Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಎಂಎಸ್ ಧೋನಿ ಇಸ್ ದಿ ಗಾಡ್ ಆಫ್...'; ಮಾಜಿ ನಾಯಕನ ಕುರಿತು ಸೌರಭ್ ತಿವಾರಿ ಹೇಳಿದ್ದೇನು?

ಸೌರಭ್ ತಿವಾರಿ ಅವರು ಭಾರತ ಕ್ರಿಕೆಟ್ ತಂಡದ ಲೆಜೆಂಡರಿ ನಾಯಕ ಎಂಎಸ್ ಧೋನಿ ಅವರನ್ನು ಶ್ಲಾಘಿಸಿದ್ದು, ರಾಂಚಿಯಲ್ಲಿ ಜನಿಸಿದ ಮಾಜಿ ದಿಗ್ಗಜನನ್ನು 'ಜಾರ್ಖಂಡ್ ಕ್ರಿಕೆಟ್ ದೇವರು' ಎಂದು ಹೇಳಿದ್ದಾರೆ.

2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ, ಎಲ್ಲಾ ಮೂರು ಪ್ರಮುಖ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳನ್ನು ಗೆದ್ದ ಏಕೈಕ ನಾಯಕ ಎಂಎಸ್ ಧೋನಿ ಎಂಬುದು ಗಮನಿಸಬೇಕಾದ ಸಂಗತಿ.

ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಯಿಂದಾಗಿ ಜನರು ಜಾರ್ಖಂಡ್ ಬಗ್ಗೆ ತಿಳಿದುಕೊಂಡಿದ್ದಾರೆ ಎಂದು ಇತ್ತೀಚಿಗೆ ನಿವೃತ್ತಿ ಘೋಷಿಸಿದ ಸೌರಭ್ ತಿವಾರಿ ಹೇಳಿದ್ದಾರೆ. ಇದಲ್ಲದೆ, ತಮ್ಮ ತಂಡದ ಆಟಗಾರರಲ್ಲಿ ಎಂಎಸ್ ಧೋನಿ ಹೇಗೆ ಆತ್ಮವಿಶ್ವಾಸವನ್ನು ತುಂಬುತ್ತಾರೆ ಮತ್ತು ಸಹ ಆಟಗಾರೊಂದಿಗೆ ಹೇಗೆ ನಿಲ್ಲುತ್ತಾರೆ ಎಂಬುದರ ಕುರಿತು ಸೌರಭ್ ತಿವಾರಿ ಮಾತನಾಡಿದರು.

MS Dhoni is the God of Jharkhand Cricket Says Former Cricketer Saurabh Tiwary

"ಎಂಎಸ್ ಧೋನಿ ಜಾರ್ಖಂಡ್ ಕ್ರಿಕೆಟ್‌ನ ದೇವರು. ಅವರು ಭಾರತ ತಂಡಕ್ಕಾಗಿ ಆಡಲು ಪ್ರಾರಂಭಿಸಿದಾಗಿನಿಂದ, ಜನರು ನಮ್ಮನ್ನು ತಂಡವಾಗಿ ತಿಳಿದುಕೊಳ್ಳಲು ಪ್ರಾರಂಭಿಸಿದರು. ಅವರು ಜಾರ್ಖಂಡ್ ಎಲ್ಲಿದೆ ಎಂದು ತಿಳಿದುಕೊಂಡರು".

"ಎಂಎಸ್ ಧೋನಿ ನಮಗೆ ಆತ್ಮವಿಶ್ವಾಸವನ್ನು ನೀಡಿದರು ಮತ್ತು ಅವರು ಸುತ್ತಮುತ್ತಲಿರುವಾಗ ಅಥವಾ ನಗರದಲ್ಲಿದ್ದಾಗ, ಅವರು ನಮ್ಮ ಅಭ್ಯಾಸ ಸೆಷನ್‌ಗಳಿಗೆ ಹಾಜರಾಗಲು ಬರುತ್ತಾರೆ. ಕೆಲವೊಮ್ಮೆ, ಅವರು ಅಭ್ಯಾಸ ಆಟಗಳಲ್ಲಿ ಭಾಗವಹಿಸುತ್ತಾರೆ. ಅವರ ಬೆಂಬಲವೇ ನಮಗೆ ಎಲ್ಲವೂ," ಎಂದು ಸೌರಭ್ ತಿವಾರಿ ಸ್ಪೋರ್ಟ್ಸ್ ನೌಗೆ ತಿಳಿಸಿದರು.

"ಧೋನಿ ಭಯ್ಯಾ ತಂಡವನ್ನು ಮುನ್ನಡೆಸುವಾಗ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾರೆ, ನೀವು ಪ್ರದರ್ಶನ ನೀಡದಿದ್ದರೂ ಅವರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ತಂಡವನ್ನು ಮುನ್ನಡೆಸುವುದರ ಹೊರತಾಗಿ, ಧೋನಿ ಭಯ್ಯಾ ವಿಕೆಟ್ ಹಿಂದೆ ನಿಂತಾಗ, ಅವರು ಬೌಲರ್‌ಗಳಿಗೆ ಸಾಕಷ್ಟು ಸಹಾಯ ಮಾಡುತ್ತಾರೆ. ವಿಕೆಟ್ ಹೇಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಅವರು ನಿಮಗೆ ತಿಳಿಸುತ್ತಾರೆ ಮತ್ತು ನಿಖರವಾದ ಫೀಲ್ಡ್ ಪ್ಲೇಸ್‌ಮೆಂಟ್‌ಗಳೊಂದಿಗೆ ನಿಮಗೆ ಸಹಾಯ ಮಾಡುತ್ತಾರೆ," ಎಂದು ಮಾಜಿ ಕ್ರಿಕೆಟಿಗ ಸೌರಭ್ ತಿವಾರಿ ಹೇಳಿದರು.

MS Dhoni is the God of Jharkhand Cricket Says Former Cricketer Saurabh Tiwary

ಇತ್ತೀಚೆಗೆ, ಮತ್ತೋರ್ವ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ತಮ್ಮ ಹೇಳಿಕೆಯಲ್ಲಿ ಎಂಎಸ್ ಧೋನಿ ಹೆಸರನ್ನು ತಂದರು. ಅವರು ಪ್ರಸ್ತುತ ರಾಷ್ಟ್ರೀಯ ತಂಡದ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವ ಕೌಶಲ್ಯವನ್ನು ಹೊಗಳಿದ್ದರು. ಸುರೇಶ್ ರೈನಾ ಅವರು ರೋಹಿತ್ ಶರ್ಮಾ ಅವರನ್ನು ದಿಗ್ಗಜ ನಾಯಕ ಎಂಎಸ್ ಧೋನಿಗೆ ಹೋಲಿಸಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ. ಅದ್ಭುತ ಪುನರಾಗಮನ ಮಾಡುವ ಮೊದಲು ಭಾರತ 0-1 ಹಿನ್ನಡೆಯಲ್ಲಿತ್ತು.

ರೋಹಿತ್ ಶರ್ಮಾ ಪಡೆ ತ್ರೀ ಲಯನ್ಸ್ ಇಂಗ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿ ಭಾರತದ ತವರಿನ ಪ್ರಾಬಲ್ಯವನ್ನು ಹಾಗೇ ಉಳಿಸಿಕೊಂಡರು. ಇದು ತವರು ನೆಲದಲ್ಲಿ ಭಾರತಕ್ಕೆ ಸತತ 17ನೇ ಟೆಸ್ಟ್ ಸರಣಿ ಜಯವಾಗಿದೆ.

Story first published: Friday, March 1, 2024, 19:19 [IST]
Other articles published on Mar 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+