Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK Coach ಸ್ಥಾನಕ್ಕೆ ಎಂಎಸ್‌ ಧೋನಿ ಬೆಸ್ಟ್ ಚಾಯ್ಸ್‌: ಆರ್‌ ಅಶ್ವಿನ್‌

ಐಪಿಎಲ್‌ನ ಯಶಸ್ವಿ ಕೋಚ್‌ ಸ್ಟೀಫನ್ ಫ್ಲೆಮಿಂಗ್‌ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಿಂದ ಹೊರ ನಡೆಯಲು ನಿರ್ಧರಿಸಿದ್ದಾರೆ. ಇವರು ಕಳೆದ 17 ವರ್ಷಗಳಿಂದ ಸಿಎಸ್‌ಕೆ ತಂಡದ ಕೋಚ್ ಆಗಿದ್ದರು. ಇವರು ಕೋಚ್‌ ಸ್ಥಾನದಿಂದ ಹಿಂದೆ ಸರಿದ ಬಳಿಕ ಫ್ರಾಂಚೈಸಿಗೆ ಹೊಸ ಕೋಚ್ ಹುಡುಕುವ ಚಿಂತೆ ಆರಂಭವಾಗಿದೆ. ಈ ವಿಚಾರದ ಬಗ್ಗೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್‌ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಈ ತಂಡ ಐದು ಬಾರಿ ಐಪಿಎಲ್‌ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಈಗ ಫ್ಲೆಮಿಂಗ್‌ ತಮ್ಮ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸಿಎಸ್‌ಕೆ ಹೊಸ ಕೋಚ್‌ ಹುಡುಕಾಟದಲ್ಲಿದೆ. ಈ ಬಗ್ಗೆ ಅಶ್ವಿನ್ ದೊಡ್ಡ ಹೇಳಿಕೆ ನೀಡಿದ್ದಾರೆ.

CSK Coach

ಚೆನ್ನೈ ಈಗ ಹೊಸ ಯುಗ ಆರಂಭಿಸಬೇಕು ಎಂದು ಅಶ್ವಿನ್ ತಿಳಿಸಿದ್ದಾರೆ. ಇದೇ ವೇಳೆ ಅನುಭವಿ ನಾಯಕ ಹಾಗೂ ಸಿಎಸ್‌ಕೆ ತಂಡದ ಐಕಾನಿಕ್ ಆಟಗಾರ ಧೋನಿ ಈ ಕಾರ್ಯವನ್ನು ಮಾಡಲು ಒಪ್ಪಿದಲ್ಲಿ ಫ್ರಾಂಚೈಸಿ ಸಂತೋಷದಿಂದ ಈ ಹುದ್ದೆಯನ್ನು ಧೋನಿ ಅವರಿಗೆ ನೀಡುತ್ತದೆ ಎಂದು ಅಶ್ವಿನ್ ನಂಬಿದ್ದಾರೆ.

ಸಿಎಸ್‌ಕೆ ಕೋಚ್‌ ಮುಂದಿವೆ ಸಾಲು ಸಾಲು ಸವಾಲು

ಸದ್ಯ ಚೆನ್ನೈ ತಂಡದ ಕೋಚಿಂಗ್ ಸ್ಥಾನ ಖಾಲಿ ಇದೆ. ಈ ಸ್ಥಾನವನ್ನು ತುಂಬಲು ಧೋನಿ ಸಿದ್ಧರಿದ್ದರೆ, ಸಿಎಸ್‌ಕೆಗೆ ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ ಎಂದು ತಿಳಿಸಿದ್ದಾರೆ. ಇದು ಸಾಧ್ಯವಾಗದೇ ಇದಲ್ಲಿ, ಸಿಎಸ್‌ಕೆ ಕೋಚ್‌ ಹುಡುಕಾಟವನ್ನು ಸ್ವತಂತ್ರವಾಗಿ ನಡೆಸಬೇಕಾಗುತ್ತದೆ ಎಂದು ಅಶ್ವಿನ್ ಹೇಳಿದ್ದಾರೆ.

ಸ್ಟ್ರಿಕ್ಟ್‌ ಹೆಡ್‌ ಮಾಸ್ಟರ್‌ ಹುಡುಕಾಟದಲ್ಲಿ ಇಂಗ್ಲೆಂಡ್‌; ಇಸಿಬಿ ಬಂಪರ್ ಆಫರ್‌

ಸ್ಟ್ರಿಕ್ಟ್‌ ಹೆಡ್‌ ಮಾಸ್ಟರ್‌ ಹುಡುಕಾಟದಲ್ಲಿ ಇಂಗ್ಲೆಂಡ್‌; ಇಸಿಬಿ ಬಂಪರ್ ಆಫರ್‌

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಪ್ರಕಾರ ಅಶ್ವಿನ್‌, ಸಿಎಸ್‌ಕೆ ಮಾಜಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಹಾಗೂ ಮಹೇಂದ್ರ ಸಿಂಗ್ ಧೋನಿ ಚಿಂತನೆಗಳು ಬಹಳ ಹೊಂದಾಣಿಕೆ ಆಗಿದ್ದವು. ಫ್ಲೆಮಿಂಗ್ ಧೋನಿಯ ಯೋಜನೆಗಳನ್ನು ಅರಿತಿದ್ದರು. ಅಲ್ಲದೆ ಕೋಚ್ ಫ್ಲೆಮಿಂಗ್ ತಂಡಕ್ಕೆ ಎಷ್ಟು ಮುಖ್ಯ ಎಂಬುದು ಧೋನಿಗೂ ತಿಳಿದಿತ್ತು. ಹೀಗಾಗಿ ಈ ಇಬ್ಬರ ಪಾಲುದಾರಿಕೆ ಬಹು ವರ್ಷಗಳ ಕಾಲ ಉಳಿಯಿತು ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.

ನಿಶ್ಚಿತವಾಗಿ ಸಿಎಸ್‌ಕೆ ತಂಡವನ್ನು ಮುನ್ನಡೆಸುವ ಕೋಚ್‌ ಮುಂದೆ ಸಾಲು ಸಾಲು ಸವಾಲುಗಳಿವೆ. ಅದರಲ್ಲಿ ಧೋನಿ ಅವರಂತಹ ಐಕಾನಿಕ್ ಪ್ಲೇಯರ್ ತಂಡದ ಭಾಗವಾಗಿದ್ದಾಗ ತಂಡದ ಆಯ್ಕೆ ನಿಜಕ್ಕೂ ಸವಾಲಿನ ವಿಷಯ ಎಂದು ತಿಳಿಸಿದ್ದಾರೆ.

Virat Kohli: ರಾಹುಲ್ ದ್ರಾವಿಡ್ ದಾಖಲೆಯ ಮೇಲೆ ವಿರಾಟ್‌ ಕಣ್ಣು

Virat Kohli: ರಾಹುಲ್ ದ್ರಾವಿಡ್ ದಾಖಲೆಯ ಮೇಲೆ ವಿರಾಟ್‌ ಕಣ್ಣು

ಚೆನ್ನೈ ಸೂಪರ್ ಕಿಂಗ್ಸ್ ಇತ್ತೀಚಿನ ವರ್ಷಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ. ಕಳೆದ ಆವೃತ್ತಿಯಲ್ಲಿ ತಂಡ ಪ್ಲೇ ಆಫ್‌ಗೂ ಪ್ರವೇಶ ಪಡೆದಿರಲಿಲ್ಲ. ಹೀಗಾಗಿ ಕೋಚ್‌ ಸ್ಥಾನವನ್ನು ಅಲಂಕರಿಸುವವರ ಮುಂದೆ ಸಾಲು ಸಾಲು ಸವಾಲುಗಳಿವೆ. ಈ ವೇಳೆ ಈ ತಂಡದ ಕೋಚ್ ಆಗಿ ಯಾರು ನೇಮಕಗೊಳ್ಳುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Story first published: Thursday, July 16, 2026, 16:45 [IST]
Other articles published on Jul 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+