'ಒಡಿಐ ಸಿಕ್ಸರ್' ಸರದಾರ ಧೋನಿ 'ಸ್ಲೋ ಫಿಫ್ಟಿ' ದಾಖಲೆ
ಆಂಟಿಗುವಾ, ಜುಲೈ 03 : ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇತ್ತೀಚೆಗೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಬರೆದ ಎಂಎಸ್ ಧೋನಿ ಅವರು ಮತ್ತೊಂದು ದಾಖಲೆ ಕೆತ್ತಿದ್ದಾರೆ. ಆದರೆ, ಈ ಬಾರಿ ಅತ್ಯಂತ ನಿಧಾನಗತಿಯಲ್ಲಿ ಅರ್ಧಶತಕ ಬಾರಿಸಿದ ಪಟ್ಟಿ ಸೇರಿದ್ದಾರೆ.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಭಾನುವಾರದಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಧೋನಿ ಅವರು ಈ ರೀತಿ ಬೇಡದ ದಾಖಲೆಯನ್ನು ಬರೆದಿದ್ದಾರೆ. ವೈಯಕ್ತಿಕವಾಗಿ ಅತ್ಯಂತ ನಿಧಾನಗತಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ನಾಲ್ಕನೇ ಪಂದ್ಯದಲ್ಲಿ 108 ಎಸೆತಗಳಲ್ಲಿ 46.30 ಸ್ಟ್ರೈಕ್ ರೇಟ್ ನಂತೆ ಅರ್ಧಶತಕ ಬಾರಿಸಿದ ಧೋನಿ ಕೊನೆಗೆ 114 ಎಸೆತಗಳಲ್ಲಿ 54ರನ್ ಗಳಿಸಿದರೂ ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. 190ರನ್ ಚೇಸ್ ಮಾಡಿದ ಭಾರತ, 178ಸ್ಕೋರಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ ಅತಿ ನಿಧಾನವಾಗಿ ಅರ್ಧಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಕುಖ್ಯಾತಿಗೆ ಧೋನಿ ಒಳಗಾಗಿದ್ದಾರೆ. ಮೊದಲ ಸ್ಥಾನದಲ್ಲಿ ಶಡಗೋಪನ್ ರಮೇಶ್ ಇದ್ದಾರೆ.
1999ರಲ್ಲಿ ಕೀನ್ಯಾ ತಂಡದ ವಿರುದ್ಧ ಶಡಗೋಪನ್ ರಮೇಶ್ ಅವರು 117 ಎಸೆತಗಳನ್ನು ಎದುರಿಸಿ
ಅರ್ಧಶತಕ ಗಳಿಸಿ ಹೊಸ ದಾಖಲೆ ಬರೆದಿದ್ದರು. ಇದಾದ ಬಳಿಕ 2005ರಲ್ಲಿ ಸೌರವ್ ಗಂಗೂಲಿ ಅವರು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 105 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಈಗ ಧೋನಿ ಅವರು ಗಂಗೂಲಿಯನ್ನು ಹಿಂದಿಕ್ಕಿ, ಎರಡನೇ ಸ್ಥಾನಕ್ಕೇರಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Dhoni slams slowest ODI fifty
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications