Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಲೈವಾ ಎಂಎಸ್ ಧೋನಿಗೆ ಚೆನ್ನೈಯಲ್ಲಿ ಅದ್ದೂರಿ ಸ್ವಾಗತ: ವೀಡಿಯೋ

MS Dhoni gets smashing welcome in Chennai ahead of IPL 2020

ಚೆನ್ನೈ, ಮಾರ್ಚ್ 2: ಐಸಿಸಿ ವಿಶ್ವಕಪ್ 2019ರ ಬಳಿಕ ಇದೇ ಮೊದಲ ಬಾರಿಗೆ ಮೈದಾನಕ್ಕಿಳಿಯಲು ಸಜ್ಜಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಚೆನ್ನೈಯಲ್ಲಿ ಅದ್ದೂರಿ ಸ್ವಾಗತ ಲಭಿಸಿದೆ. 2020 ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಧೋನಿ, ಮಾರ್ಚ್ 2ರಂದು ಚೆನ್ನೈಗೆ ತಲುಪಿದ್ದಾರೆ.

ಮಾರ್ಚ್ 29ರಿಂದ ಮೇ 24ರ ವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಕಾದಾಡಲಿದೆ. ಉದ್ಘಾಟನಾ ಪಂದ್ಯ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

ಚೆನ್ನೈಗೆ ಧೋನಿ ಆಗಮಿಸುತ್ತಿರುವ ಟ್ವಿಟರ್ ವೀಡಿಯೋವನ್ನು ಹಾಕಿಕೊಂಡಿರುವ ಸಿಎಸ್‌ಕೆ, 'ಮೊದಲ ದಿನವೇ ರೋಮಾಂಚಕಾರಿ ಪ್ರದರ್ಶನ ದೊರೆಯುವುದರ ಭಾಸವಾಗುತ್ತಿದೆ,' ಎಂದು ಸಾಲೊಂದನ್ನೂ ಬರೆದುಕೊಂಡಿದೆ. ಚೆನ್ನೈಯಲ್ಲಿ ಧೋನಿ ಮಾರ್ಚ್ 3ರಿಂದ ತರಬೇತಿ ಆರಂಭಿಸಲಿದ್ದಾರೆ.

ಸಿಎಸ್‌ಕೆ ಸಿಇಒ ಕೆಎಸ್ ವಿಶ್ವನಾಥನ್ ಮಾತನಾಡಿ, 'ಮಾರ್ಚ್ 2ರಂದು ಚೆನ್ನೈಗೆ ತಲುಪಿರುವ ಧೋನಿ, ಮರುದಿನದಿಂದಲೇ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತರಬೇತಿ ಆರಂಭಿಸಲಿದ್ದಾರೆ. ಸುರೇಶ್ ರೈನಾ ಕೂಡ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಅಲ್ಲಿ ಸದ್ಯಕ್ಕೆ ಅಂತಾರಾಷ್ಟ್ರೀಯ ಆಟಗಾರರು ಇರುವುದಿಲ್ಲ,' ಎಂದು ಮಾಹಿತಿ ನೀಡಿದರು.

Story first published: Monday, March 2, 2020, 15:55 [IST]
Other articles published on Mar 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+