Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಮ್ಮ ವಿಶ್ವಕಪ್‌ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್‌!

MS Dhoni missing from Tendulkars World Cup 2019 Team

ಹೊಸದಿಲ್ಲಿ, ಜುಲೈ 16: ಭಾರತೀಯ ಕ್ರಿಕೆಟ್‌ನ ದಂತಕತೆ ಸಚಿನ್‌ ತೆಂಡೂಲ್ಕರ್‌, ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಮುಕ್ತಾಯದ ಬಳಿಕ ತಮ್ಮ ನೆಚ್ಚಿನ ಆಟಗಾರರನ್ನು ಒಳಗೊಂಡ ವಿಶ್ವಕಪ್‌ ಇಲೆವೆನ್‌ ತಂಡವನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ಸಚಿನ್‌ ತಮ್ಮ ಕನಸಿನ ತಂಡದಲ್ಲಿ ಕೇನ್‌ ವಿಲಿಯಮ್ಸನ್‌ಗೆ ನಾಯಕತ್ವದ ನೀಡಿದ್ದಾರೆ. ಅಲ್ಲದೆ ವಿರಾಟ್‌ ಕೊಹ್ಲಿ ಒಳಗೊಂಡಂತೆ ಐವರು ಭಾರತೀಯರಿಗೆ ಸ್ಥಾನ ನೀಡಿದ್ದಾರೆ. ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಜಸ್‌ಪ್ರೀತ್‌ ಬುಮ್ರಾ ಸ್ಥಾನ ಪಡೆದಿದ್ದಾರೆ. ಆದರೆ, ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂ.ಎಸ್‌ ಧೋನಿ ಅವರನ್ನು ಸಚಿನ್‌ ಕೈಬಿಟ್ಟಿದ್ದಾರೆ.

ರೋಹಿತ್‌ ಶರ್ಮಾ ಮತ್ತು ಜಾನಿ ಬೈರ್‌ಸ್ಟೋವ್‌ ತಂಡದ ಓಪನರ್‌ಗಳಾದರೆ, ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕಿರುವ ಕೇನ್‌ ವಿಲಿಯಮ್ಸನ್‌ 3ನೇ ಕ್ರಮಾಂಕ ಪಡೆದುಕೊಂಡಿದ್ದಾರೆ. ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿದ್ದಾರೆ. ಶಾಕಿಬ್‌ ಅಲ್‌ ಹಸನ್, ಬೆನ್‌ ಸ್ಟೋಕ್ಸ್‌, ಹಾರ್ದಿಕ್‌ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಂಡದಲ್ಲಿ ಇರುವ ಆಲ್‌ರೌಂಡರ್‌ಗಳು. ಮಿಚೆಲ್‌ ಸ್ಟಾರ್ಕ್‌, ಜೋಫ್ರಾ ಆರ್ಚರ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ತಂಡದಲ್ಲಿರುವ ವೇಗದ ಬೌಲರ್‌ಗಳು.

ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಕೂಡ ತನ್ನ ವಿಶ್ವಕಪ್‌ 2019ರ ಹನ್ನೊಂದು ಆಟಗಾರರ ತಂಡವನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕೇವಲ ಇಬ್ಬರು ಭಾರತೀಯರಷ್ಟೇ ಸ್ಥಾನ ಪಡೆದಿದ್ದರು.

ತೆಂಡೂಲ್ಕರ್‌ ಅವರ ವಿಶ್ವಕಪ್‌ ಇಲೆವೆನ್‌ ತಂಡ ಹೀಗಿದೆ

ರೋಹಿತ್‌ ಶರ್ಮಾ, ಜಾನಿ ಬೈರ್‌ಸ್ಟೋವ್‌(ವಿಕೆಟ್‌ಕೀಪರ್‌), ಕೇನ್‌ ವಿಲಿಯಮ್ಸನ್‌ (ನಾಯಕ), ವಿರಾಟ್‌ ಕೊಹ್ಲಿ, ಶಾಕಿಬ್‌ ಅಲ್‌ ಹಸನ್‌, ಹಾರ್ದಿಕ್‌ ಪಾಂಡ್ಯ, ಬೆನ್‌ ಸ್ಟೋಕ್ಸ್‌, ರವೀಂದ್ರ ಜಡೇಜಾ, ಮಿಚೆಲ್‌ ಸ್ಟಾರ್ಕ್‌, ಜೋಫ್ರಾ ಆರ್ಚರ್‌, ಜಸ್‌ಪ್ರೀತ್ ಬುಮ್ರಾ.

Story first published: Tuesday, July 16, 2019, 15:35 [IST]
Other articles published on Jul 16, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+