ಸಚಿನ್, ಗಂಗೂಲಿ, ದ್ರಾವಿಡ್ 13K ಕ್ಲಬ್ ಸೇರಿದ ಎಂಎಸ್ ಧೋನಿ

ಹೈದರಾಬಾದ್, ಮಾರ್ಚ್ 04: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಜೇಯವಾಗಿ ಉಳಿದು ಗೆಲುವು ತಂದಿತ್ತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೊಸ ಮೈಲಿಗಲ್ಲು ದಾಟಿದ್ದಾರೆ.
ಧೋನಿ 72 ಎಸೆತಗಳಲ್ಲಿ 59 ರನ್ಗಳಿಸಿ, ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ಗಳ ಅಂತರದ ಗೆಲುವು ಸಾಧಿಸಲು ನೆರವಾದರು. ಇದೇ ಸಂದರ್ಭದಲ್ಲಿ 412 ಲಿಸ್ಟ್ ಎ ಪಂದ್ಯಗಳಲ್ಲಿ 13,054 ರನ್ಗಳನ್ನು ಸಂಪಾದಿಸಿದರು. 50.79 ರನ್ ಸರಾಸರಿ ಹೊಂದಿರುವ ಧೋನಿ ಅವರು 13 ಸಾವಿರ ರನ್ಗಳ ಪೂರೈಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.
ಈ ಮೊದಲು ಸಚಿನ್ತೆಂಡೂಲ್ಕರ್, ರಾಹುಲ್ದ್ರಾವಿಡ್ ಮತ್ತು ಸೌರವ್ಗಂಗೂಲಿ ಅವರು 13 ಸಾವಿರ ರನ್ಗಳನ್ನು ಗಳಿಸಿದ್ದಾರೆ. ಇವರಲ್ಲದೆ ಇಂಗ್ಲೆಂಡಿನ ಮಾಜಿ ನಾಯಕ ಗ್ರಹಾಂ ಗೂಚ್ ಅವರು ಲಿಸ್ಟ್ ಎ ರನ್ ಗಳಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 22, 211 ರನ್ಗಳನ್ನು ಬಾರಿಸಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಜತೆ 141 ಜೊತೆಯಾಟ ಪ್ರದರ್ಶಿಸಿದ ಕೇದಾರ್ ಜಾಧವ್ ಅವರು ಉತ್ತಮ ಪ್ರದರ್ಶನ ನೀಡಿ 81ರನ್ ಗಳಿಸಿ ಅಜೇಯರಾಗಿ ಉಳಿದರು. ರಾಜೀವ್ ಗಾಂಧಿ ಮೈದಾನದಲ್ಲಿ ಐದನೇ ವಿಕೆಟ್ ಗೆ ಇದು ಎರಡನೇ ಅತಿದೊಡ್ಡ ಜೊತೆಯಾಟ ಎನಿಸಿಕೊಂಡಿದೆ. 2009ರಲ್ಲಿ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಹಾಗೂ ಶೇನ್ ವಾಟ್ಸನ್ 145ರನ್ ಮೊದಲ ವಿಕೆಟ್ ಗೆ ಕಲೆ ಹಾಕಿದ್ದು ಇನ್ನು ದಾಖಲೆಯಾಗಿ ಉಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications