Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತವರು ಮೈದಾನದಲ್ಲಿ ಎಂಎಸ್‌ ಧೋನಿ ಕೊನೆಯ ಐಪಿಎಲ್‌ ಪಂದ್ಯ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಲೀಗ್‌ ಹಂತದ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಸೋಮವಾರ ಈ ಆವೃತ್ತಿಯ ಹೈವೋಲ್ಟೇಜ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಎಲ್ಲರ ಚಿತ್ತ ಕೂಲ್ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ ಅವರ ಮೇಲೆ ನೆಟ್ಟಿದೆ. ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತೆ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಮೂಲಕ ಧೋನಿ ಸದ್ಯ ಸಂಚಲನವನ್ನು ಮೂಡಿಸಿದ್ದಾರೆ. ಸದ್ಯ ಎಂಎಸ್‌ ಧೋನಿ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಹಾಗಿದ್ದರೆ ಧೋನಿ ಟ್ರೆಂಡಿಂಗ್‌ನಲ್ಲಿರು ಕಾರಣ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ಧ ಮಾಹಿ, ಚೆನ್ನೈ ಅಭ್ಯಾಸ ಪಂದ್ಯದ ವೇಳೆ ಹಲವು ಬಾರಿ ಕಾಣಿಸಿಕೊಂಡರು. ಲೀಗ್‌ ಹಂತದಲ್ಲಿ ಇದುವರೆಗೂ ಕಣಕ್ಕೆ ಇಳಿದಿರಲಿಲ್ಲ. ಚೆನ್ನೈ ಪ್ರಸಕ್ತ ಆವೃತ್ತಿಯ ಕೊನೆಯ ಲೀಗ್‌ ಹಂತದ ಪಂದ್ಯವನ್ನು ತವರಿನಲ್ಲಿ ಆಡಲಿದೆ. ಚೆನ್ನೈನ ಚೆಪಾಕ್ ಅಂಗಳದಲ್ಲಿ ಧೋನಿ ಕಣಕ್ಕೆ ಇಳಿಯುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದ್ದು, ಸಿಎಸ್‌ಕೆ ತಂಡದ ಸ್ಟಾರ್ ಐಕಾನ್‌ನನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಮೈದಾನದತ್ತ ಆಗಮಿಸುತ್ತಿದ್ದಾರೆ. ಧೋನಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರೋ ಇಲ್ಲವೋ ಎಂಬ ಬಗ್ಗೆ ನಿರ್ಧಾರ ಟಾಸ್‌ ಸಮಯದಲ್ಲಿ ತಿಳಿಯಲಿದೆ.

MS Dhoni

ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಮೈದಾನಕ್ಕೆ ಇಳಿದಿರಲಿಲ್ಲ. ಅವರು ಕಾಲಿನ ಗಾಯದಿಂದ ಬಳಲುತ್ತಿದ್ದಾರೆ, ಹೀಗಾಗಿ ಅವರು ಹಲವಾರು ಸಂದರ್ಭಗಳಲ್ಲಿ ತಂಡದೊಂದಿಗೆ ಪ್ರಯಾಣಿಸಿಲ್ಲ. ಇದು ಚೆನ್ನೈ ತಂಡಕ್ಕೆ ಈ ಆವೃತ್ತಿಯ ಕೊನೆಯ ತವರು ಪಂದ್ಯವಾಗಿರಲಿದೆ. ತನ್ನ ಕೊನೆಯ ಪಂದ್ಯವನ್ನು ಸಿಎಸ್‌ಕೆ ಅಹಮದಾಬಾದ್‌ನಲ್ಲಿ ಆಡಲಿದೆ. ಒಂದು ವೇಳೆ ಚೆನ್ನೈ ಪ್ಲೇ ಆಫ್‌ ತಲುಪಿದರೆ, ಚೆನ್ನೈನಲ್ಲಿ ಯಾವುದೇ ಪಂದ್ಯಗಳು ಇರುವುದಿಲ್ಲ.

ಧೋನಿ ಇಂದು ಕಣಕ್ಕೆ?

ಧೋನಿ ಇಂದು ಕಣಕ್ಕೆ ಇಳಿದರೆ ಇದು ಅವರ ಕೊನೆಯ ಐಪಿಎಲ್‌ ಪಂದ್ಯವಾಗಬಹುದು. ಕೆಲವು ವರ್ಷಗಳ ಹಿಂದೆ ಎಂಎಸ್‌ ಧೋನಿ ಚೆನ್ನೈನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಬೇಕೆಂದು ಹೇಳಿದ್ದರು. ಈ ಹೇಳಿಕೆ ಈಗ ಸಖತ್ ವೈರಲ್ ಆಗುತ್ತಿದೆ. ಧೋನಿ ಮುಂದಿನ ಆವೃತ್ತಿಗೂ ಮೊದಲು ಐಪಿಎಲ್‌ಗೆ ವಿದಾಯ ಹೇಳಬಹುದು ಎಂದು ನಿರೀಕ್ಷಿಸಲಾಗಿದೆ.

MS Dhoni

ಎಸ್‌ಆರ್‌ಎಚ್‌ ಪಂದ್ಯಕ್ಕೂ ಮುನ್ನ ಧೋನಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಇವರು ಬ್ಯಾಟಿಂಗ್ ನಡೆಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಧೋನಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದ್ದು, ಇದಕ್ಕೆ ರುತುರಾಜ್ ಗಾಯಕ್ವಾಡ್‌ ಟಾಸ್‌ ವೇಳೆ ಉತ್ತರ ನೀಡಲಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಚೆನ್ನೈ ಅಭಿಮಾನಿಗಳ ಪಾಲಿಗೆ ನೆಚ್ಚಿನ ಆಟಗಾರ. ಇವರ ಮುಂದಾಳತ್ವದಲ್ಲಿ ತಂಡ ಐದು ಬಾರಿ ಐಪಿಎಲ್‌ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಬಾರಿಯೂ ಸ್ಥಿರ ಪ್ರದರ್ಶನ ನೀಡುತ್ತಿರುವ ಸಿಎಸ್‌ಕೆ ಪ್ಲೇ ಆಫ್‌ ಕನಸು ಕಾಣುತ್ತಿದೆ. ಆದರೆ ಧೋನಿ ಈ ಬಾರಿ ಇನ್ನು ಒಂದೇ ಒಂದು ಪಂದ್ಯದಲ್ಲಿ ಕಣಕ್ಕೆ ಇಳಿದಿಲ್ಲ.

Story first published: Monday, May 18, 2026, 15:10 [IST]
Other articles published on May 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+