Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂ.ಎಸ್‌ ಧೋನಿ ಕುರಿತಾಗಿ ಬ್ರೆಂಡನ್‌ ಮೆಕಲಮ್‌ ಹೇಳಿದ್ದೇನು?

ಧೋನಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಮೆಕಲಮ್..! | Oneindia Kannada
MS Dhoni puts opposition under pressure: McCullum

ಮುಂಬೈ, ಮೇ 19: ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಮಾತ್ರವೇ ಬಾಕಿ ಇದೆ. ಅಂದಹಾಗೆ ಭಾರತ ತಂಡಕ್ಕೆ ಟಿ20 ಮತ್ತು ಒಡಿಐ ಎರಡರಲ್ಲೂ ವಿಶ್ವಕಪ್‌ ಗೆದ್ದುಕೊಟ್ಟ ಮಹೇಂದ್ರ ಸಿಂಗ್‌ ಧೋನಿ ತಮ್ಮ ವೃತ್ತಿ ಬದುಕಿನ ಕೊನೆಯ ವಿಶ್ವಕಪ್‌ ಟೂರ್ನಿಯನ್ನಾಡುತ್ತಿರುವುದು ವಿಶೇಷ.

ಇನ್ನು ಈ ಕುರಿತಾಗಿ ಕ್ರಿಕೆಟ್‌ ಪಂಡಿತರು ಹೇಳುವುದೇನೆಂದರೆ, ವಿರಾಟ್‌ ಕೊಹ್ಲಿ ಸಾರಥ್ಯದ ಟೀಮ್‌ ಇಂಡಿಯಾ ಈ ಬಾರಿ ಪ್ರಶಸ್ತಿ ಗೆಲ್ಲುವುದಾದರೆ ಅದರ ಹಿಂದೆ ಧೋನಿ ಅವರ ಪಾತ್ರ ಮಹತ್ವದ್ದಾಗಿರುತ್ತದೆ. ಕೆಲವರು ಧೋನಿ ಟೀಮ್‌ ಇಂಡಿಯಾದ ಪ್ರಮುಖ ಅಸ್ತ್ರ ಎಂದೇ ಹೇಳಿದ್ದಾರೆ.

ಕಳೆದ ಆವೃತ್ತಿಯಲ್ಲಿ ತಮ್ಮ ನಾಯಕತ್ವದಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ರನ್ನರ್ಸ್‌ಅಪ್‌ ಸ್ಥಾನ ತಂದುಕೊಟ್ಟ ಕಿವೀಸ್‌ ಪಡೆಯ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌ ಅವರದ್ದು ಕೂಡ ಇದೇ ಅಭಿಪ್ರಾಯವಾಗಿದೆ.

"ಟೀಮ್‌ ಇಂಡಿಯಾದಲ್ಲಿ ಇರುವ ಅತ್ಯಂತ ಬೆಲೆಬಾಳುವಂತಹ ಆಟಗಾರ. ಪಂದ್ಯದಲ್ಲಿ ಯಾವ ರೀತಿಯಲ್ಲಿ ಮುನ್ನಡೆಯಬೇಕು ಎಂಬುದರ ನೀಲಿ ನಕ್ಷ್ಯೆ ಧೋನಿ ಅವರ ತಲೆಯಲ್ಲಿರುತ್ತದೆ. ಕ್ರೀಸ್‌ಗೆ ಬಂದು ಪಂದ್ಯದ ಸ್ಥಿತಿಗತಿನ್ನು ಅರಿಯುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರುವುದು ಧೋನಿ ಅವರ ವಿಶೇಷತೆ. ಅವರ ಫಿಟ್ನೆಸ್‌ ಕೂಡ ಅದ್ಭುತವಾಗಿದೆ,'' ಎಂದು ಬ್ರೆಂಡನ್‌ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಇದೇ ವೇಳೆ ಧೋನಿ ಅವರ ಇತ್ತೀಚಿನ ಲಯದ ಕುರಿತಾಗಿ ಮಾತನಾಡಿರುವ ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌, "ಯಾವುದೇ ಸಂದರ್ಭದಲ್ಲಿ ಸಂಯಮ ಕಾಯ್ದುಕೊಳ್ಳುವುದು ಸಮಾರ್ಥ್ಯ ಪಂದ್ಯದಲ್ಲಿ ಮುಂದೆ ಏನಾಗಬಹುದು ಎಂಬುದರ ಅರಿವು ಹೊಂದಲು ಧೋನಿಗೆ ನೆರವಾಗುತ್ತದೆ. ಇತ್ತೀಚಿನ ಐಪಿಎಲ್‌ನಲ್ಲಿ ಧೋನಿ ತಮ್ಮ ಬ್ಯಾಟಿಂಗ್‌ ವೈಭವವನ್ನು ಮರಳಿ ಕಂಡುಕೊಂಡಿದ್ದಾರೆ. ಜಗತ್ತಿನ ಯಾವುದೇ ಬೌಲಿಂಗ್‌ ದಾಳಿಯನ್ನು ಅವರು ದಿಟ್ಟವಾಗಿ ಎದುರಿಸಬಲ್ಲರು,'' ಎಂದಿದ್ದಾರೆ.

ಇತ್ತೀಚೆಗೆ ಅಂತ್ಯಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಧೋನಿ ಆಡಿದ 15 ಪಂದ್ಯಗಳಿಂದ 416 ರನ್‌ಗಳನ್ನು ಚಚ್ಚಿದ್ದರು. ಅಲ್ಲದೆ ವಿಕೆಟ್‌ ಹಿಂಬದಿಯಲ್ಲೂ ಮಿಂಚಿನ ಸ್ಟಂಪಿಂಗ್‌ ಮೂಲಕ ಗಮನ ಸೆಳೆದಿದ್ದರು.

Story first published: Sunday, May 19, 2019, 19:48 [IST]
Other articles published on May 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+