ಐಪಿಎಲ್ 2025 ರ 38 ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಏಪ್ರಿಲ್ 20 ರ ಭಾನುವಾರದಂದು ಅಂದರೆ ಇಂದು ಸಂಜೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಒಂದು ಕೆಟ್ಟ ಸುದ್ದಿ ಬಂದಿದೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಎಂಎಸ್ ಧೋನಿ ಸಂಪೂರ್ಣವಾಗಿ ಫಿಟ್ ಆಗಿಲ್ಲದ ಕಾರಣ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಮೊಣಕೈ ಮುರಿತದಿಂದಾಗಿ ರುತುರಾಜ್ ಗಾಯಕ್ವಾಡ್ ಐಪಿಎಲ್ 2025 ರಿಂದ ಹೊರಗುಳಿದ ನಂತರ ಸಿಎಸ್‌ಕೆ ನಾಯಕನಾಗಿ ಎಂಎಸ್ ಧೋನಿ ಮರಳಿದ್ದಾರೆ.

ಎಂಎಸ್ ಧೋನಿ ಅಭ್ಯಾಸದ ಸಮಯದಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವುದು ಕಂಡುಬಂದಿದೆ. ಸಹಾಯಕ ಸಿಬ್ಬಂದಿಯೊಬ್ಬರು ಬೆನ್ನು ನೋವಿಗೆ ಚಿಕಿತ್ಸೆ ನೀಡುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೂ ಮುನ್ನ, ಅವರು ಕುಂಟುತ್ತಾ ನಡೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಲಕ್ನೋ ವಿರುದ್ಧದ ಕೊನೆಯ ಪಂದ್ಯದ ನಂತರ ಅವರು ಹೋಟೆಲ್‌ಗೆ ಹಿಂತಿರುಗುತ್ತಿದ್ದಾಗ ಸೆರೆ ಹಿಡಿಯಲಾಗಿತ್ತು.
ಒಂದು ವೇಳೆ ಎಂಎಸ್ ಧೋನಿ ಗಾಯದ ಕಾರಣದಿಂದಾಗಿ ಮುಂಬೈ ವಿರುದ್ಧ ಆಡದಿದ್ದರೆ, ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ರುತುರಾಜ್ ಗಾಯಕ್ವಾಡ್ ಔಟಾದ ನಂತರ, ಧೋನಿಗೆ ತಂಡದ ನಾಯಕತ್ವ ನೀಡಲಾಯಿತು. ಆದರೆ, ಈಗ ಧೋನಿ ಔಟಾದ ನಂತರ ತಂಡದ ನಾಯಕತ್ವ ಯಾರು ವಹಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸಿಎಸ್‌ಕೆ ತಂಡವನ್ನು ನೋಡಿದ ನಂತರ, ರವೀಂದ್ರ ಜಡೇಜಾ ನಾಯಕತ್ವ ವಹಿಸಿಕೊಳ್ಳಬಹುದು ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಧೋನಿ ನಂತರ ಅವರು ತಂಡದ ಅತ್ಯಂತ ಹಿರಿಯ ಆಟಗಾರ. ಅಲ್ಲದೆ, ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಕೂಡ ಇದ್ದಾರೆ.
41 ವರ್ಷದ ಎಂಎಸ್ ಧೋನಿ ಐಪಿಎಲ್ 2024 ರಲ್ಲಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನ ನಂತರ, ಕೋಚ್ ಸ್ಟೀಫನ್ ಫ್ಲೆಮಿಂಗ್, ಎಂಎಸ್ ಧೋನಿ 10 ಓವರ್‌ಗಳಿಗೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರ ಫಿಟ್‌ನೆಸ್ ಹಿಂದಿನಂತೆ ಇಲ್ಲ ಎಂದು ಹೇಳಿದ್ದರು.