ಭಾರತದಲ್ಲಿ ಕೊಹ್ಲಿ, ಸಚಿನ್ ಗಿಂತ ಧೋನಿ ಹೆಚ್ಚು ಜನಪ್ರಿಯ ಆಟಗಾರ!


ನವದೆಹಲಿ, ಜುಲೈ 27: ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಗಾಗಿ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದರು. ಆದರೆ ಇಂದಿಗೂ ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡಾಪಟುವಾಗಿ ಧೋನಿ ಗುರುತಿಸಿಕೊಂಡಿದ್ದಾರೆ.
ವಿಶ್ವದ ಜನಪ್ರಿಯ ವ್ಯಕ್ತಿಗಳ ಬಗ್ಗೆ ಯುಗೋವ್ ನಡೆಸಿದ ಸಮೀಕ್ಷೆಯಲ್ಲಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ, ಟೀಮ್ ಇಂಡಿಯಾ ಈಗಿನ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ಹೆಚ್ಚಿನ ಓಟ್ ಪಡೆದುಕೊಂಡಿದ್ದಾರೆ.
ಸರ್ವೆಯ ವೇಳೆ 'ಭಾರತ' ವಿಭಾಗದಲ್ಲಿ ಧೋನಿ ಶೇ. 7.7 ಮತ ಪಡೆಯುವ ಮೂಲಕ ಹೆಚ್ಚು ಜನಪ್ರಿಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತದ ಪ್ರಧಾನಿ ನರೇಂದ್ರ ಮೋದಿ ಬಳಿಕ ದೇಶದ ಎರಡನೆಯ ಹೆಚ್ಚು ಜನಪ್ರಿಯ ವ್ಯಕ್ತಿಯಾಗಿ ದೋನಿ ಕಾಣಿಸಿಕೊಂಡಿದ್ದಾರೆ.
ಸರ್ವೆಯಲ್ಲಿ ಶೇ. 6.8 ಮತ ಪಡೆದಿರುವ ಸಚಿನ್, ಭಾರತದ ಜನಪ್ರಿಯ ಕ್ರೀಡಾಪಟುಗಳ ಸಾಲಿನಲ್ಲಿ ಎರಡನೆಯವರಾಗಿ ಗುರುತಿಸಿಕೊಂಡಿದ್ದಾರೆ. ಶೇ. 4.8 ಮತಗಳಿಂದ ಕೊಹ್ಲಿ ಈ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಧೋನಿ ಇತ್ತೀಚೆಗೆ ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಭಾರತದ ನಾಲ್ಕನೇ ಆಟಗಾರನಾಗಿ ಮತ್ತು ವಿಶ್ವದ 12ನೇ ಸಾಧಕನಾಗಿ ಗಮನ ಸೆಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications