For Quick Alerts
ALLOW NOTIFICATIONS  
For Daily Alerts
 

MS Dhoni: ಹಿಂದಿ, ಇಂಗ್ಲೀಷ್ ಅಲ್ಲ.. ಈ ಭಾಷೆಯಲ್ಲಿ ಕಮೆಂಟರಿ ಕೇಳೋಕೆ ಮಾಹಿಗೆ ಇಷ್ಟ

ಮಾರ್ಚ್‌ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ 18ನೇ ಆವೃತ್ತಿಯ ಐಪಿಎಲ್‌ಗೆ ಚಾಲನೆ ಸಿಕ್ಕಿತು. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಹಾಗೂ ಆರ್‌ಸಿಬಿ ತಂಡಗಳು ಕಾದಾಟ ನಡೆಸಿದವು. ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಆರ್‌ಸಿಬಿ ಅಮೋಘ ಜಯ ಸಾಧಿಸಿತು. ಇನ್ನು ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸಹ ಜಯ ಸಾಧಿಸಿವೆ. ಈ ಬಾರಿಯ ಐಪಿಎಲ್‌ನ ಮಜಾವನ್ನು ಸ್ಥಳೀಯ ಭಾಷೇಗಳಲ್ಲಿ ಪಡೆಯಬಹುದಾಗಿದೆ.

ಐಪಿಎಲ್‌ನಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಕೇಳಬಹುದು. ಈ ಒಂದು ಸಾಧನೆಗೆ ಹಲವು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈಗ ಈ ಸಾಲಿಗೆ ಮಹೇಂದ್ರ ಸಿಂಗ್ ಧೋನಿ ಸೇರಿಕೊಳ್ಳುತ್ತಾರೆ. ದಿಗ್ಗಜ ಕ್ರಿಕೆಟ್ ಆಟಗಾರ ಧೋನಿ, ಭೋಜ್‌ಪುರಿ ವೀಕ್ಷಕವಿವರಣೆಯನ್ನು ಶ್ಲಾಘಿಸಿದ್ದಾರೆ. 2023ರ ಐಪಿಎಲ್‌ನಲ್ಲಿ ಭೋಜ್‌ಪುರಿ ಕಾಮೆಂಟರಿ ಆರಂಭವಾಗಿದೆ. ಈ ಬಾರಿಯ ಐಪಿಎಲ್‌ 12 ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಸಹ ಕಮೆಂಟರಿ ಕೇಳುತ್ತಾರೆ. ಆದರೆ ಇವರು ಇಷ್ಟ ಪಟ್ಟುವ ಕೇಳುವ ಭಾಷೆ ಕೇಳಿದ್ರೆ ಅಚ್ಚರಿಯಾಗುತ್ತದೆ.

MS Dhoni Praises Bhojpuri Commentary Reveals His Favorite Language for IPL Broadcast

ಕಮೆಂಟರಿ ಬಗ್ಗೆ ಮಾಹಿ ಹೇಳಿದ್ದೇನು?

ನಾನು ಪ್ರಾದೇಶಿಕ ಭಾಷೆಯಲ್ಲಿ ಕಾಮೆಂಟರಿ ಹೆಚ್ಚಾಗಿ ಕೇಳಿಸಿಕೊಂಡಿಲ್ಲ. ಏಕೆಂದ್ರೆ ನಾವು ಲೈವ್ ಪಂದ್ಯಗಳನ್ನು ನೋಡುತ್ತಿದ್ದಾಗ, ಹೆಚ್ಚಾಗಿ ವೀಕ್ಷಕ ವಿವರಣೆ ಇಂಗ್ಲೀಷ್‌ ಹಾಗೂ ಹಿಂದಿಯಲ್ಲೇ ಇರುತ್ತಿತ್ತು. ಅಸಲಿಗೆ ನನಗೆ ಕಾಂಮೆಟರಿ ಮಾಡುವವರ ಮಾತುಗಳನ್ನು ಕೇಳಲು ಆನಂದ ಸಿಗುತ್ತದೆ.

ಏಕೆಂದ್ರೆ ಈ ವೀಕ್ಷಕ ವಿವರಣೆಯನ್ನು ಹೆಚ್ಚಾಗಿ ಮಾಜಿ ಆಟಗಾರರು ಇರುತ್ತಾರೆ. ನಾನು ಒಂದು ಋತುವಿನಲ್ಲಿ 17 ಪಂದ್ಯಗಳನ್ನು ಆಡಬಹುದು. ಆದರೆ ಅವರು ಬೇರೆ ಬೇರೆ ಟೂರ್ನಿಗಳಲ್ಲಿ, ಬೇರೆ ಬೇರೆ ದೇಶಗಳಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ಸಾಕಷ್ಟು ಪಂದ್ಯಗಳನ್ನು ಕವರ್ ಮಾಡುತ್ತಾರೆ. ವಾತಾವರಣ ಹಾಗೂ ತಂಡಗಳ ಬಗ್ಗೆ ಅವರ ಅನುಭವ ದೊಡ್ಡದಾಗಿರುತ್ತದೆ ಎಂದು ಧೋನಿ ತಿಳಿಸಿದ್ದಾರೆ.

MS Dhoni Praises Bhojpuri Commentary Reveals His Favorite Language for IPL Broadcast

ಯಾವ ಭಾಷೆಯಲ್ಲಿ ಕೇಳುವುದು ಮಾಹಿಗೆ ಇಷ್ಟ?

"ಒಬ್ಬ ಆಟಗಾರನಾಗಿ ನಮ್ಮ ತಂಡದ ಬಲ ಹಾಗೂ ದೌರ್ಬಲ್ಯಗಳು ತಿಳಿದಿರುತ್ತವೆ. ಇನ್ನು ಕಮೆಂಟರಿ ಕೇಳುವುದರಿಂದ ಹೊರಗಿನ ಜಗತ್ತಿನ ಪರಿಚಯವೂ ಆಗುತ್ತದೆ. ಇದರಿಂದ ಹೊಸ ವಿಚಾರಗಳು ತಿಳಿಯುತ್ತವೆ" ಎಂದು ಮಾಹಿ ಹೇಳಿದ್ದಾರೆ.

ನಾನು ಈ ಮೊದಲೇ ಹೇಳಿದಂತೆ ಪ್ರಾದೇಶಿಕ ವೀಕ್ಷಕ ವಿವರಣೆಯನ್ನು ಕೇಳಿಲ್ಲ. ಆದರೆ ಈಗಿನ ಯುವ ಜನತೆ ತಮ್ಮದೇ ಆದ ಭಾಷೆಯಲ್ಲಿ ಕಮೆಂಟರಿಯಲ್ಲಿ ಕೇಳಲು ಬಯಸುತ್ತಾರೆ. ನಾನು ಹರಿಯಾಣಾ ಕಮೆಂಟರಿ ಕೇಳಲು ಇಷ್ಟ ಪಡುತ್ತೇನೆ. ಈ ಕಮೆಂಟರಿ ವಿಶಿಷ್ಟವಾಗಿದೆ ಎಂದು ಧೋನಿ ಜೀ ಹಾಟ್‌ಸ್ಟಾರ್‌ನ 'ದಿ ಎಂಎಸ್ ಧೋನಿ ಎಕ್ಸ್‌ಪೀರಿಯೆನ್ಸ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Story first published: Monday, March 24, 2025, 16:37 [IST]
Other articles published on Mar 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+