Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS Dhoni: ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಧೋನಿ ಮೈದಾನಕ್ಕೆ ಇಳಿಯುತ್ತಾರಾ?

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಆದರೆ ಇವರ ಆಟವನ್ನು ಅಭಿಮಾನಿಗಳು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಣ್ಣು ತುಂಬಿಕೊಳ್ಳಲಿದ್ದಾರೆ. ಆದರೆ ಇವರು ಮೈದಾನಕ್ಕೆ ಇಳಿಯಲು ಇವರ ವಯಸ್ಸು ಹಾಗೂ ಫಿಟ್ನೆಸ್‌ ಪದೇ ಪದೇ ಅಡ್ಡಿ ಪಡಿಸುತ್ತಲೇ ಇದೆ. ಹೀಗಾಗಿ ಪ್ರತಿ ಬಾರಿ ಐಪಿಎಲ್ ಆರಂಭವಾದಾಗಲೂ ಇದು ಎಂಎಸ್‌ ಧೋನಿ ಅವರ ಕೊನೆಯ ಐಪಿಎಲ್‌ ಎಂದೇ ಬಿಂಬಿಸಲಾಗುತ್ತಿದೆ.

ಈ ಬಾರಿಯ ಐಪಿಎಲ್‌ಗೆ ಇನ್ನು ದಿನಗಳು ಬಹಳಿವೆ. ಆಗಲೇ ಧೊನಿ ಮೈದಾನಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ಒಂದು ಸ್ಪಷ್ಟತೆ ಸಿಕ್ಕಿದೆ. ಧೋನಿ ಮೈದಾನಕ್ಕೆ ಇಳಿಯುವ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಎಂಎಸ್‌ಡಿ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್‌ ದೊಡ್ಡ ಸುದ್ದಿ ನೀಡಿದೆ. ಚೆನ್ನೈ ಸೂಪರ್ ಕಿಂಗ್ಸ್‌ ಸ್ಟಾರ್ ಪ್ಲೇಯರ್‌ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಯೆಲ್ಲೋ ಜೆರ್ಸಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಈ ಬಗ್ಗೆ ಸಿಎಸ್‌ಕೆ ಫ್ರಾಂಚೈಸಿ ಅಧಿಕೃತವಾಗಿ ಧೃಡ ಪಡಿಸಿದೆ.

MS Dhoni Confirms Availability for Next IPL Season Quashing Retirement Rumors

ಮುಂದಿನ ಆವೃತ್ತಿಯ ಐಪಿಎಲ್‌ಗಾಗಿ ಧೋನಿ ಲಭ್ಯರಿರುವುದಾಗಿ ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಅವರಿಗೆ ತಿಳಿಸಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಮಾಹಿ ಹಾಗೂ ವಿಶ್ವನಾಥನ್ ಇಬ್ಬರೂ ಚೆನ್ನೈ ತಂಡದ ಬೆನ್ನೆಲೆಬು. ಆದರೆ ಈ ಬಾರಿ ಐಪಿಎಲ್‌ ಆರಂಭಕ್ಕೆ ಹಲವು ತಿಂಗಳು ಬಾಕಿ ಇದ್ದಾಗಲೇ ಧೋನಿ ಮೈದಾನಕ್ಕೆ ಇಳಿಯುವ ಬಗ್ಗೆ ಧೃಡಿಕರಣ ನೀಡಿದ್ದಾರೆ.

44ನೇ ವರ್ಷದ ಮಾಹಿ ಅವರಿಗೆ 19ನೇ ಆವೃತ್ತಿಯ ಐಪಿಎಲ್‌ ಕೊನೆಯ ಅವಕಾಶ ಆಗಬಹುದು. ಕಳೆದ ಆವೃತ್ತಿಯಲ್ಲಿ ಚೆನ್ನೈ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ನಿರಾಸೆ ಅನುಭವಿಸಿತ್ತು. ಧೋನಿ ಮುಂಬರುವ ಐಪಿಎಲ್‌ನಲ್ಲಿ ಮತ್ತೊಮ್ಮೆ ಮೈದಾನಕ್ಕೆ ಇಳಿದು ಸ್ಥಿರ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ. ಧೋನಿ ಈ ವರೆಗೆ ಐಪಿಎಲ್‌ನಲ್ಲಿ 248 ಪಂದ್ಯ ಆಡಿದ್ದು, 4,865 ರನ್‌ಗಳನ್ನು ಗಳಿಸಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ 5 ಬಾರಿ ಐಪಿಎಲ್‌ ಟ್ರೋಫಿ ಗೆಲ್ಲುವಲ್ಲಿ ಧೋನಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

MS Dhoni Confirms Availability for Next IPL Season Quashing Retirement Rumors

ಮಹತ್ವದ ಸಭೆ

ಧೊನಿ ಅವರ ಉತ್ತರಾಧಿಕಾರಿಯ ಹುಡುಕಾಟವನ್ನು ಚೆನ್ನೈ ತಂಡ ಮಾಡುತ್ತಲೇ ಇದೆ. ಈ ವೇಳೆ ಹಲವು ಪ್ರಯೋಗಗಳನ್ನು ಮಾಡಿ ಕೈ ಸುಟ್ಟುಕೊಂಡಿದೆ. ಆದರೆ ಈ ಬಾರಿಯ ಹರಾಜಿನಲ್ಲಿ ಅಥವಾ ಟ್ರೇಡ್‌ ಮೂಲಕ ರಾಜಸ್ಥಾ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ ಅವರನ್ನು ಟ್ರೇಡ್‌ ಮಾಡಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಇದೇ ವೇಳೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ನ.10 ಮತ್ತು 11 ರಂದು ಧೋನಿ, ಸಿಎಸ್‌ಕೆ ಸಿಇಒ, ನಾಯಕ ರುತುರಾಜ್ ಗಾಯಕ್ವಾಡ್, ಕೋಚ್‌ ಸ್ಟೀಫನ್ ಫ್ಲೆಮಿಂಗ್ ನಡುವೆ ಒಂದು ಸಭೆ ನಡೆಯಲಿದ್ದು, ಈ ವೇಳೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

Story first published: Friday, November 7, 2025, 22:30 [IST]
Other articles published on Nov 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+