Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS Dhoni ದರ್ಶನಕ್ಕಾಗಿ ಕಾದು ಸುಸ್ತಾದ ಫ್ಯಾನ್ಸ್: ಚೆನ್ನೈ ಅಭಿಮಾನಿಗಳ ಕಾಯುವಿಕೆ ಮೇ 18ಕ್ಕೆ ಶಿಫ್ಟ್‌

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಲೀಗ್‌ ಹಂತ ಕೊನೆಯ ಘಟ್ಟದತ್ತ ಮುಖ ಮಾಡಿದೆ. ಚಾಂಪಿಯನ್ ಪಟ್ಟದ ಮೇಲೆ ಚಿತ್ತ ನೆಟ್ಟಿರುವ ತಂಡಗಳು ಕಣ್ಣು ನೆಟ್ಟಿವೆ. ದಾಖಲೆಯ ಐದು ಬಾರಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಸಹ ಈ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಆದರೆ ಅಭಿಮಾನಿಗಳ ಮನದಲ್ಲಿ ಆ ಒಂದು ಪ್ರಶ್ನೆಗೆ ಭಾನುವಾರ ಮಧ್ಯಾಹ್ನವೂ ಉತ್ತರ ಸಿಗಲಿಲ್ಲ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಚೆನ್ನೈ ತಂಡದ ಐಕಾನಿಕ್ ಆಟಗಾರ ಮಹೇಂದ್ರ ಸಿಂಗ್ ಧೋನಿ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಈ ವರೆಗೆ ಒಂದೇ ಒಂದು ಪಂದ್ಯದಲ್ಲಿ ಕಣಕ್ಕೆ ಇಳಿದಿಲ್ಲ. ಆರಂಭದಲ್ಲಿ ಬಂದ ಮಾಹಿತಿಗಳ ಪ್ರಕಾರ ಅವರ ಗಾಯ ಚೇತರಿಕೆಗೆ ಎರಡು ವಾರದ ಕಾಲಾವಕಾಶದ ಅವಶ್ಯಕತೆ ಇತ್ತು. ಎರಡನೇ ಹಂತದಲ್ಲಾದರೂ ಧೋನಿ ಅವರು ಕಣಕ್ಕೆ ಇಳಿಯಬಹುದು ಎಂದು ಅಭಿಮಾನಿಗಳು ಕನಸು ಕಾಣುತ್ತಿದ್ದರು. ಆದರೆ ಭಾನುವಾರ ಲೀಗ್‌ ಹಂತದ 11ನೇ ಪಂದ್ಯದಲ್ಲೂ ಧೋನಿ ಕಣಕ್ಕೆ ಇಳಿಯಲಿಲ್ಲ. ಇದನ್ನು ಕಂಡು ಸಿಎಸ್‌ಕೆ ಅಭಿಮಾನಿಗಳಿಗೆ ಬೇಸರವಾಗಿದೆ.

MS Dhoni

ಚೆನ್ನೈನ ಚೆಪಾಕ್ ಅಂಗಳದಲ್ಲಿ ಟಾಸ್‌ ಗೆದ್ದ ಬಳಿಕ ರುತುರಾಜ್ ಗಾಯಕ್ವಾಡ್ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆಗ ಎಲ್ಲರ ಚಿತ್ತ ಪ್ಲೇಯಿಂಗ್ ಇಲೆವೆನ್‌ನಲ್ಲಿ ಧೋನಿ ಹೆಸರು ಕೇಳಿ ಬರುತ್ತದೆ ಎಂದಾಗಿತ್ತು. ಆದರೆ ರುತುರಾಜ್‌ ಧೋನಿ ಹೆಸರನ್ನು ತೆಗೆದುಕೊಳ್ಳದೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಲೀಗ್‌ ಹಂತದಲ್ಲಿ ಸಿಎಸ್‌ಕೆ ಭಾನುವಾರದ ಪಂದ್ಯ ಹಿಡಿದು ಇನ್ನು ಎರಡು ಪಂದ್ಯಗಳನ್ನು ಮಾತ್ರ ಆಡಲಿದೆ. ಇನ್ನು ಧೋನಿ ಕಣಕ್ಕೆ ಇಳಿಯುವುದು ಯಾವಾಗ? ಎಂಬ ಪ್ರಶ್ನೆಗಳನ್ನು ಚೆನ್ನೈ ಅಭಿಮಾನಿಗಳು ಕೇಳುತ್ತಿದ್ದಾರೆ.

ಮೇ 18 ರಂದು ಚೆನ್ನೈನಲ್ಲಿ ಕೊನೆಯ ಪಂದ್ಯ

ಚೆನ್ನೈ ಸೂಪರ್ ಕಿಂಗ್ಸ್‌ ಲೀಗ್‌ ಹಂತದಲ್ಲಿ ಭಾನುವಾರದ ಪಂದ್ಯವನ್ನು ಹೊರತು ಪಡಿಸಿದರೂ ಇನ್ನು ಮೂರು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ತವರಿನಲ್ಲಿ ಮೇ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೊನೆಯ ಪಂದ್ಯವನ್ನು ಆಡಲಿದೆ. ಉಳಿದಂತೆ ಮೇ 15 ರಂದು ಎಲ್‌ಎಸ್‌ಜಿ ವಿರುದ್ಧ ಲಕ್ನೋನಲ್ಲಿ, ಮೇ 21 ರಂದು ಸಿಎಸ್‌ಕೆ ತನ್ನ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ ತಂಡವನ್ನು ಅಹಮದಾಬಾದ್‌ನಲ್ಲಿ ಎದುರಿಸಲಿದೆ. ಉಳಿದ ಮೂರು ಪಂದ್ಯಗಳಲ್ಲಿ ಧೋನಿ ಕಣಕ್ಕೆ ಇಳಿಯುವುದು ಯಾವಾಗ ಎಂಬ ಪ್ರಶ್ನೆಗಳು ಉದ್ಭವಿಸಿವೆ.

44 ವರ್ಷದ ಧೋನಿ ಅವರಿಗೆ ಈ ಬಾರಿಯ ಐಪಿಎಲ್‌ ಕೊನೆಯ ಆವೃತ್ತಿ ಆಗಿರಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಧೋನಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಚೆನ್ನೈ ಅಭಿಮಾನಿಗಳು ತಮ್ಮ ತಂಡದ ಐಕಾನಿಕ್ ಪ್ಲೇಯರ್‌ನನ್ನು ಕಣ್ಣು ತುಂಬಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ಕಾಯುವಿಕೆಗೆ ಮೇ 18 ರಂದು ಉತ್ತರ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

Story first published: Sunday, May 10, 2026, 16:29 [IST]
Other articles published on May 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+