂಗ್ರಹ ಮುಂದೆ ಓದಿ....

ಕೂಲ್ ಕ್ಯಾಪ್ಟನ್ ಧೋನಿ

ಕೂಲ್ ಕ್ಯಾಪ್ಟನ್ ಧೋನಿ

ಕೂಲ್ ಕ್ಯಾಪ್ಟನ್ ಎನಿಸಿಕೊಂಡಿರುವ ಧೋನಿ ಅವರು ಸದ್ಯ ಟೆಸ್ಟ್, ಏಕದಿನ ಹಾಗೂ ಟಿ20 ನಾಯಕತ್ವದಿಂದ ಹೊರಗುಳಿದಿದ್ದಾರೆ. ಕಳೆದ ಐಪಿಎಲ್ ನಲ್ಲೂ ಸಾಮಾನ್ಯ ಆಟಗಾರರಾಗಿ ಆಡಿದ್ದರು. ಆದರೆ, ಮುಂದಿನ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ನಾಯಕತ್ವ ವಹಿಸಿಕೊಳ್ಳಲಿದ್ದು, ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ವಿಕೆಟ್ ಕೀಪರ್ ಆಗಿ ಧೋನಿ

ಬ್ಯಾಟ್ಸ್ ಮನ್, ಕ್ಯಾಪ್ಟನ್ ಅಷ್ಟೇ ಅಲ್ಲದೆ, ವಿಕೆಟ್ ಕೀಪರ್ ಆಗಿ ಕೂಡಾ 97ಕ್ಕೂ ಅಧಿಕ ವಿಕೆಟ್ ಪಡೆದಿರುವ ಧೋನಿ ಅವರು ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ರನ್ ಗಳಿಕೆಯಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಬಿಟ್ಟರೆ ಧೋನಿಗೆ ಬೆಸ್ಟ್

ತಮಿಳುನಾಡಿನಲ್ಲಿ ಸಂಭ್ರಮ

ತಮಿಳುನಾಡಿನ ಚೆನ್ನೈ, ಸೇಲಂ ಸೇರಿದಂತೆ ವಿವಿಧೆಡೆಗಳಲ್ಲಿ ಧೋನಿಯನ್ನು ತಮ್ಮ ನಾಯಕನಾಗಿ ಬಿಂಬಿಸಿ, ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಧೋನಿ ಬೆಸ್ಟ್ ನಾಯಕ

ಎಂಎಸ್ ಧೋನಿ ಅವರು ಕೂಲ್ ಕ್ಯಾಪ್ಟನ್ ಎಂಬುದನ್ನು ಚಿನ್ಹೆ ಮೂಲಕ ತೋರಿಸಿದ ಅಭಿಮಾನಿಗಳು.

ಯುವಕರಿಗೆ ಪ್ರೇರಣೆ

ಎಂಎಸ್ ಧೋನಿ ಅವರು ವಿಶ್ವದ ಅನೇಕ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ ಸೇರಿದಂತೆ ಅನೇಕರು ಧೋನಿಯನ್ನು ಮಾದರಿಯಾಗಿ ಕಾಣುತ್ತಿದ್ದಾರೆ.

ಗೌತಮ್ ಭಿಮಾನಿಯಿಂದ ಟ್ವೀಟ್

ಎಂಎಸ್ ಧೋನಿ ಅವರಿಗೆ ಶುಭ ಹಾರೈಕೆ ಮಾಡಿದ ಕ್ರಿಕೆಟ್ ಕಾಮೆಂಟೆಟರ್ ಗೌತಮ್ ಭಿಮಾನಿ.

ಧೋನಿ ಹೇಗೆ ಸ್ಫೂರ್ತಿದಾಯಕ

ಎಂಎಸ್ ಧೋನಿ ಅವರು ಪ್ರೇಕ್ಷಕರಿಗಾಗಿ ಆಡಿಲ್ಲ, ದೇಶಕ್ಕಾಗಿ ಆಡಿದ್ದಾರೆ ಹೀಗಾಗಿ ನಮಗೆಲ್ಲರಿಗೂ ಸ್ಫೂರ್ತಿದಾಯಕ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+