ಕೊಹ್ಲಿ ಪ್ರಾರಂಭಿಸಿದ ರೂಮರ್‌ಗೆ ಸಾಕ್ಷಿ ಸಿಂಗ್ ಧೋನಿ ಹಾಡಿದರು ಅಂತ್ಯ

ಬೆಂಗಳೂರು, ಸೆಪ್ಟೆಂಬರ್ 12: ಇಂದು ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಒಂದೇ ಚರ್ಚೆ 'ಧೋನಿ ನಿವೃತ್ತಿ ಪಡೆಯುತ್ತಾರಂತೆ' ಎಂಬುದು. ಈ ಸುದ್ದಿ ಹರಡಲು ಕಾರಣವಾಗಿದ್ದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ.
ಆದರೆ ಧೋನಿ ನಿವೃತ್ತರಾಗುತ್ತಾರೆ ಎಂಬ ಸುದ್ದಿಗೆ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಟ್ವಿಟ್ಟರ್‌ನಲ್ಲಿ ಉತ್ತರ ಕೊಟ್ಟಿದ್ದು, 'ಅದೊಂದು ಸುಳ್ಳು ಸುದ್ದಿ' ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸುಳ್ಳು ಸುದ್ದಿಗೆ ಮೂಲ ಕೊಹ್ಲಿ ಇಂದು ಬೆಳಿಗ್ಗೆ ಮಾಡಿದ ಟ್ವೀಟ್. ಬೆಳಿಗ್ಗೆ 11 ಗಂಟೆ ಸುಮಾರಿಗೆ ಧೋನಿ ಮತ್ತು ತಾವಿದ್ದ ಚಿತ್ರವನ್ನು ಟ್ವೀಟ್ ಮಾಡಿ, 'ಈ ಮ್ಯಾಚ್ ಅನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ವಿಶೇಷವಾದ ರಾತ್ರಿ ಅದು, ಅಂದು ನಾನು ಫಿಟ್‌ನೆಸ್ ಟೆಸ್ಟ್‌ಗೆ ಓಡುವಂತೆ ಮಾಡಿದ್ದರು' ಎಂದು ಅವರು ಹೇಳಿದರು.
ಕೊಹ್ಲಿ ಟ್ವೀಟಿಸಿದ್ದ ಚಿತ್ರ ಧೋನಿ ನಿವೃತ್ತಿ ಪಡೆಯಲಿದ್ದಾರೆ ಎಂಬ ಅನುಮಾನ ಹುಟ್ಟಲು ಕಾರಣವಾಗಿತ್ತು. ಚಿತ್ರದಲ್ಲಿ ಧೋನಿ ಹಿಂಬದಿಯಿಂದ ಕಾಣುತ್ತಿದ್ದು, ಅವರ ಮುಂದೆ ಕೊಹ್ಲಿ ಮಂಡಿ ಊರಿ ಕೂತಿರುವ ಚಿತ್ರ ಅದು ಈ ಚಿತ್ರದಿಂದಲೇ ಧೋನಿ ಅವರು ನಿವೃತ್ತರಾಗಬಹುದು ಎಂಬ ಅನುಮಾನ ಮೂಡಿತ್ತು.
ಆದರೆ ಸಾಕ್ಷಿ ಸಿಂಗ್ ಧೋನಿ ಅವರು ಸಂಜೆ ವೇಳೆಗೆ ಸುದ್ದಿಯ ಬಗ್ಗೆ ಟ್ವೀಟ್ ಮಾಡಿ 'ಇದೊಂದು ಸುಳ್ಳು ಸುದ್ದಿ' ಎಂದು ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications