MS Dhoni Drives Tractor : ಫಾರ್ಮ್‌ನಲ್ಲಿ ಟ್ಯ್ರಾಕ್ಟರ್ನಲ್ಲಿ ಹೊಲ ಉಳುಮೆ ಮಾಡಿದ ಎಂಎಸ್ ಧೋನಿ

2023ರ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿರುವ ಎಂಎಸ್ ಧೋನಿ ಸದ್ಯ ಕ್ರಿಕೆಟ್ ತರಬೇತಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದು, ಕೃಷಿ ಚಟುವಟಿಕೆಯತ್ತ ಗಮನ ಹರಿಸಿದ್ದಾರೆ. ಸುದೀರ್ಘ ಕಾಲದ ಬಳಿಕ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಎಂಎಸ್ ಧೋನಿ ರಾಂಚಿಯಲ್ಲಿ ಕೃಷಿ ಜಮೀನು ಖರೀದಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಧೋನಿ ಕೃಷಿಯಲ್ಲಿ ಕೂಡ ಆಸಕ್ತಿ ಹೊಂದಿದ್ದಾರೆ. ಬಿಡುವಿನ ಸಂದರ್ಭದಲ್ಲಿ ಕೃಷಿ ಕೆಲಸಗಳನ್ನು ಮಾಡುತ್ತಾರೆ.
2 ವರ್ಷದ ಬಳಿಕ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. 2021 ಜನವರಿ 8ರಂದು ಅವರು ಕೊನೆಯ ಬಾರಿಗೆ ವಿಡಿಯೋ ಪೋಸ್ಟ್ ಮಾಡಿದ್ದರು. ಅದು ಕೂಡ ಕೃಷಿ ಬಗ್ಗೆಯೇ ವಿಡಿಯೋ ಹಂಚಿಕೊಂಡಿದ್ದರು. ತಮ್ಮ ಫಾರ್ಮ್‌ನಲ್ಲಿ ಬೆಳೆದಿದ್ದ ಸ್ಟ್ರಾಬೆರಿ ಹಣ್ಣಿನ ವಿಡಿಯೋ ಪೋಸ್ಟ್ ಮಾಡಿದ್ದರು.
ಅದಾದ ನಂತರ ಇನ್‌ಸ್ಟಾಗ್ರಾಂನಿಂದ ದೂರವಿದ್ದ ಅವರು ಫೆಬ್ರವರಿ 8 ರಂದು ಮತ್ತೆ ಕೃಷಿ ಬಗ್ಗೆಯೇ ಪೋಸ್ಟ್ ಹಂಚಿಕೊಂಡಿದ್ದಾರೆ. ಫಾರ್ಮ್‌ನಲ್ಲಿ ಟ್ಯ್ರಾಕ್ಟರ್ ನಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಹೊಸದನ್ನು ಕಲಿಯುವುದು ಖುಷಿಕೊಡುತ್ತದೆ ಆದರೆ ಅದನ್ನು ಮುಗಿಸಲು ತುಂಬಾ ದೂರ ಸಾಗಬೇಕಾಗುತ್ತದೆ ಎನ್ನುವ ಪೋಸ್ಟ್‌ನೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.
ವೈರಲ್ ಆಯ್ತು ಧೋನಿ ವಿಡಿಯೋ
2 ವರ್ಷಗಳ ಬಳಿಕ ಧೋನಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಇನ್‌ಸ್ಟಾಗ್ರಾಂ ಮಾತ್ರವಲ್ಲದೆ ಟ್ವಿಟರ್ ನಲ್ಲಿ ಕೂಡ ಧೋನಿ ಉಳುಮೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 19 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

ಐಪಿಎಲ್‌ಗಾಗಿ ತಯಾರಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಸದ್ಯ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. 2023ರ ಐಪಿಎಲ್ ಬಳಿಕ ಅವರು ಐಪಿಎಲ್‌ಗೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ತಂಡ ಕಳಪೆ ಪ್ರದರ್ಶನ ನೀಡುವ ಮೂಲಕ ಮುಖಭಂಗ ಅನುಭವಿಸಿತ್ತು. ಈ ಬಾರಿ ಧೋನಿ ಮತ್ತೆ ನಾಯಕತ್ವದ ಜವಾಬ್ದಾರಿ ತೆಗೆದುಕೊಂಡಿದ್ದು, ತಂಡವನ್ನು ಚಾಂಪಿಯನ್ ಮಾಡುವ ಮೂಲಕ ನಿವೃತ್ತಿಯಾಗಲು ಪಣ ತೊಟ್ಟಿದ್ದಾರೆ.
ಐಪಿಎಲ್‌ಗೆ ಇನ್ನೂ ಎರಡು ತಿಂಗಳು ಬಾಕಿ ಇರುವಂತೆಯೇ ಧೋನಿ ಅಭ್ಯಾಸ ಮಾಡುತ್ತಿದ್ದಾರೆ. ಈ ಬಾರಿ ಇಂಗ್ಲೆಂಡ್ ಸ್ಟಾರ್ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಸೇರ್ಪಡೆಯಾಗಿರುವುದು ಸಿಎಸ್‌ಕೆ ತಂಡದ ಬಲವನ್ನು ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications