ಎಂಎಸ್ ಧೋನಿ ನಾಯಕತ್ವ ವಹಿಸದ ಪಂದ್ಯಗಳಲ್ಲಿ ಸಿಎಸ್‌ಕೆ ಸೋಲು ಖಚಿತ?!

ಹೈದರಾಬಾದ್, ಏಪ್ರಿಲ್ 18: ಹೈದರಾಬಾದ್‌ನಲ್ಲಿ ಬುಧವಾರ (ಏಪ್ರಿಲ್ 17) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೈದಾನಕ್ಕಿಳಿಯುವಾಗ ಚೆನ್ನೈ ತಂಡದಲ್ಲಿ ನಾಯಕ ಎಂಎಸ್ ಧೋನಿ ಇರಲಿಲ್ಲ. ಸುಮಾರು 8-9 ವರ್ಷಗಳ ಬಳಿಕ ಸಿಎಸ್‌ಕೆ ನಾಯಕತ್ವದಿಂದ ಧೋನಿ ಹೊರಗುಳಿದಿದ್ದು ಇದೇ ಮೊದಲ ಪಂದ್ಯದಲ್ಲಿ.
ಬೆನ್ನು ನೋವಿನ ಕಾರಣ ಹೈದರಾಬಾದ್ ವಿರುದ್ಧ ಸಿಎಸ್‌ಕೆ ಆಡುವ 11 ಆಟಗಾರರ ತಂಡದಲ್ಲಿ ಧೋನಿ ಇರಲಿಲ್ಲ. ಐಪಿಎಲ್‌ನಲ್ಲಿ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡುವಾಗ ಮೈದಾನದಲ್ಲಿ ಧೋನಿ ಬೆನ್ನು ನೋವಿನಿಂದ ಬಳಲುತ್ತಿದ್ದುದು ವಿಡಿಯೋದಲ್ಲಿ ಕಾಣಸಿಕ್ಕಿತ್ತು.
ಧೋನಿ ನಾಯಕತ್ವ ಮತ್ತು ಸಿಎಸ್‌ಕೆ ಸೋಲು ಗೆಲುವಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಮಾಹಿತಿಗಳಿವೆ.

ಹೆಚ್ಚಿನ ಪಂದ್ಯಗಳಲ್ಲಿ ಸೋಲು
ಬುಧವಾರದ (ಏ.17) ಪಂದ್ಯಕ್ಕೂ ಮುನ್ನ ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಆಡಿದ್ದ 8ರಲ್ಲಿ 7 ಪಂದ್ಯಗಳನ್ನು ಗೆದ್ದಿತ್ತು. ಅಚ್ಚರಿಯೆಂದರೆ ಈ ಹಿಂದೆ ಧೋನಿ ನಾಯತ್ವ ವಹಿಸದ ಹೆಚ್ಚಿನ ಪಂದ್ಯಗಳಲ್ಲಿ ಸಿಎಸ್‌ಕೆ ಸೋತಿದ್ದೇ ಹೆಚ್ಚು. ಬುಧವಾರದ ಪಂದ್ಯವನ್ನೂ ಚೆನ್ನೈ 6 ವಿಕೆಟ್‌ಗಳಿಂದ ಸೋತಿತು.

ಕೇವಲ 133 ರನ್ ಗುರಿ
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಚೆನ್ನೈ ಬ್ಯಾಟಿಂಗ್ ವೈಫಲ್ಯ ತೋರಿಸಿತು. ಹೈದರಾಬಾದ್‌ಗೆ 133 ರನ್ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಹೈದರಾಬಾದ್, ಡೇವಿಡ್ ವಾರ್ನರ್-ಜಾನಿ ಬೇರ್ಸ್ಟೋವ್ ಅರ್ಧಶತಕದೊಂದಿಗೆ 137 ರನ್ ಬಾರಿಸಿತು. ಈ ಪಂದ್ಯದಲ್ಲಿ ಸುರೇಶ್ ರೈನಾ ನಾಯಕತ್ವ ವಹಿಸಿದ್ದರು.

ಒಂದೇ ಪಂದ್ಯದಲ್ಲಿ ಗೆಲುವು
ಈ ಹಿಂದೆ 19 ಮಾರ್ಚ್ 2010ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಸಿಎಸ್‌ಕೆ ಧೋನಿ ನಾಯಕತ್ವವಿಲ್ಲದೆ ಆಡಿ, 5 ವಿಕೆಟ್‌ಗಳಿಂದ ಗೆದ್ದಿತ್ತು. 21 ಮಾರ್ಚ್ 2010ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತಿತ್ತು. ಮಾರ್ಚ್ 23 ರಲ್ಲಿ ಬೆಂಗಳೂರು ವಿರುದ್ಧ 36 ರನ್‌ಗಳಿಂದ ಸಿಎಸ್‌ಕೆ ಪರಾಭವಗೊಂಡ ದಾಖಲೆಯಿದೆ.

ನಾಲ್ಕನೇ ಪಂದ್ಯದಲ್ಲೂ ಸೋಲು
ಬುಧವಾರದ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ ನಾಯಕತ್ವವಿಲ್ಲದೆ ಐಪಿಎಲ್‌ನಲ್ಲಿ ಆಡಿದ ನಾಲ್ಕನೇ ಪಂದ್ಯವಿದು. ಕಾಕತಾಳೀಯವೆಂದರೆ ಈ ನಾಲ್ಕು ಪಂದ್ಯಗಳಲ್ಲಿ ಸಿಎಸ್‌ಕೆ 3ರಲ್ಲಿ ಸೋತು, 1ರಲ್ಲಷ್ಟೇ ಗೆದ್ದಿದೆ. ಅಂದ್ಹಾಗೆ ಈ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ಇನ್ನೊಂದು ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications